ಜೈಲಿಗೆ ಹೋಗಿ ಬಂದ್ರೂ ಕಳ್ಳತನ ಬಿಡದ ಅಸಾಮಿ; 18 ಲಕ್ಷ ರೂ. ಮೌಲ್ಯದ ವಾಹನಗಳನ್ನ ಕದ್ದು ಸಿಕ್ಕಿಬಿದ್ದ

|

Updated on: Jun 28, 2024 | 6:26 PM

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಂತೆ ಇದೀಗ ಜೈಲಿಗೆ ಹೋಗಿ ಬಂದಿದ್ದ ಅಸಾಮಿಯೊಬ್ಬ, ಮತ್ತೆ 18 ಲಕ್ಷ ರೂ. ಮೌಲ್ಯದ 1 ಟೆಂಪೋ, 3 ಆಟೋ, 3 ಬೈಕ್​ಗಳನ್ನ ಕದ್ದು ಬೆಂಗಳೂರಿನ ವಿವಿಪುರಂ ಪೊಲೀಸರ(VV Puram Police) ಕೈಗೆ ಸಿಕ್ಕಿಬಿದ್ದಿದ್ದಾನೆ.

ಜೈಲಿಗೆ ಹೋಗಿ ಬಂದ್ರೂ ಕಳ್ಳತನ ಬಿಡದ ಅಸಾಮಿ; 18 ಲಕ್ಷ ರೂ. ಮೌಲ್ಯದ ವಾಹನಗಳನ್ನ ಕದ್ದು ಸಿಕ್ಕಿಬಿದ್ದ
ಕಳ್ಳತನ ಆರೋಪಿ
Follow us on

ಬೆಂಗಳೂರು, ಜೂ.28: ಜೈಲಿಗೆ ಹೋಗಿ ಬಂದರೂ ಕಳ್ಳತನ ಬಿಡದ ಅಸಾಮಿಯೊಬ್ಬ ಮತ್ತೆ ಕದ್ದು ಬೆಂಗಳೂರಿನ ವಿವಿಪುರಂ ಪೊಲೀಸರ(VV Puram Police) ಕೈಗೆ ಸಿಕ್ಕಿಬಿದ್ದಿದ್ದಾನೆ. ಅಭಿಷೇಕ್​ ಅಲಿಯಾಸ್​ ಮಿಲ್ಕಿ ಬಂಧಿತ ವ್ಯಕ್ತಿ. ಇತ ಈ ಹಿಂದೆ ಬೈಕ್​ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಆದರೂ ಬುದ್ದಿ ಕಲಿಯದ ಖದೀಮ, ಮತ್ತೆ ತನ್ನ ಕಳ್ಳತನ ವೃತ್ತಿಯನ್ನ ಬಿಡದ ಅಭಿಷೇಕ್​, ವಾರದ ಹಿಂದೆ ವಿವಿಪುರಂ ಠಾಣಾ ವ್ಯಾಪ್ತಿಯಲ್ಲಿ ಟೆಂಪೋ ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಜಯನಗರ, ವಿಜಯನಗರ, ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕಳುವು

ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದ ವೇಳೆ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದ ಆರೋಪಿ ಅಭಿಷೇಕ್​, ತಾನೂ ಜಯನಗರ, ವಿಜಯನಗರ, ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದಾಗಿ ಹೇಳಿದ್ದ. 18 ಲಕ್ಷ ರೂ. ಮೌಲ್ಯದ 1 ಟೆಂಪೋ, 3 ಆಟೋ, 3 ಬೈಕ್​ಗಳನ್ನ ಕದ್ದಿದ್ದ. ಆ ವಾಹನಗಳನ್ನು ಮಾರಲು ನ್ಯಾಷನಲ್​ ಕಾಲೇಜಿನ ಮೆಟ್ರೋ ಸ್ಟೇಷನ್​ ರಸ್ತೆಯಲ್ಲಿ ನಿಲ್ಲಿಸಿದ್ದ. ಬಳಿಕ ಪೊಲೀಸರ ವಿಚಾರಣೆ ವೇಳೆ ಕಳ್ಳತನದ ಬಗ್ಗೆ ಆರೋಪಿ ಮಿಲ್ಕಿ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ:ಬೆಂಗಳೂರು: ಹಂದಿಗಳನ್ನೂ ಬಿಡದ ಕಳ್ಳರು; ಎರಡೇ ತಿಂಗಳಲ್ಲಿ 300 ಕ್ಕೂ ಹೆಚ್ಚು ಸಾಕು ಹಂದಿ ಕಳ್ಳತನ

ನೆಲಮಂಗಲದಲ್ಲಿ ಹಣದ ಜೊತೆ ಬೈಕ್ ಎಗರಿಸಿದ ಖದೀಮ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲದಲ್ಲಿ ಹಣದ ಜೊತೆ ಇದ್ದ ಬೈಕ್​ನ್ನೂ ಕಳ್ಳತನ ಮಾಡಿದ ಘಟನೆ ನಡೆದಿದೆ.  ನೆಲಮಂಗಲದ ಅಡೆಪೇಟೆ ಉಮೇಶ್​ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನ ಇದಾಗಿದ್ದು, ಡಿಕ್ಕಿಯಲ್ಲಿದ್ದ 20 ಸಾವಿರ ಹಣವನ್ನು ಕದ್ದು ದುಷ್ಕರ್ಮಿ ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:19 pm, Fri, 28 June 24