AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nelamangala: ಖರ್ಚಿಗೆ ಕಾಸಿಲ್ಲವೆಂದ ಲವ್ವರ್: ದೊಡ್ಡಪ್ಪನ ಮನೆಯಲ್ಲಿಯೇ ಕಳ್ಳತನ ಮಾಡಿಸಿ ಸಿಕ್ಕಿಬಿದ್ದ ಪ್ರಿಯತಮೆ

ಲವ್ವರ್​​ನ ಖರ್ಚಿಗಾಗಿ ಪ್ರಿಯತಮೆ ತನ್ನ ಸ್ವಂತಃ ದೊಡ್ಡಪ್ಪನ ಮನೆಯಲ್ಲಿಯೇ 90 ಸಾವಿರ ನಗದು, 200 ಗ್ರಾಂ ಚಿನ್ನಾಭರಣವನ್ನ ಆರೋಪಿ ದೋಚಿದ್ದರು.

Nelamangala: ಖರ್ಚಿಗೆ ಕಾಸಿಲ್ಲವೆಂದ ಲವ್ವರ್: ದೊಡ್ಡಪ್ಪನ ಮನೆಯಲ್ಲಿಯೇ ಕಳ್ಳತನ ಮಾಡಿಸಿ ಸಿಕ್ಕಿಬಿದ್ದ ಪ್ರಿಯತಮೆ
30ಸಾವಿರ ನಗದು,200ಗ್ರಾಂ ನಷ್ಟು ಚಿನ್ನಾಭರಣಗಳು ಜಪ್ತಿ
TV9 Web
| Edited By: |

Updated on: Jul 24, 2022 | 8:50 AM

Share

ಬೆಂಗಳೂರು ಗ್ರಾಮಾಂತರ: ಲವ್ವರ್ ಖರ್ಚಿಗೆ ಕಾಸಿಲ್ಲ ಎಂದಿದ್ದಕ್ಕೆ ತನ್ನ ದೊಡ್ಡಪ್ಪನ ಮನೆಯಲ್ಲಿಯೇ ಕಳ್ಳತನ (theft) ಮಾಡಿಸಿದ್ದ ಪ್ರಿಯತಮೆ ಹಾಗೂ ಪ್ರಿಯಕರನನ್ನ ಪೊಲೀಸರು ಬಂಧಿಸಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ನೆಲಗದಿರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಿಕಾಂ ವಿದ್ಯಾರ್ಥಿನಿ ದೀಕ್ಷಿತಾ ಹಾಗೂ ಮೆಡಿಕಲ್ ವಿದ್ಯಾರ್ಥಿ ಮಧುನನ್ನ ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುಲೈ 8ರಂದು ಬೆಂಗಳೂರು ಉತ್ತರ ತಾಲೂಕಿನ ನೆಲಗದಿರನಹಳ್ಳಿಯಲ್ಲಿ ತಿಮ್ಮೇಗೌಡರ ಮನೆಯಲ್ಲಿ 90 ಸಾವಿರ ನಗದು, 200 ಗ್ರಾಂ ಚಿನ್ನಾಭರಣವನ್ನ ಆರೋಪಿ ದೋಚಿದ್ದರು. ಸದ್ಯ ಆರೋಪಿಗಳಿಂದ 30 ಸಾವಿರ ನಗದು, 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ

ಗಮನ ಬೇರೆಡೆ ಸೆಳೆಯಲು ಮಾಟ ಮಂತ್ರದ ನಾಟಕ: 

ಮಾಟ ಮಂತ್ರದ ವಸ್ತುಗಳನ್ನು ಮನೆಯ ಕಾಂಪೌಂಡ್​ನಲ್ಲಿ ಇಟ್ಟು ಮನೆಯವರ ಗಮನ ಬೇರೆಡೆ ಸೆಳೆದಿದ್ರು. ಮೆಡಿಕಲ್ ವಿದ್ಯಾರ್ಥಿಯಾದ ಲವ್ವರ್ ಮಧು ಪಿಪಿ ಕಿಟ್ ಹಾಕೊಂಡೆ ಬೈಕ್​ನಲ್ಲಿ ಬಂದು ಕೃತ್ಯವೆಸಗಿದ್ದ. ಮಾಟ ಮಂತ್ರದ ವಸ್ತುಗಳನ್ನು ಶುಚಿಗೊಳಿಸುವ ವೇಳೆ ಲವ್ವರ್ ಮಹಡಿಗೆ ತೆರಳಿ ಮನೆಯಲ್ಲಿದ್ದ, 90 ಸಾವಿರ ಹಣ, 200 ಗ್ರಾಂ ಚಿನ್ನಾಭರಣಗಳನ್ನ ದೋಚಿದ್ದಳು. ಆ ದಿನ ಅಪರಿಚಿತನೊಬ್ಬ ಯುವಕ ಪಿಪಿ ಕಿಟ್ ಹಾಕಿಕೊಂಡು ಬಂದಿರೋದು ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ಜಾಡು ಹಿಡಿದು ಮೊಬೈಲ್ ಟವರ್ ಲೋಕೇಷನ್ ಮೇಲೆ ತುಮಕೂರಿನ ಶಿರ ಬಳಿ ಆರೋಪಿ ಬಂಧನ ಮಾಡಿದ್ದು, ಪೊಲೀಸ್ ತನಿಖೆ ವೇಳೆ ಲವ್ವರ್ ದೀಕ್ಷಿತಾ ಮಾಸ್ಟರ್ ಮೈಂಡ್ ಬೆಳಕಿಗೆ ಬಂದಿದೆ. ಸದ್ಯ ಪ್ರಿಯತಮೆ ಜೊತೆ ಪ್ರಿಯಕರನೂ ಕಂಬಿ ಎಣಿಸುವಂತ್ತಾಗಿದೆ.

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು