ಕೇಂದ್ರ ವಿವಿಗೆ ನಿಯೋಜನೆ.. ಬೆಂಗಳೂರು ವಿವಿಯಲ್ಲಿ ಪಾಠ! ಕೆಲ್ಸ ಒಂದು.. ಸಂಬಳ ಎರಡು!
ಬೆಂಗಳೂರು: ತಿಂಗಳ ಮೊದಲ ದಿನ ಬಂತು ಅಂದ್ರೆ ಸಾಕು, ಅಬ್ಬಾ ಸಂಬಳ ಆಯ್ತು ಅಂತಾ ಸಖತ್ ಖುಷಿ ಪಡ್ತೇವೆ. ಹೀಗಿದ್ದಾಗ ಡಬ್ಬಲ್ ಸಂಬಳ ಬಂದ್ರೆ ಹೇಗಿರಬೇಡ. ಅದು ಒಂದು ತಿಂಗಳಲ್ಲ. ಪ್ರತಿ ತಿಂಗಳು ಹೀಗೆ ಡಬ್ಬಲ್ ಸಂಬಳ ಬಂದ್ರೆ ಹೇಗಿರುತ್ತೆ ಹೇಳಿ. ಆದೇ ರೀತಿ ಉಪನ್ಯಾಸಕರು ಹೀಗೆ ಡಬ್ಬಲ್ ಸ್ಯಾಲರಿ ಪಡೆಯುತ್ತಿರುವ ಪ್ರಕರಣವೊಂದು ಬೆಂಗಳೂರು ವಿವಿಯಲ್ಲಿ ಬೆಳಕಿಗೆ ಬಂದಿದೆ. ಕೇಂದ್ರ ವಿವಿಗೆ ನಿಯೋಜನೆ, ಬೆಂಗಳೂರು ವಿವಿಯಲ್ಲಿ ಪಾಠ! ವಿದ್ಯಾರ್ಥಿಗಳಿಗೆ ಅನುಕೂಲವಾಗ್ಲಿ, ಆಡಳಿತ ಕೂಡ ಸುಗಮವಾಗಿರಲಿ ಅಂತಾ ಬೆಂಗಳೂರು […]
ಬೆಂಗಳೂರು: ತಿಂಗಳ ಮೊದಲ ದಿನ ಬಂತು ಅಂದ್ರೆ ಸಾಕು, ಅಬ್ಬಾ ಸಂಬಳ ಆಯ್ತು ಅಂತಾ ಸಖತ್ ಖುಷಿ ಪಡ್ತೇವೆ. ಹೀಗಿದ್ದಾಗ ಡಬ್ಬಲ್ ಸಂಬಳ ಬಂದ್ರೆ ಹೇಗಿರಬೇಡ. ಅದು ಒಂದು ತಿಂಗಳಲ್ಲ. ಪ್ರತಿ ತಿಂಗಳು ಹೀಗೆ ಡಬ್ಬಲ್ ಸಂಬಳ ಬಂದ್ರೆ ಹೇಗಿರುತ್ತೆ ಹೇಳಿ. ಆದೇ ರೀತಿ ಉಪನ್ಯಾಸಕರು ಹೀಗೆ ಡಬ್ಬಲ್ ಸ್ಯಾಲರಿ ಪಡೆಯುತ್ತಿರುವ ಪ್ರಕರಣವೊಂದು ಬೆಂಗಳೂರು ವಿವಿಯಲ್ಲಿ ಬೆಳಕಿಗೆ ಬಂದಿದೆ.
ಕೇಂದ್ರ ವಿವಿಗೆ ನಿಯೋಜನೆ, ಬೆಂಗಳೂರು ವಿವಿಯಲ್ಲಿ ಪಾಠ! ವಿದ್ಯಾರ್ಥಿಗಳಿಗೆ ಅನುಕೂಲವಾಗ್ಲಿ, ಆಡಳಿತ ಕೂಡ ಸುಗಮವಾಗಿರಲಿ ಅಂತಾ ಬೆಂಗಳೂರು ವಿಶ್ವವಿದ್ಯಾಲಯವನ್ನ ತ್ರಿಭಜನೆ ಮಾಡಲಾಯ್ತು. ಆದ್ರೆ ಸರ್ಕಾರ ಮಾಡಿದ ಈ ಒಂದು ನಿರ್ಧಾರ ಇದೀಗ ಸಮಸ್ಯೆಗಳ ಸರಮಾಲೆಯನ್ನೇ ತಂದಿದೆ. ಅಷ್ಟೇ ಅಲ್ಲ, ಬೆಂಗಳೂರು ವಿವಿ ಹಾಗೂ ಬೆಂಗಳೂರು ಕೇಂದ್ರ ವಿವಿಯ ನಡುವಿನ ಜಟಾಪಟಿ ಹೆಚ್ಚಾಗುತ್ತಲೇ ಇದೆ. ಅಂದಹಾಗೆ ಬೆಂಗಳೂರು ವಿಶ್ವವಿದ್ಯಾಲಯದ ಕೆಲ ಪ್ರೊಫೆಸರ್ಗಳನ್ನ, ನಿಯೋಜನೆ ಮೇರೆಗೆ ಬೆಂಗಳೂರು ಕೇಂದ್ರ ವಿವಿಗೆ ಕಳುಹಿಸಿ ಕೊಡಲಾಗಿದೆ.
ಆದ್ರೆ ಈ ಪ್ರೊಫೆಸರ್‌ಗಳು ನಿಯೋಜನೆಗೊಂಡಿರುವ ಕೇಂದ್ರ ವಿವಿಯಲ್ಲಿ ಉಪನ್ಯಾಸ ಮಾಡುವುದರ ಜೊತೆಗೆ ಬೆಂಗಳೂರು ವಿವಿಯಲ್ಲೂ ಪಾಠ ಮಾಡುತ್ತಿದ್ದಾರೆ. ಇಷ್ಟೇ ಆಗಿದ್ರೆ ಪರವಾಗಿರಲಿಲ್ಲ, ಹೀಗೆ ಎರಡು ಕಡೆ ಪಾಠ ಮಾಡುತ್ತ, ಡಬಲ್ ಡಬಲ್ ಸ್ಯಾಲರಿಯನ್ನ ಜೇಬಿಗಿಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಂಗಳೂರು ವಿವಿ ಕುಲಪತಿಗಳನ್ನ ಕೇಳಿದ್ರೆ ಎರಡು ಕಡೆ ಕೆಲಸ ಮಾಡೋಂಗಿಲ್ಲ. ಒಂದು ವೇಳೆ ಆ ರೀತಿ ಎರಡು ಕಡೆ ಪಾಠ ಮಾಡಿದ್ರೂ, ವೇತನ ಮಾತ್ರ ಒಂದೇ ಪಡೆಯಬೇಕು ಎಂದಿದ್ದಾರೆ.
ಬೆಂಗಳೂರು ವಿವಿಯಿಂದ 18 ಉಪನ್ಯಾಸಕರು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ. ಅದೇ ರೀತಿ ಬೆಂಗಳೂರು ಕೇಂದ್ರ ವಿವಿಯಿಂದ, ಬೆಂಗಳೂರು ವಿವಿಗೂ ಹಲವು ಉಪನ್ಯಾಸಕರು ನಿಯೋಜನೆಗೊಂಡಿದ್ದಾರೆ. ಆದ್ರೂ ವಿವಿಯ ಹಲವು ವಿಭಾಗಗಳು ಪ್ರೊಫೆಸರ್‌ಗಳು ಇಲ್ಲದೇ ಖಾಲಿ ಹೊಡೆಯುತ್ತಿವೆ.
ಡಬಲ್ ಸಂಬಳ ತೆಗೆದುಕೊಂಡ್ರೂ, ಆಗೊಮ್ಮೆ, ಈಗೊಮ್ಮೆ ಕ್ಲಾಸಿಗೆ ಬಂದು ಹೋಗ್ತಿದ್ದಾರೆ. ಈ ಬಗ್ಗೆ ಬೆಂಗಳೂರು ಕೇಂದ್ರ ವಿವಿಯ ವಿಸಿ ಕೇಳಿದ್ರೆ, ನನಗೇನೂ ಗೊತ್ತಿಲ್ಲ. ರಿಜಿಸ್ಟ್ರಾರ್ ಹತ್ತಿರ ಡಿಟೇಲ್ಸ್ ಇದೆ ಕೇಳಿ ಅಂತಾರೆ. ಒಟ್ನಲ್ಲಿ ಬೆಂಗಳೂರು ವಿವಿಗಳ ಪ್ರೊಫೆಸರ್‌ಗಳ ಕೆಲಸ, ಹಾಗೂ ಅವ್ರು ತೆಗೆದುಕೊಳ್ಳುತ್ತಿರೋ ಡಬಲ್ ಡಬಲ್ ಸ್ಯಾಲರಿ ನೋಡಿದ್ರೆ, ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಅಂತಾಗಿದೆ.