ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಡಿಕೆಶಿ ಡೆಡ್​​ಲೈನ್: ಇಲ್ಲದಿದ್ದರೆ ಸಸ್ಪೆಂಡ್​ ಫಿಕ್ಸ್​ ಎಂದ ಡಿಸಿಎಂ

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಬಗ್ಗೆ ಟಿವಿ9 ಅಭಿಯಾನ ನಡೆಸಿತ್ತು. ಸದ್ಯ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್​​ ಬಿಬಿಎಂಪಿ ಹಿರಿಯ ಅಧಿಕಾರಿಗಳ ಜೊತೆ ಇಂದು ಸಭೆ ಮಾಡಿದ್ದಾರೆ. 15 ದಿನದಲ್ಲಿ ರಸ್ತೆಗುಂಡಿ ಮುಚ್ಚಬೇಕು, ಇಲ್ಲಂದ್ರೆ ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಡಿಕೆಶಿ ಡೆಡ್​​ಲೈನ್: ಇಲ್ಲದಿದ್ದರೆ ಸಸ್ಪೆಂಡ್​ ಫಿಕ್ಸ್​ ಎಂದ ಡಿಸಿಎಂ
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಡಿಕೆಶಿ ಡೆಡ್​​ಲೈನ್: ಇಲ್ಲದಿದ್ದರೆ ಸಸ್ಪೆಂಡ್​ ಫಿಕ್ಸ್​ ಎಂದ ಡಿಸಿಎಂ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2024 | 4:47 PM

ಬೆಂಗಳೂರು, ಸೆಪ್ಟೆಂಬರ್​ 08: ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಸಂಬಂಧ ಬಿಬಿಎಂಪಿ ಹಿರಿಯ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​​ ಇಂದು ಸಭೆ ಮಾಡಿದ್ದಾರೆ. ಮಲ್ಲೇಶ್ವರದ ವೈಯಾಲಿಕಾವಲ್ ನ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್, ವಿಶೇಷ ಕಮಿಷನರ್ ಮುನಿಶ್ ಮೌದ್ಗೀಲ್, ಬಿಎಂಆರ್ಡಿಎ ಕಮಿಷನರ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ಧರು.

ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಲ್ಲಿ ಮಳೆ ಆಗುತ್ತೆ, ಎಚ್ಚರಿಕೆಯಿಂದ ಇರಿ. 15 ದಿನದಲ್ಲಿ ಎಲ್ಲಾ ರಸ್ತೆಗುಂಡಿ ಮುಚ್ಚಬೇಕು, ಇಲ್ಲದಿದ್ದರೆ ಆ್ಯಕ್ಷನ್​ ಗ್ಯಾರಂಟಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ದೂರು ಬರಬಾರದು. ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಟ್ವೀಟ್​

ಸೆಪ್ಟೆಂಬರ್‌ 15ರ ನಂತರ ಸಿಟಿ ರೌಂಡ್ಸ್‌

ಸೆಪ್ಟೆಂಬರ್‌ 15ರ ನಂತರ ಸಿಟಿ ರೌಂಡ್ಸ್‌ ಹಾಕುತ್ತೇನೆ. ಎಷ್ಟು ಅಧಿಕಾರಿಗಳು ಸಸ್ಪೆಂಡ್ ಆಗುತ್ತಾರೆಂದು ಗೊತ್ತಿಲ್ಲ. ನೀರು ನಿಂತುಕೊಳ್ಳುವ ಜಾಗಗಳ ಬಗ್ಗೆ ಗಮನ ಕೊಡಿ. ಅಪಾಯಕಾರಿ ಮರಗಳಿದ್ದರೆ ಕತ್ತರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇನ್ನು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುತ್ತೇವೆ ಎಂದು ಎಲ್ಲಾ ಶಾಲೆಗಳಲ್ಲಿ ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು 15 ದಿನ ಗಡುವು: ಅಧಿಕಾರಿಗಳಿಗೆ ಡಿಕೆ ಶಿವಕುಮಾರ್​ ತಾಕೀತು

ಸಭೆ ಬಳಿಕ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್​, ನಾನು ಒಂದು ವಾರ ಇರಲ್ಲ, ಅಮೆರಿಕ ಪ್ರವಾಸ ಕೈಗೊಂಡಿದ್ದೇನೆ. ಅಮೆರಿಕದಲ್ಲಿ ಖಾಸಗಿ ಕಾರ್ಯಕ್ರಮವಿದೆ, ಯಾರನ್ನೂ ಭೇಟಿ ಆಗಲ್ಲ. ವಿಶೇಷ ಫ್ಯಾಮಿಲಿ ಟ್ರಿಪ್ ಇದು, ಕುಟುಂಬ ಸಮೇತ ಹೋಗುತ್ತಿದ್ದೇವೆ. ಸೆ.15 ವರೆಗೆ ರಸ್ತೆ ಗುಂಡಿ ಮುಚ್ಚಿ ಎಂದು ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.