ಎಲ್ಲಾ ಇಲಾಖೆಗಳು, ನಿಗಮಗಳ ಕಾಮಗಾರಿ ಬಿಲ್ ತಡೆ ವಾಪಸ್​: ರಾಜ್ಯ ಸರ್ಕಾರ ಆದೇಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 28, 2023 | 9:37 PM

ಎಲ್ಲಾ ಇಲಾಖೆಗಳು, ನಿಗಮಗಳ ಕಾಮಗಾರಿ ಬಿಲ್ ಬಿಡುಗಡೆ ಮಾಡುವಂತೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ಆ ಮೂಲಕ ಗುತ್ತಿಗೆದಾರರ ಒತ್ತಡಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ.

ಎಲ್ಲಾ ಇಲಾಖೆಗಳು, ನಿಗಮಗಳ ಕಾಮಗಾರಿ ಬಿಲ್ ತಡೆ ವಾಪಸ್​: ರಾಜ್ಯ ಸರ್ಕಾರ ಆದೇಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಎಲ್ಲಾ ಇಲಾಖೆಗಳು, ನಿಗಮಗಳ ಕಾಮಗಾರಿ ಬಿಲ್ ಬಿಡುಗಡೆ ಮಾಡುವಂತೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ಆ ಮೂಲಕ ಗುತ್ತಿಗೆದಾರರ ಒತ್ತಡಕ್ಕೆ ರಾಜ್ಯ ಸರ್ಕಾರ (govt) ಕೊನೆಗೂ ಮಣಿದಿದೆ. ಎಲ್ಲಾ ಇಲಾಖೆಗಳು, ಅಧೀನಕ್ಕೊಳಪಡುವ ಕಾಮಗಾರಿ ಬಿಲ್​ ಪಾವತಿ, ನೈಜತೆ, ನಿಯಮಾನುಸಾರ ಇದೆಯಾ ಎಂದು ಖಾತ್ರಿ ಪಡಿಸಿಕೊಂಡು ಸಂಬಂಧಿಸಿದ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ.ಏಕ್​ರೂಪ್​ ಕೌರ್​ರಿಂದ ಸುತ್ತೋಲೆ ಹೊರಡಿಸಲಾಗಿದೆ.

ಸುತ್ತೋಲೆಯಲ್ಲಿ ಏನಿದೆ?

  • ಎಲ್ಲಾ ಇಲಾಖೆಗಳು ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ, ಮಂಡಳಿ, ಪ್ರಾಧಿಕಾರಗಳ ಮುಂದುವರೆದ ಕಾಮಗಾರಿಗಳಿಗೆ ಸಂಬಂಧಿಸಿದಂತ ಬಿಲ್ಲುಗಳ ನೈಜತೆಯನ್ನು ಹಾಗೂ ನಿಯಮಾನುಸಾರವಿರುವುದನ್ನು ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವುದು.
  • ಎಲ್ಲಾ ಶಾಸನಬದ್ಧ ಪಾವತಿಗಳನ್ನು ಹಾಗೂ ಬಾಹ್ಯ ನೆರವಿನ ಮುಂದುವರೆದ ಯೋಜನಗಳಿಗೆ ಸಂಬಂಧಿಸಿದಂತ ಹಣ ಬಿಡುಗಡೆ ಮಾಡುವುದು.
  • ಮುಂದುವರಿದ ಕಾರ್ಯಕ್ರಮ/ಯೋಜನಗಳಿಗೆ ಸಂಬಂಧಿಸಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಗಳ ಸಂಬಂಧ ಹಣ ಬಿಡುಗಡೆ ಮಾಡಬಹುದಾಗಿದೆ.
  • ಪ್ರಾರಂಭವಾಗದಿರುವ ಕಾಮಗಾರಿಗಳ ಬಗ್ಗೆ ದಿನಾಂಕ: 22/5/2023ರ ನಿರ್ದೇಶನಗಳು ಮುಂದುವರೆಯುತ್ತವೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ದಾಸರಹಳ್ಳಿ ಕ್ಷೇತ್ರದ ಕಾಮಗಾರಿಯಲ್ಲಿ ಅಕ್ರಮ ಆರೋಪ: ಸ್ಪಷ್ಟನೆ ನೀಡಿದ ಜೆಡಿಎಸ್‌ ಶಾಸಕ R.ಮಂಜುನಾಥ್‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.