ಮೇಧಾವಿ ಪಂಡಿತರೊಬ್ಬರು ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ: ಹೆಚ್ಡಿ ಕುಮಾರಸ್ವಾಮಿ
ಮೇಧಾವಿ ಪಂಡಿತರೊಬ್ಬರು (ರಮೇಶ್ ಕುಮಾರ್) ಸದನದಲ್ಲಿ ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ? ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಸದನಕ್ಕೆ ಗೈರಾಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy), ಟಿಎ, ಡಿಎ ಪಡೆಯುವುದಕ್ಕೆ ನಾನು ಸದನಕ್ಕೆ ಹೋಗಲಾ? 5 ದಿನದ ಅಧಿವೇಶನದಲ್ಲಿ ಏನು ಚರ್ಚೆಯಾಗಿದೆ. ಒಂದು ದಿನ ಭೈರತಿ ಬಸವರಾಜ್ ವಿರುದ್ಧ ಪ್ರತಿಭಟನೆ (Protest) ಮಾಡಿದರು. ಇನ್ನೊಂದು ದಿನ ತಹಶೀಲ್ದಾರರ ವಿರುದ್ಧ ಪ್ರತಿಭಟನೆ ಮಾಡಿದರು. ಅದನ್ನೆಲ್ಲಾ ನೋಡುವುದಕ್ಕೆ ನಾನು ಅಲ್ಲಿಗೆ ಹೋಗಬೇಕಿತ್ತಾ? ಇನ್ನು ಮೇಧಾವಿ ಪಂಡಿತರೊಬ್ಬರು (ರಮೇಶ್ ಕುಮಾರ್) ಸದನದಲ್ಲಿ ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ? ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಸೆಷನ್ಗೆ ಹೋಗಿ ನಾನು ಏನು ಮಾಡಲಿ? ಟಿಎ-ಡಿಎ ಕ್ಲೈಮ್ ಮಾಡೋಕೆ ಹೋಗಬೇಕು ಅಷ್ಟೇ. ಸದನದಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಎಷ್ಟು ಚರ್ಚೆ ಆಯ್ತು? ಇದರಿಂದ ಏನು ಸಾಧನೆ ಆಯ್ತು. ನಾಳೆ ಅಥವಾ ನಾಡಿದ್ದು ಸದನಕ್ಕೆ ಹೋಗುತ್ತೇನೆ. ಸಮಯ ಸಿಕ್ಕರೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೀನಿ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಎಂಇಎಸ್ ಹೇಯ ಕೃತ್ಯವೆಸಗಿದೆ, ಹೇಡಿಗಳು ಮಾಡುವ ಕೆಲಸವಿದು: ಹೆಚ್.ಡಿ.ಕುಮಾರಸ್ವಾಮಿ ಎಂಇಎಸ್ ಹೇಯ ಕೃತ್ಯವೆಸಗಿದೆ. ಹೇಡಿಗಳು ಮಾಡುವ ಕೆಲಸವಿದು. ಮಧ್ಯರಾತ್ರಿ ರಾಯಣ್ಣ ಪ್ರತಿಮೆ ವಿಕೃತ ಮಾಡುವಂತಹ ವಿಕೃತ ಮನೋಭಾವ ಇದು ದೊಡ್ಡ ಸಾಧನೆ ಅಲ್ಲ. ಯಾರೇ ಮಾಡಿದರು ಇದು ಮರಾಠಿಗರಿಗೆ ಮಾಡಿದ ದ್ರೋಹ. ಯಾರು ಕೃತ್ಯದ ಹಿಂದೆ ಇರೋ ಮೂಲ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಮ್ಮ ನಾಡಿನ ನೆಲದಲ್ಲಿ ಬದುಕುವ ವ್ಯಕ್ತಿಗಳು ಇಂತಹ ಕೃತ್ಯ ಮಾಡಿರೋದು ಘೋರ ಅಪರಾಧ. ನಮ್ಮ ನೀರು, ನಮ್ಮ ಅನ್ನ ಬಳಸಿಕೊಳ್ಳೊರು ಇಂತಹ ಕೆಲಸ ಮಾಡೋದು ಹೇಡಿತನದ ಕೆಲಸ. ಘೋರ ಕೆಲಸ. ಕಾನೂನು ವ್ಯಾಪ್ತಿಯಲ್ಲಿ ಇದು ಇದೆ. ಹೀಗಾಗಿ ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕು. ನಾವು ಹೊರ ನೋಟದಲ್ಲಿ ಬ್ಯಾನ್ ಮಾಡಿ ಅಂತ ಹೇಳೋದು ಬೇರೆ. ಆದರೆ ಕಾನೂನಾತ್ಮಕವಾಗಿ ಹೇಗೆ ಇದನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡಬೇಕು ಎಂದು ಒತ್ತಾಯ ಮಾಡುತ್ತೀನಿ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಭಾವನಾತ್ಮಕ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ಬೇರೆ ರೀತಿ ವ್ಯಾಖ್ಯಾನಿಸಲ್ಲ. ಶಿಗ್ಗಾಂವಿ ಕ್ಷೇತ್ರದಿಂದ ಅವರು 4 ಬಾರಿ ಗೆದ್ದು ಬಂದಿದ್ದಾರೆ. ಹೀಗಾಗಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. ಭಾವನಾತ್ಮಕ ವ್ಯಕ್ತಿಗಳಿಗೆ ಆ ನೋವು ಗೊತ್ತಾಗುತ್ತದೆ. ನಿನ್ನೆಯ ಸಿಎಂ ಮಾತು ಹೃದಯ ವೈಶಾಲ್ಯತೆ ಮತ್ತು ತಾಯಿ ಹೃದಯ ಇರೋರಿಗೆ ಗೊತ್ತಾಗುತ್ತದೆ. ಬೇರೆ ಅವರಿಗೆ ಅದು ಅರ್ಥ ಆಗುವುದಿಲ್ಲ. ನಾನು ಕೂಡಾ ರಾಮನಗರದ ವಿಚಾರದಲ್ಲಿ ಹೀಗೆ ಭಾವನಾತ್ಮಕವಾಗಿ ಮಾತಾಡಿದ್ದೆ. ಇದಕ್ಕೆ ಕಾರಣ ಅವರು ನಮ್ಮನ್ನು ಮನೆ ಮಕ್ಕಳಾಗಿ ನೋಡಿದ್ದಾರೆ. ಹೀಗಾಗಿ ಜನರ ಮಧ್ಯೆ ಹೋದಾಗ ಕಠಿಣ ಹೃದಯ ಇಲ್ಲದೆ ಇರುವವರಿಗೆ ಆ ಭಾವನೆ ಬರುತ್ತದೆ. ಸಿಎಂ ಬದಲಾವಣೆ ಹಿನ್ನೆಲೆಯಲ್ಲಿ ಮಾತಾಡಿದ್ದಾರೆಂದು ಒಪ್ಪಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮತಾಂತರ ಕಾಯ್ದೆಗೆ 40 ಮಠಾಧೀಶರಿಂದ ಮನವಿ; 2016ರಲ್ಲೇ ಕಾಯಿದೆ ಜಾರಿಗೆ ಕಾಂಗ್ರೆಸ್ ಮುಂದಾಗಿತ್ತು ಎಂದ ಸಿಎಂ ಬೊಮ್ಮಾಯಿ
Published On - 1:43 pm, Mon, 20 December 21