ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ್ತಿದ್ದ ಬಾವನನ್ನೇ ಚಾಕುವಿನಿಂದ ಇರಿದು ಭಯಾನಕವಾಗಿ ಕೊಂದ ಬಾಮೈದ
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕೊಲೆ ಆರೋಪಿ ವಿಶ್ವನಾಥ್ನನ್ನು ಕೊಲೆಯಾದ ಬಾವ ವೆಂಕಟಾಚಲಪತಿ, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಅಷ್ಟೇ ಅಲ್ಲದೆ 15 ದಿನಗಳ ಹಿಂದೆ ವಿಶ್ವನಾಥ್ಗಾಗಿ ವೆಂಕಟಾಚಲಪತಿಯವರು ಹೊಸಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆ ಸಹ ಮಾಡಿದ್ದರು. ಆದರೆ ಇಷ್ಟೆಲ್ಲಾ ಸಹಾಯ ಮಾಡಿದ ಬಾವನನ್ನೇ ಕೊಲೆ ಮಾಡಿದ್ದಾನೆ.
ಬೆಂಗಳೂರು, ಸೆ.09: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಬಾವನನ್ನೇ ಬಾಮೈದ ಕೊಂದ (Murder) ಭಯಾನಕ ಘಟನೆ ಬ್ಯಾಟರಾಯನಪುರದ ಸ್ಯಾಟ್ಲೈಟ್ ಬಸ್ ನಿಲ್ದಾಣದ (Starlight Bus Stop) ಬಳಿ ನಡೆದಿದೆ. ವೆಂಕಟಾಚಲಪತಿ(46) ಕೊಲೆ ಮಾಡಿದ ಆರೋಪಿ ವಿಶ್ವನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕೊಲೆ ಆರೋಪಿ ವಿಶ್ವನಾಥ್ನನ್ನು ಕೊಲೆಯಾದ ಬಾವ ವೆಂಕಟಾಚಲಪತಿ, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಅಷ್ಟೇ ಅಲ್ಲದೆ 15 ದಿನಗಳ ಹಿಂದೆ ವಿಶ್ವನಾಥ್ಗಾಗಿ ವೆಂಕಟಾಚಲಪತಿಯವರು ಹೊಸಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆ ಸಹ ಮಾಡಿದ್ದರು. ಆದರೆ ಇಷ್ಟೆಲ್ಲಾ ಸಹಾಯ ಮಾಡಿದ ಬಾವನನ್ನೇ ಕೊಲೆ ಮಾಡಿದ್ದಾನೆ.
ಕೊಲೆಯಾದ ವೆಂಕಟಾಚಲಪತಿ ಟಿ.ಆರ್.ಮಿಲ್ ನಿವಾಸಿ. ಇನ್ನು ಮತ್ತೊಂದೆಡೆ ಆರೋಪಿ ವಿಶ್ವನಾಥ್ನನ್ನು ಮಾತಾಡಿಸಲು ಮನೆಗೆ ಬಂದಿದ್ದ ಸಹೋದರಿಯ ಮೇಲೂ ವಿಶ್ವನಾಥ್ ದರ್ಪ ಮೆರೆದಿದ್ದಾನೆ. ಸಹೋದರಿಗೂ ಥಳಿಸಿ ಮನೆಯಿಂದ ಹೊರದಬ್ಬಿದ್ದಾನೆ. ಇದನ್ನು ಪ್ರಶ್ನಿಸಲು ವಿಶ್ವನಾಥ್ ಮನೆಗೆ ವೆಂಕಟಾಚಲಪತಿ ಬಂದಾಗ ಚಾಕುವಿನಿಂದ ಹಲ್ಲೆ ನಡೆಸಿ 10ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ. ಕೊಲೆಗೈದ ನಂತರ ಮನೆ ಹೊರಗೆ ಚಾಕು ಹಿಡಿದು ಓಡಾಡುತ್ತ ಪಕ್ಕದ ಮನೆಯವರಿಗೆ ನಮ್ಮ ಬಾವನನ್ನು ಕೊಂದಿದ್ದೇನೆ ಎಂದು ಕಿರುಚಾಡಿದ್ದಾನೆ. ಈ ವಿಷಯ ಕಿವಿಗೆ ಬೀಳುತ್ತಿದ್ದಂತೆ ಕೂಡಲೇ ಸ್ಥಳೀಯರು ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ವಿಶ್ವನಾಥ್ನನ್ನು ಬಂಧಿಸಿದ್ದಾರೆ. ವೆಂಕಟಾಚಲಪತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ತುಮಕೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಓರ್ವ ಬಾಲಕಿ ಸೇರಿ ಆರು ಸಾವು
ಚಾಕುವಿನಿಂದ ಇರಿದು ಮಹಿಳೆಯ ಕೊಲೆಗೆ ಯತ್ನ
ಚಾಕುವಿನಿಂದ ಇರಿದು ಮಹಿಳೆಯ ಕೊಲೆಗೆ ಯತ್ನಿಸಲಾಗಿದೆ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಮಡಕಿ ತಾಂಡಾದಲ್ಲಿ ಸವಿತಾ ಎಂಬುವರ ಕತ್ತು ಕೊಯ್ದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ. ಬೆಳಗ್ಗೆ ಕ್ರೂಸರ್ ವಾಹನದಲ್ಲಿ ಊರಿಗೆ ಹೊರಟಿದ್ದ ಸವಿತಾ ಮತ್ತು ಆ ವ್ಯಕ್ತಿ ಹೊರಟಿದ್ರು. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದುಮ, ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ