ಬೆಂಗಳೂರು: ಬಿಬಿಎಂಪಿ ಚೀಫ್ ಇಂಜಿನಿಯರ್ (BBMP Chief Engineer) ಅಂತ ಹೇಳ್ಕೊಂಡು ಓಡಾಡುತ್ತಿದ್ದ ಆಸಾಮಿಯನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ಬೀದರ್ ಮೂಲದ ಪರಮೇಶ್ ಬಂಧಿತ. ಇತ್ತೀಚೆಗೆ ಸಿಎಂ ಕಚೇರಿಗೆ ಏಕಾಏಕಿ ಪರಮೇಶ್ ನುಗ್ಗಿದ್ದು, ಈ ವೇಳೆ ಸೆಕ್ಯುರಿಟಿಗೆ ನೇಮಿಸಿದ್ದ ಪೊಲೀಸ್ ಸಿಬ್ಬಂದಿ ತಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿ ಪರಮೇಶ್ ತಾನು ಬಿಬಿಎಂಪಿ ಚೀಫ್ ಇಂಜಿನಿಯರ್ ಎಂದಿದ್ದ. ಸಿಎಂ ಆಪ್ತ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಒಳಗೆ ಕರೆದಿದ್ದಾರೆ, ನನ್ನನ್ನ ಸಿಎಂ ಪರ್ಸನಲ್ ಸೆಕ್ರೆಟರಿ ಪೋಸ್ಟ್ಗೆ ನೇಮಿಸಲಾಗಿದೆ ಎಂದಿದ್ದ. ಅನುಮಾನಗೊಂಡು ವಿಧಾನಸೌಧ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಆರೋಪಿ ಪರಮೇಶ್ನ ಮೊಬೈಲ್ನಲ್ಲಿ ಸಾಕಷ್ಟು ಮಾಹಿತಿ ಬೆಳಕಿಗೆ ಬಂದಿದೆ. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಬಿಎಂಪಿ ಚೀಫ್ ಇಂಜಿನಿಯರ್ ಅಂದ್ಕೊಂಡೇ ಸಾಕಷ್ಟು ಸರ್ಕಾರಿ ಅಧಿಕಾರಿಗಳಿಗೆ ಆರೋಪಿ ಮೋಸ ಮಾಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರಿಗೆ, ಯುವತಿಯರನ್ನ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿದ್ದ. ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡು ವಂಚಿಸ್ತಿದ್ದ. ನನಗೆ ಎಲ್ಲಾ ರಾಜಕಾರಣಿಗಳು ಪರಿಚಯವಿದ್ದು, ನಿಮಗೆ ಟ್ರಾನ್ಪರ್ ಮಾಡಿಕೊಡ್ತೀನಿ, ಟೆಂಡರ್ ಕೊಡಿಸ್ತೀನಿ ಅಂತ ಲಕ್ಷ ಲಕ್ಷ ಸುಲಿಗೆ ಮಾಡುತ್ತಿದ್ದ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆಸ್ತಿಗಾಗಿ ಸ್ವಂತ ತಾತನನ್ನೇ ಕೊಂದ ಮೊಮ್ಮಗ
ಬೆಂಗಳೂರು: ಆಸ್ತಿಗಾಗಿ ಸ್ವಂತ ತಾತನನ್ನೇ ಕೊಲೆ ಮಾಡಿದ್ದ ಮೊಮ್ಮಗ ಸೇರಿ ಇಬ್ಬರನ್ನ ಯಲಹಂಕ ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿದೆ. ಜಯಂತ್ ಹಾಗೂ ಆತನ ಸ್ನೇಹಿತ ಯಾಸೀನ್ ಬಂಧಿತರು. ಆ.17ರಂದು ಯಲಹಂಕದಲ್ಲಿ ಸಿ.ಪುಟ್ಟಯ್ಯ ಎಂಬುವವರನ್ನು ಮೊಮ್ಮಗ ಜಯಂತ್ ಕೊಲೆ ಮಾಡಿದ್ದ. ತಾತ ಆಸ್ತಿ ವಿಭಾಗ ಮಾಡುತ್ತಿಲ್ಲ ಎಂದು ಕೊಪಗೊಂಡು ಆರೋಪಿ ಹತ್ಯೆಗೈದಿದ್ದಾನೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸ್ಮಾರ್ಟ್ ಕಾರ್ಡ್ ಹೆಸರಲ್ಲಿ ಜನರಿಗೆ ವಂಚನೆ: ಪ್ರತಿಷ್ಠಿತ ಕಂಪನಿ ವಿರುದ್ಧ ಗಂಭೀರ ಆರೋಪ
ಸೂಪರ್ ಗುಂಡ ರೌಡಿ ಕಾಯ್ದೆಯಡಿ ಬಂಧನ
ಬೆಂಗಳೂರು: ರೌಡಿಶೀಟರ್ ರಾಕೇಶ್ ಅಲಿಯಾಸ್ ಸೂಪರ್ ಗುಂಡನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. 2013ರಿಂದ ಸರಣಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ; ಕೊಲೆ, ಕೊಲೆಯತ್ನ, ಸುಲಿಗೆ, ಕಿಡ್ನಾಪ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:52 pm, Sat, 20 August 22