ಬೆಂಗಳೂರು: ಅರೋಪಿಯನ್ನು ಅರೆಸ್ಟ್ ಮಾಡಲು ತೆರಳಿದ್ದ ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ (ಪಿಎಸ್ಐ) ಚಾಕುವಿನಿಂದ ಇರಿದ ಘಟನೆ ನಡೆದಿದೆ. ಯಶವಂತಪುರ ಠಾಣೆ ಪಿಎಸ್ಐ ವಿನೋದ್ ರಾಥೋಡ್ ಚಾಕು ಇರಿತಕ್ಕೆ ಒಳಗಾದ ಅಧಿಕಾರಿ. ಪಿಎಸ್ಐ ವಿನೋದ್ ಅವರನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಿಎಸ್ಐ ವಿನೋದ್ಗೆ ಚಾಕು ಇರಿದು ಅರೋಪಿ ಪರಾರಿಯಾಗಿದ್ದಾನೆ. ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪೊಲೀಸರೇ ಮದ್ಯ ಸೇವನೆ ಮಾಡಿದ್ದಾರೆಂದು ಮದ್ಯ ಸೇವಿಸಿದ್ದ ಇಬ್ಬರು ಯುವಕರಿಂದ ರಾದ್ಧಾಂತ
ಬೆಂಗಳೂರಲ್ಲಿ ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಪೊಲೀಸರಿಂದ ವಾಹನಗಳ ತಪಾಸಣೆ ನಡೆದಿತ್ತು. ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿರುವ ಪೊಲೀಸರು ಮದ್ಯಪಾನ ಮಾಡಿ ಬೈಕ್ ಓಡಿಸ್ತಿದ್ದವನ ಬೈಕ್ ಸೀಜ್ ಮಾಡಿದ್ದರು. ಅದಾದ ಬಳಿಕ ಒಂದು ಹಂತದಲ್ಲಿ ಟ್ರಾಫಿಕ್ ಪೊಲೀಸರಿಗೆ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಿಸಿದ ಕುಡುಕರು ಸ್ವತಃ ಪೊಲೀಸರಿಂದಲೇ ಆಲ್ಕೋಮೀಟರ್ ಊದಿಸಿದ್ದಾರೆ.
ಕುಡುಕರು ನಾವು ಕುಡಿದಿಲ್ಲ, ನೀವೇ ಕುಡಿದು ನಮಗೆ ಫೈನ್ ಹಾಕ್ತಿದ್ದಿರಾ ಎಂದು ರಂಪಾಟ ಮಾಡಿದ್ದಾರೆ. ಮೊದಲು ನೀವು ಆಲ್ಕೋಮೀಟರ್ ನಲ್ಲಿ ಊದಿ. ಊದಿದ ನಂತರ ನಮಗೆ ತೋರಿಸಿ ಎಂದು ರಂಪಾಟ ಮಾಡಿದ್ದಾರೆ. ಪೊಲೀಸರ ಆಲ್ಕೋಮೀಟರ್ ಅನ್ನೇ ಪಡೆದು ತಪಾಸಣೆ ಮಾಡಿದ್ದಾರೆ. ಪೊಲೀಸರೇ ಕುಡಿದುಕೊಂಡು ಬಂದು ಬೇರೆಯವರಿಗೆ ಅಡ್ಡ ಹಾಕ್ತಾರೆ ಎಂದೂ ಧಿಮಾಕು ಮಾಡಿದ್ದಾರೆ. ಡಿಡಿ ಕೇಸ್ ಹಾಕಿದ್ದಕ್ಕೆ ಪೊಲೀಸರ ಜೊತೆಗೆ ಪುಂಡಾಟ ಮಾಡಿದ್ದಾರೆ. ಕೊನೆಗೆ ಸವಾರರನ್ನು ಹೊಯ್ಸಳ ಕಾರಿನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೇಗೂರು ಬಳಿ ಸರಣಿ ಅಪಘಾತ, ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮ ಬೇಗೂರು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತಗಳು ಸಂಭವಿಸಿವೆ. ಘಟನೆಯಲ್ಲಿ ಒಂದು ಎರಡು ಬಸ್, ಎರಡು ಲಾರಿ, ಒಂದು ಬುಲೆರೋ ನಡುವೆ ಅಪಘಾತಗಳಾಗಿವೆ. ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ. ಸರಣಿ ಅಪಘಾತ ಹಿನ್ನೆಲೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಶುಸಂಗೋಪನೆ ವೈದ್ಯಾಧಿಕಾರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ:
ತುಮಕೂರು: ಮೃತಪಟ್ಟಿದ್ದ ಹಸುವಿಗೆ ಇನ್ಶುರೆನ್ಸ್ ಕ್ಲೈಮ್ ಮಾಡಲು ₹3,000 ಲಂಚ ಪಡೆದಿದ್ದ ಹಿನ್ನೆಲೆ ಪಶು ವಿಭಾಗದ ಉಪ ವ್ಯವಸ್ಥಾಪಕ ಡಾ.ವೈ.ಎಲ್ ದೇವರಾಜುಗೆ 4 ವರ್ಷ ಜೈಲು, 20,000 ರೂಪಾಯಿ ದಂಡ ವಿಧಿಸಿ, ತುಮಕೂರು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಸುಧೀಂದ್ರ ನಾಥ್ ಆದೇಶ ನೀಡಿದ್ದಾರೆ. ಮೃತ ಪಟ್ಟಿದ್ದ ಹಸುವಿಗೆ ಇನ್ಶುರೆನ್ಸ್ ಕ್ಲೈಮ್ ಮಾಡಲು 3000 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸರ್ಕಾರಿ ವಕೀಲ ಎನ್. ಬಸವರಾಜು ವಾದ ಮಂಡಿಸಿದ್ದರು.
Published On - 7:47 am, Thu, 30 December 21