ಬೆಂಗಳೂರು: ಕೊವಿಡ್ ಬಂದು ಹೋದವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಕೊವಿಡ್ನಿಂದ ಚೇತರಿಸಿಕೊಂಡ 3 ರಿಂದ 4 ತಿಂಗಳ ಬಳಿಕ ತಲೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ದಿನೇ ದಿನೇ ತಲೆ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಬಗ್ಗೆ ತಜ್ಞ ವೈದ್ಯರು ಪ್ರತಿಕ್ರಿಯೆ ನೀಡಿದ್ದು, ಪೋಷಕಾಂಶಗಳ ಕೊರತೆ, ಮಾನಸಿಕ ಹಾಗೂ ದೈಹಿಕ ಒತ್ತಡ ಇದಕ್ಕೆ ಕಾರಣವಾಗಿದೆ. ಅಲ್ಲದೆ ಅತಿಯಾದ ಔಷಧಿ ಬಳಕೆಯಿಂದ ಕೂದಲು ಉದುರುವಿಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕೊವಿಡ್ ಬಂದು ಹೋದವರಿಗೆ ಬೋಳು ಮಂಡೆಯಾಗುವ ಆತಂಕ ಹೆಚ್ಚಾಗಿದೆ. ಬೆಂಗಳೂರಿನ ಇಎಸ್ಐ ಆಸ್ಪತ್ರೆಗಳು ಸೇರಿದಂತೆ, ನಗರದ ಚರ್ಮ ರೋಗ ತಜ್ಞರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ತಲೆ ಕೂದಲು ಉದುರುವ ಸಮಸ್ಯೆ ಹೇಳಿಕೊಂಡು ಜನರು ಆಗಮಿಸುತ್ತಿದ್ದಾರೆ. ಕೊವಿಡ್ ಬಂದು ಹೋದ ಶೇ.60 ರಷ್ಟು ಜನರಿಗೆ ಈ ಸಮಸ್ಯೆ ಎದುರಾಗಿದೆ. ಅದರಲ್ಲೂ ಮಹಿಳೆಯರಲ್ಲೇ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತಿದೆ.
ಮಾನಸಿಕ ಒತ್ತಡ ಉಂಟಾದಾಗ ಕೂದಲು ಉದುರುವ ಸಮಸ್ಯೆ ಕಾಡುವುದು ಮಾಮೂಲಿ. ಅನಗತ್ಯ ಚಿಂತೆಯಿಂದ ಮಾನಸಿಕ ಸ್ಥಿತಿ ಹದಗೆಡುತ್ತದೆ. ವಿಪರೀತ ಟೆನ್ಷನ್ನಿಂದ ದೇಹದ ಸ್ಥಿತಿ ದುರ್ಬಗೊಳ್ಳುತ್ತದೆ. ಅದರಲ್ಲಿಯೂ ಕೊವಿಡ್-19 ಸಾಂಕ್ರಾಮಿಕ ರೋಗ ಜನರಿಗೆ ಹೆಚ್ಚು ಮಾನಸಿಕ ಒತ್ತಡವನ್ನು ತಂದು ಬಿಟ್ಟಿತು. ಇದರಿಂದ ಜನರು ಹೆಚ್ಚು ಗೊಂದಲಕ್ಕೀಡಾದರು ಹಾಗೂ ದೀರ್ಘಕಾಲಿಕ ಕೊವಿಡ್ ಬಳಿಕವೂ ಸಹ ಕೂದಲುದುರುವ ಸಮಸ್ಯೆ ಕಾಡತೊಡಗಿತು.
ಇದನ್ನೂ ಓದಿ:
ಭಾರತದಲ್ಲಿ ಕೊವಿಡ್‌ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ
Published On - 9:37 am, Fri, 29 October 21