ಕೆಆರ್ ಪುರ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು ಓಡುವಾಗ ಸ್ಕೈವಾಕ್​ನಿಂದ ಜಿಗಿದ ಅರೋಪಿಗೆ ಕಾರು ಡಿಕ್ಕಿ, ಸಾವು

| Updated By: ಸಾಧು ಶ್ರೀನಾಥ್​

Updated on: Dec 21, 2021 | 9:20 AM

ಪೊಲೀಸರು ಚೇಸ್ ಮಾಡುವ ವೇಳೆ ರಸ್ತೆ ದಾಟಿ ಓಡಲು ಯತ್ನಿಸಿದ್ದ ಶಕ್ತಿವೇಲು. ಈ ವೇಳೆ ಲಾರಿಯೊಂದಕ್ಕೆ ಸಿಕ್ಕಿಹಾಕಿಕೊಳ್ಳಬೇಕಿತ್ತು. ಲಾರಿಯಿಂದ ಜಸ್ಟ್ ಮಿಸ್ ಅಗಿದ್ದಾನೆ ಅರೋಪಿ. ಬಳಿಕ ಅಲ್ಲಿಯೇ ಮುಂದೆ ಇದ್ದ ಸ್ಕೈ ವಾಕ್ ಹತ್ತಿದ್ದಾನೆ. ಬಳಿಕ ಸ್ಕೈ ವಾಕ್ ನಿಂದ ಕೆಳಗೆ ಜಿಗಿದುರೊ ಅರೋಪಿ ಶಕ್ತಿವೇಲುಗೆ ಕಾರು ಡಿಕ್ಕಿಯಾಗಿದೆ.

ಕೆಆರ್ ಪುರ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು ಓಡುವಾಗ ಸ್ಕೈವಾಕ್​ನಿಂದ ಜಿಗಿದ ಅರೋಪಿಗೆ ಕಾರು ಡಿಕ್ಕಿ, ಸಾವು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕೆಆರ್ ಪುರ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು ಓಡುವಾಗ ಸ್ಕೈವಾಕ್​ನಿಂದ ಜಿಗಿದ ಅರೋಪಿ ಕಾರಿಗೆ ಸಿಲುಕಿ ಸಾಗಿಗೀಡಾಗಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆರೋಪಿ ಪತಿಯನ್ನು ಕೆ ಆರ್ ಪುರ ಪೊಲೀಸರು ಬಂಧಿಸಿದ್ದರು. ಆರೋಪಿ ಶಕ್ತಿವೇಲು ಪೊಲೀಸ್ ಠಾಣೆಯಿಂದ ನಿನ್ನೆ ಬೆಳಗ್ಗೆ 5:54 ಕ್ಕೆ ಎಸ್ಕೇಪ್ ಅಗಿದ್ದ. ಅರೋಪಿ ಎಸ್ಕೇಪ್ ಅಗಿ ಓಡುತ್ತಿರೊ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅರೋಪಿ ಓಡಿ ಹೋದ 30 ಸೆಕೆಂಡ್ ನಂತರ ಪೊಲೀಸರು ಫಾಲೊ ಮಾಡಿದ್ದಾರೆ. ಪೊಲೀಸರು ಅರೋಪಿ ಹಿಂದೆ ಓಡುತ್ತಿರೊ ದೃಶ್ಯ ಸಹ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಶಕ್ತಿವೇಲು ಪತ್ನಿ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಗೆ ಶಕ್ತಿವೇಲು ಕಾರಣ ಎಂದು ಆಕೆಯ ಕುಟುಂಬಸ್ಥರು ದೂರಿದ್ದರು. ಶಕ್ತಿವೇಲು ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಸಂಗೀತ ಆತ್ಮಹತ್ಯೆ ಮಾಡಿಕೊಂಡಿದ್ದಳು. ದೂರಿನ ಅನ್ವಯ ಕೇಸ್ ದಾಖಲು ಮಾಡಿ ಶಕ್ತಿವೇಲುನನ್ನು ಕೆ ಆರ್ ಪುರ ಪೊಲೀಸರು ವಶಕ್ಕೆ ಪಡೆದು, ಅರೆಸ್ಟ್ ಮಾಡಿದ್ದರು. ಆದರೆ ನಿನ್ನೆ ಬೆಳಗ್ಗೆ ಮೂತ್ರ ವಿಸರ್ಜನೆಗೆ ಹೋಗ್ತೀನಿ ಎಂದು ಹೇಳಿದ್ದ ಶಕ್ತಿವೇಲು. ಬಳಿಕ ಠಾಣೆಯ ಒಬ್ಬ ಸಿಬ್ಬಂದಿಯನ್ನು ತಳ್ಳಿ, ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಈ ವೇಳೆ ಶಕ್ತಿವೇಲುನನ್ನು ಕೆ ಆರ್ ಪುರ ಪೊಲೀಸರು ಹಿಂಬಾಲಿಸಿದ್ದರು.

ಪೊಲೀಸರು ಚೇಸ್ ಮಾಡುವ ವೇಳೆ ರಸ್ತೆ ದಾಟಿ ಓಡಲು ಯತ್ನಿಸಿದ್ದ ಶಕ್ತಿವೇಲು. ಈ ವೇಳೆ ಲಾರಿಯೊಂದಕ್ಕೆ ಸಿಕ್ಕಿಹಾಕಿಕೊಳ್ಳಬೇಕಿತ್ತು. ಲಾರಿಯಿಂದ ಜಸ್ಟ್ ಮಿಸ್ ಅಗಿದ್ದಾನೆ ಅರೋಪಿ. ಬಳಿಕ ಅಲ್ಲಿಯೇ ಮುಂದೆ ಇದ್ದ ಸ್ಕೈ ವಾಕ್ ಹತ್ತಿದ್ದಾನೆ. ಬಳಿಕ ಸ್ಕೈ ವಾಕ್ ನಿಂದ ಕೆಳಗೆ ಜಿಗಿದುರೊ ಅರೋಪಿ ಶಕ್ತಿವೇಲುಗೆ ಕಾರು ಡಿಕ್ಕಿಯಾಗಿದೆ. ಕಾರು ಡಿಕ್ಕಿಯ ಪರಿಣಾಮ ಶಕ್ತಿವೇಲು ಸಾವನ್ನಪ್ಪಿದ್ದಾನೆ. ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕಾಲೇಜಿಗೆ ಹೋಗುವಾಗ, ಬರುವಾಗ ಪುಂಡರಿಂದ ಕಿರುಕುಳ: ಬೇಸತ್ತ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಚಿತ್ರದುರ್ಗ: ಪುಂಡರ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶೀರನಕಟ್ಟೆ ಗ್ರಾಮದಲ್ಲಿ ರಾಧಿಕಾ(17) ನೇಣಿಗೆ ಶರಣಾದ ದುರ್ದೈವಿ ಬಾಲಕಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆಯ ಮುದ್ದಪ್ಪ, ಸುದೀಪ್, ಕೋಟಿ, ಅಭಿ ವಿರುದ್ಧ ಕಿರುಕುಳದ ಆರೋಪ ಮಾಡಲಾಗಿದೆ. ರಾಧಿಕಾ ಕಾಲೇಜಿಗೆ ಹೋಗುವಾಗ, ಬರುವಾಗ ಜಡೆ ಹಿಡಿದು ಎಳೆದು ಅಶ್ಲೀಲವಾಗಿ ಮಾತನಾಡಿ ಆರೋಪಿಗಳು ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ತನ್ನ ಪೋಷಕರ ಬಳಿಯೂ ರಾಧಿಕಾ ಹೇಳಿಕೊಂಡಿದ್ದಳಂತೆ. ಈ ಬಗ್ಗೆ ಆರೋಪಿಗಳ ವಿರುದ್ಧ ರಾಧಿಕಾ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಶಾದಿ ಮಹಲ್ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
ಕುಣಿಗಲ್: ವಿದ್ಯುತ್ ಸ್ಪರ್ಶಿಸಿ ಯುವಕ ಮೃತಟ್ಟಿದ್ದಾನೆ. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಮದ್ದೂರು ರಸ್ತೆ ಬಳಿ ಘಟನೆ ನಡೆದಿದೆ. ಶಾದಿ ಮಹಲ್ ಕಟ್ಟಡದ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ. ತಮಿಳುನಾಡು ಮೂಲದ ವಾಸಂ 19 ಮೃತ ಯುವಕ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 8:03 am, Tue, 21 December 21