Dengue: ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಸಾವು

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶರವೇಗದಲ್ಲಿ ಏರಿಕೆಯಾಗುತ್ತಿದೆ. ಜನ ಡೆಂಗ್ಯೂ ಕಪಿಮುಷ್ಟಿಯಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ. ಏರಿಯಾ ಏರಿಯಾದಲ್ಲೂ ಡೆಂಗ್ಯೂ ತಾಂಡವವಾಗ್ತಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಪೂರ್ವ ವಲಯದಲ್ಲಿ 80 ವರ್ಷದ ವೃದ್ಧೆ ಹಾಗೂ 27 ವರ್ಷದ ಯುವಕ ಡೆಂಗ್ಯೂಗೆ ಬಲಿಯಾಗಿದ್ದಾರೆ ಅನ್ನೋ ಮಾಹಿತಿ ಟಿವಿ 9ಗೆ ಲಭ್ಯವಾಗಿದೆ.

Dengue: ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಸಾವು
ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಸಾವು
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jun 28, 2024 | 9:24 PM

ಬೆಂಗಳೂರು, ಜೂನ್​ 28: ಡೆಂಗ್ಯೂ ಜ್ವರಕ್ಕೆ (dengue fever) ನಗರದಲ್ಲಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಿಬಿಎಂಪಿ ಪೂರ್ವ ವಲಯದಲ್ಲಿ 80 ವರ್ಷದ ವೃದ್ಧೆ ಮತ್ತು 27 ವರ್ಷದ ಯುವಕ ಮೃತಪಟ್ಟಿದ್ದಾರೆ (death). ನಾಳೆ ಬಿಬಿಎಂಪಿ ಅಧಿಕಾರಿಗಳು ಡೆತ್ ಆಡಿಟ್ ಮಾಡಲಿದ್ದಾರೆ. ಈ ಕುರಿತಾಗಿ ಟಿವಿ9ಗೆ ಬಿಬಿಎಂಪಿ ಮೂಲಗಳಿಂದ ಮಾಹಿತಿ ನೀಡಲಾಗಿದೆ. ಡೆಂಗ್ಯೂಗೆ ಹಾವೇರಿಯಲ್ಲಿ ಮೊದಲ ಸಾವು ಸಂಭವಿಸಿತ್ತು. ಇದೀಗ ಬೆಂಗಳೂರಿನಲ್ಲಿ ಸಂಭವಿಸಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಓಟ ಜೋರಾಗಿದೆ. ಕಳೆದ ವರ್ಷದ ಜೂನ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷ ಜೂನ್ ತಿಂಗಳಿನಲ್ಲಿ ದುಪ್ಪಟ್ಟು ಕೇಸ್‌ಗಳು ಬೆಂಗಳೂರಿನಲ್ಲೇ ಪತ್ತೆಯಾಗಿದ್ದವು.

ಸಾವಿನ ಜತೆಗೆ ಬೆಂಗಳೂರಿನಲ್ಲೂ ಡೆಂಗ್ಯೂ ಕೇಸ್​​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲೇ 2457 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಜಾಗ್ರತೆಯಿಂದ ಇರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Dengue cases in Karnataka: ಕರ್ನಾಟಕದಾದ್ಯಂತ ಡೆಂಗ್ಯೂ ಕೇಕೆ: ಈ ಬಾರಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ಪ್ರಕರಣ, ಇಲ್ಲಿದೆ ವಿವರ

ಸದ್ಯ ಡೆಂಗ್ಯೂ ಆರ್ಭಟ ಬಿಬಿಎಂಪಿಗೆ ನಿದ್ದೆಗೆಡಿಸಿದೆ. ಮನೆ ಸರ್ವೇ ನಡೆಸಿ, ಡೆಂಗ್ಯೂ ಓಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 14 ಲಕ್ಷ ಮನೆಗಳ ಸರ್ವೇಗೆ ಟಾಸ್ಕ್ ನೀಡಲಾಗಿದೆ. ಬಿಬಿಎಂಪಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪ್ರತಿ ಶುಕ್ರವಾರ ಮನೆಗಳಿಗೆ ಭೇಟಿ ನೀಡಿ, ಸೊಳ್ಳೆಗಳ ಲಾರ್ವಾ ಪತ್ತೆ ಹಚ್ಚುತ್ತಿದ್ದಾರೆ. ಮನೆಯ ಅಕ್ಕ-ಪಕ್ಕ ನೀರು ನಿಲ್ಲದಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಪಾಲಿಕೆ ಟೀಮ್​ನ ಜೊತೆ ನರ್ಸಿಂಗ್ ಸ್ಟೂಡೆಂಟ್ಸ್, ಸ್ವಯಂ ಸೇವಕರು ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿ? ವೈದ್ಯರ ನಿರ್ಲಕ್ಷ್ಯ ಎಂದು ಕುಟುಂಬಸ್ಥರ ಕಿಡಿ

ರಾಜ್ಯದಲ್ಲಿಗ ಸುಮಾರು 5187 ಡೆಂಗ್ಯೂ ಕೇಸ್​ಗಳಿವೆ. ಬೆಂಗಳೂರಿನಲ್ಲಂತೂ ಡೆಂಗ್ಯೂ ಸ್ಫೋಟವೇ ಆಗಿದೆ. ಹಾವೇರಿ, ಮೈಸೂರು ಸೇರಿದಂತೆ ಜಿಲ್ಲೆ ಜಿಲ್ಲೆಯಲ್ಲೂ ಜನ ಡೆಂಗ್ಯೂಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ನರಳಾಡ್ತಿದ್ದಾರೆ. ಕೇವಲ 6 ತಿಂಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶೇ.140ರಷ್ಟು ಹೆಚ್ಚಾಗಿದೆಯಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 pm, Fri, 28 June 24

ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ
ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ
ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಬಾಲಕ
ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಬಾಲಕ
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ
ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
Aero india: ಬೆಂಗಳೂರಿನಲ್ಲಿ ರಾಜನಾಥ್​ ಸಿಂಗ್​ ಸುದ್ದಿಗೋಷ್ಠಿಯ ನೇರಪ್ರಸಾರ
Aero india: ಬೆಂಗಳೂರಿನಲ್ಲಿ ರಾಜನಾಥ್​ ಸಿಂಗ್​ ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!