ಬೆಂಗಳೂರು: 2023ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಅದ್ಭತವಾದ ಪ್ರತಿಕ್ರಿಯೆ ದೊರೆಯುತ್ತಿದೆ. ಈ ವೈಮಾನಿಕ ಪ್ರದರ್ಶನದಲ್ಲಿ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಗಳು ಮೇಲುಗೈ ಸಾಧಿಸಿವೆ. ಬೆಂಗಳೂರು ಮೂಲದ ಗೋಪಾಲನ್ ಏರೋ ಸ್ಪೇಸ್ ಸಂಸ್ಥೆ (Gopalan aerospace Company) ತಯಾರಿಸಿದ ಮಾನವ ರಹಿತ ಡ್ರೋನ್ಗೆ ಭಾರೀ ಬೇಡಿಕೆ ಇದೆ. ಈ ಡ್ರೋನ್ಗೆ 80 ಕಿ.ಮೀ. ದೂರದ ಟಾರ್ಗೆಟ್ ಫಿಕ್ಸ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಸಂಸ್ಥೆ ಈಗಾಗಲೆ ರಕ್ಷಣಾ ಕ್ಷೇತ್ರಕ್ಕೆ ಯುದ್ಧೋಪಕರಣ ಹಾಗೂ ಮಾನವ ರಹಿತ ಡ್ರೋನ್ಗಳನ್ನು ತಯಾರು ಮಾಡಿ ನೀಡುತ್ತಿದೆ. ಸದ್ಯ ಈ ಡ್ರೋನ್ 6 ಕಿ.ಮೀ. ಸುತ್ತಲಿನ ಮಾಹಿತಿ ಸಂಗ್ರಹಿಸುವ ರಾಡಾರ್ ಹೊಂದಿದೆ ಎಂದು ಗೋಪಾಲನ್ ಏರೋಸ್ಪೇಸ್ ನಿರ್ದೇಶಕ ಪ್ರಭಾಕರ್ ಮಾಹಿತಿ ನೀಡಿದ್ದಾರೆ.
ಗೋಪಾಲನ್ ಏರೋ ಸ್ಪೇಸ್ ಸಂಸ್ಥೆ 2020ರಲ್ಲಿ ರಾಜ್ಯದ ಉದ್ಯಮ ಕ್ಷೇತ್ರದಲ್ಲಿ 438 ಕೋಟಿ ರೂ. ಅನ್ನು ಹೂಡಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಮನವಿ ನೀಡಿತ್ತು. ಈ ಮನವಿಯನ್ನು ಸರ್ಕಾರ ಒಪ್ಪಿಕೊಂಡಿತ್ತು. ಅದರಂತೆ ಈ ಇಂಜಿನಿಯರಿಂಗ್ ಕಂಪನಿ 2021 ರ ಅಂತ್ಯದಲ್ಲಿ ತನ್ನ ಕಾರ್ಯಾಂಭ ಮಾಡಿತು. ಸಂಸ್ಥೆ ಪ್ರಸ್ತುತ 1000 ಜನರಿಗೆ ಉದ್ಯೋಗವನ್ನು ನೀಡಿದೆ. ಈ ಸಂಸ್ಥೆಯಲ್ಲಿ ವಾಯುಯಾನಕ್ಕೆ ಬೇಕಾಗದ ಸಾಮಗ್ರಿಗಳನ್ನು ತಯಾಗುತ್ತವೆ.
ಇನ್ನು ಈ ಕಂಪನಿ ಬೆಂಗಳೂರಿಂದ 60 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿದೆ. ಮಾಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಗೆ 40 ಎಕರೆ ಜಮೀನು ಮಂಜೂರು ಮಾಡಲು ರಾಜ್ಯ ಸರ್ಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೂಚನೆ ನೀಡಿತ್ತು.
ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯ ಅಡಿಯಲ್ಲಿ, ರಾಜ್ಯದಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮಾಹಿತಿ ಮತ್ತು ತಂತ್ರಜ್ಞಾನ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ನಿರ್ದಿಷ್ಟ ಹೂಡಿಕೆಗಳನ್ನು ಗುರಿಯಾಗಿಸಿಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ