ಬೆಂಗಳೂರು, ಸೆ.09: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಪ್ರತಿದಿನ ಎರಡು ಸಾವಿರ ಹೊಸ ವಾಹನಗಳು ರಿಜಿಸ್ಟರ್ ಆಗ್ತಿದೆ. ರಾಜ್ಯದಲ್ಲಿ ಪ್ರತಿ ತಿಂಗಳು 1.5 ಲಕ್ಷ ನೂತನ ವಾಹನಗಳ ನೋಂದಣಿ ಆಗ್ತಿದೆ. ಸಿಲಿಕಾನ್ ಸಿಟಿ ರಸ್ತೆಗೆ ಪ್ರತಿ ತಿಂಗಳು 60 ಸಾವಿರ ನೂತನ ವಾಹನಗಳು ರೋಡಿಗಿಳಿಯುತ್ತಿವೆ. ಸಾರಿಗೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಇಡೀ ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಟ ಬರೋಬ್ಬರಿ 5 ಸಾವಿರ ನೂತನ ವಾಹನಗಳು ನೋಂದಣಿಯಾಗ್ತಿದ್ದಾವೆ. ಅಂದ್ರೆ, ತಿಂಗಳಿಗೆ ಒಂದೂವರೆ ಲಕ್ಷ ಹಾಗೂ ವರ್ಷಕ್ಕೆ 18 ಲಕ್ಷ ವಾಹನಗಳು ಹೊಸದಾಗಿ ರಾಜ್ಯದ ರಸ್ತೆಗೆ ಇಳಿಯುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ನೋಂದಣಿ ಆಗಿರೋ ವಾಹನಗಳ ಪ್ರಮಾಣದಲ್ಲಿ ಶೇ. 6.5ರಷ್ಟು ಏರಿಕೆಯಾಗಿದೆ (Air Pollution). ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ವಾಯು ಗುಣಮಟ್ಟ ಗಣನೀಯ ಕುಸಿತ, ಗಾಳಿಯಲ್ಲಿ ಹೆಚ್ಚಿದ ಅಪಾಯಕಾರಿ ಕಣಗಳು: ಅಧ್ಯಯನ ವರದಿ
ಇನ್ನೂ ದೆಹಲಿಯಲ್ಲಿ ಹದಿನೈದು ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನಗಳು, ಹತ್ತು ವರ್ಷ ಮೇಲ್ಪಟ್ಟ ಡಿಸೇಲ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಹದಿನೈದು ವರ್ಷ ಮೇಲ್ಪಟ್ಟ ಸರ್ಕಾರಿ ಮತ್ತು ನಿಗಮ ಮಂಡಲಿಗಳ ವಾಹನಗಳನ್ನು ಮಾತ್ರ ಕಡ್ಡಾಯವಾಗಿ ಗುಜರಿಗೆ ಹಾಕಬೇಕು ಅನ್ನೋ ರೂಲ್ಸ್ ಇದೆ. ಬೇರೆ ಯಾವುದೇ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ರೂಲ್ಸ್ ಇಲ್ಲ ಹಾಗಾಗಿ 10-15 ವರ್ಷ ಮೇಲ್ಪಟ್ಟ ವಾಹನಗಳಿಂದ ಹೆಚ್ಚಿನ ವಾಯುಮಾಲಿನ್ಯ ಆಗುತ್ತಿದೆ. ಇನ್ನು ಬೆಂಗಳೂರಿನಲ್ಲಿರುವ 11 ವಾಯುಮಾಲಿನ್ಯ ನಿಯಂತ್ರಣ ಕೇಂದ್ರಗಳಲ್ಲಿ ಐದು ಕೇಂದ್ರಗಳ ಮಾಹಿತಿಯ ಆಧಾರದಲ್ಲಿ ಹೇಳುವುದಾದರೆ, ಪ್ರತಿ ಕೇಂದ್ರದಲ್ಲೂ ವರ್ಷದಿಂದ ವರ್ಷಕ್ಕೆ ವಾಯುಮಾಲಿನ್ಯದ ಪ್ರಮಾಣ ಹೆಚ್ಚಳವಾಗ್ತಿರೋದು ಅಂಕಿ ಅಂಶಗಳಲ್ಲಿ ತಿಳಿಯುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಂಗಳೂರು ಮತ್ತೊಂದು ದೆಹಲಿ ಆಗಬಹುದು ಎಂದು ಬೆಂಗಳೂರಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಹೊಸ ವಾಹನಗಳ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಇದರಿಂದ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣವು ಹೆಚ್ಚುತ್ತಿದ್ದು, ಜನರಿಗೆ ಉಸಿರಾಟದ ಸಮಸ್ಯೆ ಹೆಚ್ವಾಗುವ ಭಯ ಹೆಚ್ಚಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ