ಕೌಟುಂಬಿಕ ಕಲಹ: ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಆರೋಪ
ಆಸ್ತಿ ವಿಚಾರಕ್ಕೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು: ಆಸ್ತಿ ವಿಚಾರಕ್ಕೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ. ನಾರಾಯಣಸ್ವಾಮಿ (70) ಕೊಲೆಯಾದ ತಂದೆ. ಆರೋಪಿ ಮಣಿಕಂಠ (37) ಸುಪಾರಿ ನೀಡಿರುವ ಪುತ್ರ. ಮಾರತ್ತಹಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧನ ಕೊಲೆಗೆ ಕಾರಣವಾಯ್ತು ಪುತ್ರನ ಕೌಟುಂಬಿಕ ಕಲಹ
ಮಣಿಕಂಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದನು. ಜೈಲಿನಿಂದ ಹೊರಬಂದು ಎರಡನೇ ವಿವಾಹವಾಗಿದ್ದನು, ಒಂದು ಹೆಣ್ಣು ಮಗಳಿದ್ದಳು. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರ ಗೊತ್ತಾಗಿ ಎರಡನೇ ಪತ್ನಿ ಪತಿಯಿಂದ ದೂರವಿದ್ದಳು. ವಿಚ್ಛೇದನ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು.
ಆದರೆ ವಿಚ್ಛೇದನ ಕೊಡುವುದು ಬೇಡ ಎಂದು ಕೇಳಿಕೊಂಡಿದ್ದ ಮಾವ ನಾರಾಯಣಸ್ವಾಮಿ ಕೇಳಿಕೊಂಡಿದ್ದನು. ಆದರು ಇದಕ್ಕೆ ಸೊಸೆ ಒಪ್ಪಲಿಲ್ಲ. ಹೀಗಾಗಿ ವಿಚ್ಛೇದನ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟವಾಗಬಹುದು, ಅವರ ಜೀವನ ನಿರ್ವಹಣೆ ಕಷ್ಟ ಆಗುತ್ತೆ ಎಂದು ಸೈಟ್ವೊಂದನ್ನ ಅವರ ಹೆಸರಿಗೆ ಮಾಡಲು ಮಾವ ನಾರಾಯಣಸ್ವಾಮಿ ಮುಂದಾಗಿದ್ದನು.
ಹೀಗಾಗಿ ಸೊಸೆ ಹಾಗೂ ಮೊಮ್ಮಗಳ ಹೆಸರಿಗೆ ಸೈಟ್ ರಿಜಿಸ್ಟ್ರೇಷನ್ ಮಾಡಲು ನಾರಾಯಣಸ್ವಾಮಿ ಮುಂದಾಗಿದ್ದರು. ಆದರೆ ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹೀಗಾಗಿ ತಂದೆ ಕೊಲೆಗೆ ಮಗ ಮಣಿಕಂಠ ಸುಪಾರಿ ನೀಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಸುಪಾರಿ ಪಡೆದವರು ಮಾರತ್ತಹಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಣತ್ತೂರಿನ ಕಾವೇರಪ್ಪ ಲೇಔಟ್ನಲ್ಲಿ ನಾರಾಯಣಸ್ವಾಮಿಯನ್ನು ಕೊಂದು ಪರಾರಿಯಾಗಿದ್ದಾರೆ. ಸದ್ಯ ಮಾರತ್ತಹಳ್ಳಿ ಪೊಲೀಸರು ಮಣಿಕಂಠನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಆರೋಪಿಗಳಿಗಾಗಿ ಮಾರತ್ತಹಳ್ಳಿ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ.
ಎರಡನೇ ಪತ್ನಿಯನ್ನೂ ಕೊಲ್ಲಲು ಯತ್ನ
3-4 ತಿಂಗಳ ಹಿಂದೆ ಆರೋಪಿ ಮಣಿಕಂಠ ಎರಡನೇ ಪತ್ನಿಗೂ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ್ದನಂತೆ. ಆದರೆ ಪೊಲೀಸರು ಕೇಸ್ ದಾಖಲಿಕೊಳ್ಳದೆ ಸಂಧಾನ ಮಾಡಿಕಳುಹಿಸಿದ್ದರು.
ಬುದ್ದಿವಾದ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ
ಮೈಸೂರು: ಬುದ್ದಿವಾದ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಮೈಸೂರಿನ ಕಲ್ಯಾಣಗಿರಿ ನಿವಾಸಿ ಸಯ್ಯದ್ ಮನ್ಸೂರ್ 32 ಕೊಲೆಯಾದ ದುರ್ದೈವಿ. ಜಬೀ ಎಂಬಾತ ಹುಡಗಿಯರನ್ನು ಚುಡಾಯಿಸುತ್ತಿದ್ದನು. ಈ ಬಗ್ಗೆ ಮನ್ಸೂರ್ ಬುದ್ದಿವಾದ ಹೇಳಿದ್ದನು. ಬಳಿಕ ಮನ್ಸೂರ್ ಭಾನುವಾರದಿಂದ ನಾಪತ್ತೆಯಾಗಿದ್ದನು.
ಇಂದು (ಫೆ.15) ಪಾಂಡವಪುರ ನಾಲೆಯಲ್ಲಿ ಮನ್ಸೂರ್ ಶವ ಪತ್ತೆಯಾಗಿದೆ. ಜಬೀ ಹಾಗೂ ಝೈನುಲ್ಲಾ ಮತ್ತೆ ಇಬ್ಬರು ಸೇರೆ ಮನ್ಸೂರ್ನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ಎನ್ ಆರ್ ಪೊಲೀಸ್ ಠಾಣೆ ಪೊಲೀಸರು ಎನ್ ಆರ್ ಮೊಹಲ್ಲಾದ ಜಬೀ ಸೈಯದ್, ಝೈನುಲ್ಲಾ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 am, Wed, 15 February 23