ಬೆಂಗಳೂರು, ಜನವರಿ 17: ಆರು ನಾಯಿಮರಿಗಳ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾದ ಪ್ರಕರಣ ಒಂದರಲ್ಲಿ 72 ವರ್ಷದ ವೃದ್ಧೆಗೆ 47 ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ ದಂಡ ಮೊತ್ತವನ್ನು ಹೆಚ್ಚಿಸುವಂತೆ ಕೋರಲಾಗಿದ್ದ ಮನವಿಯನ್ನು ಹೈಕೋರ್ಟ್ (High Court) ವಜಾಗೊಳಿಸಿದೆ. ಮಹಿಳೆಯ ಮನೆ ಮುಂದೆ ಬೀದಿನಾಯಿ 8 ಮರಿ ಹಾಕಿತ್ತು. ನಾಯಿಗಳ ಶಬ್ದ ಸಹಿಸದೇ ಮಹಿಳೆ ಮರಿಗಳನ್ನು ಬೇರೆಡೆ ಬಿಟ್ಟಿದ್ದರು. ತಾಯಿಯಿಂದ ದೂರವಾದ ನಾಯಿಮರಿಗಳು ಆಹಾರವಿಲ್ಲದೇ ಮೃತಪಟ್ಟಿದ್ದವು.
ಈ ಹಿನ್ನೆಲೆಯಲ್ಲಿ ಪೊನ್ನಮ್ಮ ವಿರುದ್ಧ ಪ್ರಾಣಿ ಕಲ್ಯಾಣ ಅಧಿಕಾರಿ ಹೆಚ್.ಬಿ.ಹರೀಶ್ ಕೇಸ್ ದಾಖಲಿಸಿದ್ದರು. ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಕೋರ್ಟ್ನಲ್ಲಿ ತಪ್ಪೊಪ್ಪಿಕೊಂಡ ಮಹಿಳೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 1 ಸಾವಿರ ರೂ. ದಂಡ ವಿಧಿಸಿ ಬಿಡುಗಡೆ ಮಾಡಿತ್ತು. ಶಿಕ್ಷೆ ಹೆಚ್ಚಳ ಕೋರಿ ದೂರುದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಪರಾಧಿಗೆ ದಂಡ ಹೆಚ್ಚಳಕ್ಕೆ ನ್ಯಾಯಮೂರ್ತಿ ಜೆ.ಎಂ.ಖಾಜಿ ನಕಾರವೆತ್ತಿದ್ದಾರೆ.
ಕಲಬುರಗಿ: ನಗರದಲ್ಲಿ ಬಿದಿ ನಾಯಿಗಳ ಹಾವಳಿ ಮಂದುವರೆದಿದ್ದು, ಒಂದು ವಾರ ಕಳೆಯುವಷ್ಟರಲ್ಲಿ ಮತ್ತೊಂದು ಮಗುವಿನ ಮೇಲೆ ಬೀದಿ ನಾಯಿಗಳು ಮಾರಾಣಾಂತಿಕ ದಾಳಿ ಮಾಡಿರುವಂತಹ ಘಟನೆ ಇತ್ತೀಚಿಗೆ ತವಡವಾಗಿ ಬೆಳಕಿಗೆ ಬಂದಿತ್ತು. ಕಳೆದ ಮೂರು ದಿನಗಳ ಹಿಂದೆ ಕಲಬುರಗಿಯ ಮಿಸ್ಬಾ ನಗರದಲ್ಲಿ ಐದು ವರ್ಷದ ಬಾಲಕನ ಮೇಲೆ ದಾಳಿ ಮಾಡಿತ್ತು. ಹಾಲು ತರಲು ಅಂಗಡಿಗೆ ಹೋಗಿದ್ದ ರಶೀದ್ ಅಶ್ಫಕ್ (5) ಎಂಬ ಕಂದಮ್ಮನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು.
ಇದನ್ನೂ ಓದಿ: ಕಲಬುರಗಿ: ಮಿಸ್ಬಾನಗರದಲ್ಲಿ ಐದು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ!
ಕಂದಮ್ಮ ಸ್ಥಳೀಯರ ಸಹಾಯದಿಂದ ಬಚಾವ್ ಆಗಿತ್ತು. ಸದ್ಯ ಮತ್ತೊಮ್ಮೆ ಸ್ಥಳೀಯರು ಬಿದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕದ ಕಲಬುರಗಿ ಮಹಾನಗರ ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಯಾಕೆಂದರೆ ಕಳೆದವಾರ ಇದೇ ಏರಿಯಾದಲ್ಲಿ ಆರು ವರ್ಷದ ಬಾಲಕಿ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದವು.
ಇದನ್ನೂ ಓದಿ: ರಾಯಚೂರು: ತಾಯಿ, ಮಗನ ಮೇಲೆ ಬೀದಿ ನಾಯಿ ದಾಳಿ; ಭಯ ಹುಟ್ಟಿಸುತ್ತೆ ಸಿಸಿಟಿವಿ ದೃಶ್ಯ
ಸ್ವಲ್ಲದರಲ್ಲೆ ಅದೃಷ್ಟವಶಾತ್ ಕಂದಮ್ಮ ಬದುಕುಳಿದಿತ್ತು. ಆವತ್ತು ಪಾಲಿಕೆ ಸಾಮನ್ಯ ಸಭೆಯಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿತ್ತು. ಗಲಾಟೆಯಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕುವ ವಾಗ್ದಾನ ನೀಡಿದ್ದರು. ಆದರೂ ಒಂದು ಕಳೆಯುವಷ್ಟರಲ್ಲಿ ಮತ್ತೊಮ್ಮೆ ಅದೇ ಏರಿಯಾದಲ್ಲಿ ದಾಳಿಯಾಗಿದ್ದು, ಪಾಲಿಕೆ ಅಧಿಕಾರಿಗಳ ಕಾರ್ಯವೈಕರಿಯನ್ನ ಎತ್ತಿ ತೋರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.