ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವಾಯು ಮಾಲಿನ್ಯ (Air Pollution) ಪ್ರಮಾಣ ಹೆಚ್ಚಾಗಿದ್ದು, ಕೆಎಸ್ಪಿಸಿಬಿ ಅಧ್ಯಯನದಲ್ಲಿ (KSPCB Study) ಆಶ್ಚರ್ಯಕರ ಸಂಗತಿ ಬಯಲಾಗಿದೆ. ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಸಾರಿಗೆ ವ್ಯವಸ್ಥೆ, ಸಿಟಿಯ ಟ್ರಾಫಿಕ್ ಜಾಮ್, ಟ್ರಾಫಿಕ್ ಸಿಗ್ನಲ್, ರಸ್ತೆ ಕಾಮಗಾರಿ ವಿಳಂಬವೇ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕೊವಿಡ್ ಪ್ರಕರಣಗಳು ಹೆಚ್ಚಾಗಿದ್ದ ವೇಳೆ ವಾಯು ಮಾಲಿನ್ಯ ತಗ್ಗಿತ್ತು. ಆದರೆ ಇದೀಗ ಯಥಾಸ್ಥಿತಿ ಕೆಲಸಗಳು ಶುರುವಾಗಿರುವ ಹಿನ್ನೆಲೆ ವಾಯು ಮಾಲಿನ್ಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಾಯು ಮಾಲಿನ್ಯದ ಹೆಚ್ಚಳವಾಗುತ್ತಿರುವುದನ್ನು ಕಂಡು ಸದ್ಯ ಕೆಎಸ್ಪಿಸಿಬಿ ತಲೆಕಡೆಸಿಕೊಂಡಿದೆ.
ಇನ್ನು ನಗರದ ಮಾಲಿನ್ಯಕ್ಕೆ ಸಾರಿಗೆ ವ್ಯವಸ್ಥೆಯೇ ಮೂಲ ಕಾರಣ. ಶೇಕಡಾ 63.5 ರಷ್ಟು ಮಾಲಿನ್ಯ ವಾಹನಗಳಿಂದ ಆಗುತ್ತಿದೆ. ಜೊತೆಗೆ ರಸ್ತೆ ಕಾಮಗಾರಿ, ಇಂಡಸ್ಟ್ರೀಸ್, ಹೋಟೆಲ್, ಟ್ರಾಫಿಕ್ ಸಿಗ್ನಲ್ನಿಂದ ಅಧಿಕ ವಾಯು ಮಾಲಿನ್ಯವಾಗುತ್ತಿದೆ. ಈ ಹಿನ್ನೆಲೆ ಸಾರಿಗೆ ಇಲಾಖೆ ಜತೆ ಚರ್ಚೆ ನಡೆಸಿ, ಎಲೆಕ್ಟ್ರಿಕಲ್ ಬಸ್ ಖರೀದಿಗೆ ಮನವಿ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಗಾಂಜಾ ಮತ್ತಲ್ಲಿ ದರೋಡೆ: ರಾಬರಿ ಮಾಡಿದ ಹಣದಲ್ಲಿ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪ್ರಾಯಶ್ಚಿತ
ಯಾವುದರಿಂದ ಎಷ್ಟು ಮಾಲಿನ್ಯ?:
ಸಾರಿಗೆ – 63.5%,
ರೋಡ್ ಡಸ್ಟ್ – 6.8%,
ವೇಸ್ಟ್ ಬರ್ನಿಂಗ್ -9.6%,
ಹೋಟೆಲ್ – 3.7%,
ಇಂಡಸ್ಟ್ರಿ- 0.1%.
ಇಂಧನ ನೀತಿ ಸಂಸ್ಥೆ ಹೇಳಿದ್ದೇನು?:
ಭಾರತದಲ್ಲಿ ವಾಯು ಮಾಲಿನ್ಯದಿಂದ ಮನುಷ್ಯರ ಆರೋಗ್ಯದ ಮೇಲೆ ಭಾರೀ ಪರಿಣಾಮಗಳು ಉಂಟಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಭಾರತೀಯರು ಸರಾಸರಿ 5 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ ತಿಳಿಸಿದೆ. ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ ಜೂನ್ 14ಕ್ಕೆ ಬಿಡುಗಡೆ ಆಗಿರುವ ಪಟ್ಟಿಯಲ್ಲಿ ಈ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: WI vs IND: ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಂಡ ವೆಸ್ಟ್ ಇಂಡೀಸ್ ಲೆಜೆಂಡ್ ಕ್ರಿಕೆಟಿಗ
Published On - 11:08 am, Sun, 24 July 22