Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ತಾಯಿ, ಮಗನ ಮೇಲೆ ಬೀದಿ ನಾಯಿ ದಾಳಿ; ಭಯ ಹುಟ್ಟಿಸುತ್ತೆ ಸಿಸಿಟಿವಿ ದೃಶ್ಯ

ರಾಯಚೂರು: ತಾಯಿ, ಮಗನ ಮೇಲೆ ಬೀದಿ ನಾಯಿ ದಾಳಿ; ಭಯ ಹುಟ್ಟಿಸುತ್ತೆ ಸಿಸಿಟಿವಿ ದೃಶ್ಯ

ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on: Jan 07, 2024 | 11:44 AM

ಜನವರಿ‌ 04ರ ಸಂಜೆ ಆಸ್ಪತ್ರೆಗೆಂದು ಗಂಗಮ್ಮ ಹಾಗೂ ಪ್ರೀತಂ ಆದರ್ಶ ಕಾಲೋನಿಗೆ ಹೋಗಿದ್ದರು. ಈ ವೇಳೆ ಮಗ ಪ್ರೀತಂ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ನಾಯಿ ದಾಳಿಯಿಂದ ಮಗನನ್ನ ರಕ್ಷಿಸಲು ಹೋದ ತಾಯಿ ಗಂಗಮ್ಮ ಅವರಿಗೂ ಬೀದಿ ನಾಯಿ ಕಚ್ಚಿ ಗಾಯ ಮಾಡಿದೆ.

ರಾಯಚೂರು, ಜ.07: ಜ.4ರ ಸಂಜೆ ಆಸ್ಪತ್ರೆಗೆಂದು ಹೋಗಿದ್ದ ತಾಯಿ, ಮಗನ ಮೇಲೆ ಬೀದಿ ನಾಯಿ ದಾಳಿ (Stray Dog Attack) ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ತಾಯಿ ಗಂಗಮ್ಮ(36), ಮಗ ಪ್ರೀತಂ(15) ಮೇಲೆ ಬೀದಿ ನಾಯಿ ದಾಳಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೈ ನಡುಗಿಸುವಂತಿದೆ.

ಜನವರಿ‌ 04ರ ಸಂಜೆ ಆಸ್ಪತ್ರೆಗೆಂದು ಗಂಗಮ್ಮ ಹಾಗೂ ಪ್ರೀತಂ ಆದರ್ಶ ಕಾಲೋನಿಗೆ ಹೋಗಿದ್ದರು. ಈ ವೇಳೆ ಮಗ ಪ್ರೀತಂ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ನಾಯಿ ದಾಳಿಯಿಂದ ಮಗನನ್ನ ರಕ್ಷಿಸಲು ಹೋದ ತಾಯಿ ಗಂಗಮ್ಮ ಅವರಿಗೂ ಬೀದಿ ನಾಯಿ ಕಚ್ಚಿ ಗಾಯ ಮಾಡಿದೆ. ಮಗನ ಮೇಲೆ ಎರಗಿದ ನಾಯಿಯನ್ನು ಗಗಮ್ಮ ಅವರು ಹಿಡಿದು ಎಳೆದಾಡಿ ಬಿಡಿಸಲು ಪ್ರಯತ್ನಿಸಿದ್ದಾಳೆ. ಆಗ ಅಕ್ಕಪಕ್ಕದ ಜನರೆಲ್ಲ ಬಂದು ನಾಯಿಯನ್ನು ಓಡಿಸಿದ್ದಾರೆ. ಸದ್ಯ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ತಾಯಿ-ಮಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆದರೆ ಬೀದಿ ನಾಯಿ ದಾಳಿಯ ದೃಶ್ಯ ಬೆಚ್ಚಿಬೀಳುವಂತಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ