Driverless Metro: ರಾಜಧಾನಿಯಲ್ಲಿ ಸಂಚರಿಸಲಿವೆ ಚಾಲಕ ರಹಿತ ಮೆಟ್ರೋ ರೈಲು: ಇಲ್ಲಿದೆ ವಿಶೇಷತೆ

ಏರೋ ಇಂಡಿಯಾದಲ್ಲಿ, ಬೆಮಲ್‌ (ಭಾರತ್‌ ಅರ್ಥ ಮೂವರ್ಸ್‌ ಕಂಪನಿ)ಯ ಮಾನವ ರಹಿತ ಮೆಟ್ರೋ ಕಾರ್‌ (ರೈಲು) ಗಮನ ಸೆಳೆಯಿತು. ಡ್ರೈವರ್‌ ಇಲ್ಲದ ಮೆಟ್ರೋ ರೈಲು ಇದಾಗಿದ್ದು, ಬೆಂಗಳೂರಿನ ಬೆಮೆಲ್‌ ಉತ್ಪಾದನಾ ಘಟಕದಲ್ಲಿ ಸಿದ್ಧವಾಗುತ್ತಿದೆ.

Driverless Metro: ರಾಜಧಾನಿಯಲ್ಲಿ ಸಂಚರಿಸಲಿವೆ ಚಾಲಕ ರಹಿತ ಮೆಟ್ರೋ ರೈಲು: ಇಲ್ಲಿದೆ ವಿಶೇಷತೆ
ಚಾಲಕ ರಹಿತ ಮೆಟ್ರೋ (ಸಾಂಧರ್ಬಿಕ ಚಿತ್ರ)
Follow us
| Updated By: ವಿವೇಕ ಬಿರಾದಾರ

Updated on:Feb 15, 2023 | 11:14 AM

ಬೆಂಗಳೂರು: ಏರೋ ಇಂಡಿಯಾದಲ್ಲಿ, ಬೆಮಲ್‌ (ಭಾರತ್‌ ಅರ್ಥ ಮೂವರ್ಸ್‌ ಕಂಪನಿ)ಯ ಮಾನವ ರಹಿತ ಮೆಟ್ರೋ ಕಾರ್‌ (ರೈಲು) (metro cars) ಗಮನ ಸೆಳೆಯಿತು. ಡ್ರೈವರ್‌ ಇಲ್ಲದ ಮೆಟ್ರೋ ರೈಲು ಇದಾಗಿದ್ದು, ಬೆಂಗಳೂರಿನ ಬೆಮೆಲ್‌ ಉತ್ಪಾದನಾ ಘಟಕದಲ್ಲಿ ಸಿದ್ಧವಾಗುತ್ತಿದೆ. ಈ ರೈಲು ಮುಂದಿನ ಪೀಳಿಗೆಗೆ ಸಾಕಷ್ಟು ಅನುಕೂಲಕರವಾಗಲಿದೆ. ಏರೋ ಇಂಡಿಯಾ (Aero indian)ದಲ್ಲಿ ಪ್ರದರ್ಶದಲ್ಲಿದ್ದ ಚಾಲಕ ರಹಿತ ಮೆಟ್ರೋ ಮಾದರಿಯು ಈಗಾಗಲೇ ಮುಂಬೈನ ಎರಡು ಲೈನ್‌ಗಳಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯಾಚರಣೆ ನಡೆಸುತ್ತಿದೆ.

ಚಾಲಕ ರಹಿತ ರೈಲಿನ ವಿಶೇಷತೆ

ನಗರದಲ್ಲಿ 318 ಮೆಟ್ರೋ ಕಾರ್​ಗಳು ಬೇರೆ ಬೇರೆ ಲೈನ್​ಗಳಲ್ಲಿ ಸಂಚರಿಸಲಿವೆ. 2, 2ಎ ಮತ್ತು 2ಬ ಹಂತಗಳಲ್ಲಿ ಮೆಟ್ರೋ ರೈಲುಗಳು ಸಂಚರಿಲಿವೆ. ಬಿಎಂಆರ್​ಸಿಎಲ್ ಈಗಾಗಲೆ ಟೆಂಡರ್​ ನೀಡಿದ್ದು, ಇದರ ತಯಾರಕರೇ 15 ವರ್ಷಗಳ ಕಾಲ ಇದರ ನಿರ್ವಣೆಯನ್ನು ಮಾಡಬೇಕೆಂದು ಮೆಟ್ರೋ ರೈಲ್​ನ್ಯೂಸ್ ವರದಿ ಮಾಡಿದೆ.

ಚಾಲಕ ಇರದಿದ್ದರೂ ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ರೈಲು ಸಂಚರಿಸಲಿದರೆ. ರೈಲಿನ ಸಂಚಾರವನ್ನು ಅಪರೇಷನ್‌ ಕಂಟ್ರೋಲ್‌ ಸೆಂಟರ್‌ನಲ್ಲಿ ನಿಗಾ ವಹಿಸಲಾಗುತ್ತದೆ. ಇನ್ನು ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗಲಿದೆ. ಆಗ ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಬಹುದು.

380 ಜನ ಪ್ರಯಾಣ

ಚಾಲಕ ರಹಿತ ಮೆಟ್ರೋ ರೈಲಿನ ಪ್ರತಿ ಬೋಗಿಯಲ್ಲಿ 380 ಜನ ಪ್ರಯಾಣ ಮಾಡಬಹುದಾಗಿದೆ. . ಬೆಮೆಲ್‌ 3 ಮತ್ತು 6 ಬೋಗಿ ಎರಡು ಮಾದರಿಯಲ್ಲಿ ಮೆಟ್ರೋ ಕಾರ್‌ಗಳನ್ನು ತಯಾರಿಸುತ್ತದೆ.

80 ಕಿ.ಮೀ ವೇಗ

ಬೆಮೆಲ್‌ ಅಭಿವೃದ್ಧಿ ಪಡಿಸಿದರುವ ಚಾಲಕ ಇಲ್ಲದ ಮೆಟ್ರೋ ರೈಲು ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್‌ ಸಹಾಯದಿಂದ ಈ ಬೋಗಿಗಳ ರೈಲು ಸಂಚರಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ.

ಹೊಸ ಮಾರ್ಗದಲ್ಲಿ ಮಾತ್ರ ಸಂಚರಿಸುತ್ತವೆ

ಚಾಲಕ ರಹಿತ ಮೆಟ್ರೋ ರೈಲು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಹಳಿ ಅಥವಾ ಮಾರ್ಗದಲ್ಲಿ ಓಡಾಟ ನಡೆಸುವುದಿಲ್ಲ. ಚಾಲಕ ರಹಿತ ಮೆಟ್ರೋ ರೈಲಿಗೆ ಅಗತ್ಯವಿರುವ ತಂತ್ರಜ್ಞಾನದಲ್ಲಿ ಹಳಿ ಸೇರಿದಂತೆ ಮೊದಲಾದ ವ್ಯವಸ್ಥೆ ಮಾಡಬೇಕಿದೆ. ಈ ಮೆಟ್ರೋ ಬೋಗಿಯು ನಮ್ಮ ಮೆಟ್ರೋ ಬೋಗಿಗಿಂತ ದೊಡ್ಡಗಾಗಿದೆ.

ದೇಶದಲ್ಲಿ ಮೊದಲು ದೆಹಲಿಯಲ್ಲಿ ಸಂಚಾರ

ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ರೈಲನ್ನು ಪ್ರಧಾನಿ ಮೋದಿ ಡಿಸೆಂಬರ್​ 28 2020 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದರು. ದೆಹಲಿಯ ಮ್ಯಾಗ್ನೆಟಾ ಲೈನ್‌ನ ಚಾಲಕ ರಹಿತ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 am, Wed, 15 February 23

ತಾಜಾ ಸುದ್ದಿ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ