ಗಾಂಜಾ ಮತ್ತಲ್ಲಿ ದರೋಡೆ: ರಾಬರಿ ಮಾಡಿದ ಹಣದಲ್ಲಿ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪ್ರಾಯಶ್ಚಿತ
ರಾಬರಿ ಮಾಡಿದ್ದ ಬೈಕ್ನಲ್ಲಿಯೇ ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ನಂತರ ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಚೈನ್, ಉಂಗುರ ಮಾರಾಟ ಮಾಡಿದ್ದಾರೆ.
ಬೆಂಗಳೂರು: ಗಾಂಜಾ ಮತ್ತಲ್ಲಿ ಲಾಂಗ್ ತೋರಿಸಿ 50 ಸಾವಿರ ಮೌಲ್ಯದ ಎರಡು ಚಿನ್ನದ ಉಂಗುರ, 1.40 ಲಕ್ಷ ಮೌಲ್ಯದ 28 ಗ್ರಾಂ ಚಿನ್ನದ ಸರ ಮತ್ತು 20 ಸಾವಿರ ನಗದು ಹಾಗೂ ಮೊಬೈಲ್ ಕಸಿದು ಪರಾರಿಯಾಗಿರುವಂತಹ ಘಟನೆ ನಗರದ ಗಿರಿನಗರದ ಬ್ಯಾಂಕ್ ಕಾಲೋನಿ ಬಳಿ ನಡೆದಿದೆ. ಗಿರಿನಗರದ ಬ್ಯಾಂಕ್ ಕಾಲೋನಿ ಬಳಿ ಬಾರ್ನಲ್ಲಿ ಕುಡಿದು ಹೊರಗೆ ಕುಳಿತಿದ್ದ ಲೋಕೆಶ್ (47)ಎಂಬ ವ್ಯಕ್ತಿ, ಈ ವೇಳೆ ಒಂದೇ ಬೈಕ್ನಲ್ಲಿ ಶ್ರೀಧರ್, ನಿತಿನ್ ರಾಜ್ ಸೇರಿ ಮೂವರು ಆಗಮಿಸಿದ್ದು, ಲಾಂಗ್ನಿಂದ ಹಲ್ಲೆ ಮಾಡಿ ಕಿರಾತಕರು ರಾಬರಿ ಮಾಡಿದ್ದಾರೆ. ಮೊಬೈಲ್ ಪಾಸ್ ವರ್ಡ್ ಹೇಳದಿದ್ದಾಗ ಮಂಡಿ ಮತ್ತು ಭುಜಕ್ಕೆ ಲಾಂಗ್ನಿಂದ ಹಲ್ಲೆ ಮಾಡಿ, ನಂತರ ಲೋಕೇಶ್ನದ್ದೇ ಬುಲೆಟ್ ಬೈಕ್ ಜೊತೆಗೆ ಪರಾರಿಯಾಗಿದ್ದಾರೆ. ಸದ್ಯ ಇಬ್ಬರು ಬಾಲಾಪರಾಧಿ ಸೇರಿ ನಾಲ್ವರು ಅಂದರ್ ಆಗಿದ್ದು, ಶ್ರೀಧರ್ (29),ನಿತಿನ್ ರಾಜ್ @ ಲೊಡ್ಡೆ (18) ಬಂಧಿತ ಆರೋಪಿಗಳು. ಆರೋಪಿ ಶ್ರೀಧರ್ ಎಂಬಿಎ ಪದವೀಧರನಾಗಿದ್ದಾನೆ. ಆರೋಪಿಗಳನ್ನು ಬಂಧಿಸಿ ಗಿರಿನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಬರಿ ಮಾಡಿದ ಹಣದಲ್ಲಿ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪ್ರಾಯಶ್ಚಿತ
ರಾಬರಿ ಮಾಡಿದ್ದ ಬೈಕ್ನಲ್ಲಿಯೇ ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ನಂತರ ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಚೈನ್, ಉಂಗುರ ಮಾರಾಟ ಮಾಡಿದ್ದಾರೆ. ಬಂದ ಹಣದೊಂದಿಗೆ ಗೋವಾಗೆ ಹೋಗಿ ಮೋಜು ಮಸ್ತಿ ಮಾಡಿದ್ದಾರೆ. ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಬುಲೆಟ್ ಬೈಕ್ನಲ್ಲೇ ಸುತ್ತಾಡಿದ್ದು, ಈ ವೇಳೆ ಗಿರಿನಗರ ಪೊಲೀಸರ ಕೈಗೆ ಆರೋಪಿಗಳು ಲಾಕ್ ಆಗಿದ್ದಾರೆ. ಕೈತುಂಬ ಸಂಬಳ, ಮುದ್ದಾದ ಹೆಂಡತಿ, ಪುಟ್ಟ ಮಗು ಇದ್ದರು ರಾಬರಿಗೆ ಇಳಿದಿದ್ದರು. ಬೆಟ್ಟಿಂಗ್ ಆಡಿ ಅಡ್ಡದಾರಿ ಹಿಡಿದು ಜೈಲು ಸೇರಿದ ಕ್ರಿಮಿ. ಬೆಟ್ಟಿಂಗ್ ಆಡಿ ಮೈ ತುಂಬ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟಕ್ಕೆ ಮನೆ ತೊರೆದು ಕಂಡ ಕಂಡ ಕಡೆ ಠಿಕಾಣಿ ಹೂಡ್ತಿದ್ದ. ಪುಂಡರ ಜೊತೆಗೆ ಸೇರಿ ರಾಬರಿ ಮಾಡೊ ಕೆಲಸಕ್ಕೆ ಕೈ ಹಾಕಿದ್ದ. ಮಾಡಿದ್ದ ತಪ್ಪಿಗೆ ವಿದ್ಯಾವಂತ ವ್ಯಕ್ತಿ ಜೈಲು ಸೇರಿದ.
ಚಂದಾಪುರ ಪಟ್ಟಣದಲ್ಲಿ MRF ಟೈರ್ ಶೋರೂಂ ಕಳ್ಳತನ
ಕಲಬುರಗಿ: ಚಂದಾಪುರ ಪಟ್ಟಣದಲ್ಲಿ MRF ಟೈರ್ ಶೋರೂಂ ಕಳ್ಳತನವಾಗಿರುವಂತಹ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿ ನಡೆದಿದೆ. 20 ಲಕ್ಷ ರೂಪಾಯಿ ಮೌಲ್ಯದ 53 ಲಾರಿ ಟೈರ್‌ಗಳ ಕಳ್ಳತನವಾಗಿದ್ದು, ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ, ಶೆಟರ್ ಮುರಿದು ಕಳ್ಳರು ಟೈರ್ ಹೊತ್ತೊಯ್ದಿದ್ದಾರೆ. ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕೆಲ ಸಿಸಿ ಕ್ಯಾಮರಾ ಕ್ಲೋಸ್ ಮಾಡಿದ್ದ ಖದೀಮರು, ಕೆಲ ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಕಳೆದ 6 ತಿಂಗಳಲ್ಲಿ ಮೂರನೇ ಬಾರಿ ಎಮ್‌ಆರ್‌ಎಫ್ ಟೈರ್ ಶೋ ರೂಂ ಕಳ್ಳತನವಾಗಿದ್ದು, ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ
ಪಾಲಿಕೆಯ ಆಟೋ ಟಿಪ್ಪರ ಅಪಘಾತ, ಚಾಲಕ ಸಾವು
ಹುಬ್ಬಳ್ಳಿ: ಪಾಲಿಕೆಯ ಆಟೋ ಟಿಪ್ಪರ ಅಪಘಾತವಾಗಿದ್ದು, ಚಾಲಕ ಸಾವನ್ನಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಎತ್ತುವ ಆಟೋ ಟಿಪ್ಪರ್ ಅಪಘಾತಕ್ಕೀಡಾಗಿದೆ. ಗೋಪನಕೊಪ್ಪದ ನಿವಾಸಿ ದುರ್ಗಪ್ಪ ಇಲಕಲ್ಲ (38) ಮೃತ ಪಟ್ಟ ಚಾಲಕ. ಆಟೋ ಟಿಪ್ಪರ್ ಎರ್ ಲಿಪ್ಟ್ ದುರಸ್ತಿ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ತಲೆಯ ಮೇಲೆ ಎರ್ ಲಿಫ್ಟ್ ಕಂಟೇನರ್ ಮುಗುಚಿ ಬಿದಿದ್ದು, ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಸಾವನ್ನಪ್ಪಿದ್ದಾನೆ.
Published On - 9:52 am, Sun, 24 July 22