ಬೆಂಗಳೂರಿನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಹೆಸರಿನಲ್ಲಿ ಸುಲಿಗೆ ಆರೋಪ: ಟ್ವೀಟ್ ಮೂಲಕ ಕಮಿಷನರ್​ಗೆ ದೂರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 24, 2024 | 10:24 PM

ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆ ಬೈಕ್​ನಲ್ಲಿ ಬರುತ್ತಿದ್ದ ವೇಳೆ ತಪಾಸಣೆ ಮಾಡದೆಯೇ ಪೊಲೀಸರಿಂದ ಹಣಕ್ಕೆ ಬೇಡಿಕೆ ಜೊತೆಗೆ ಕುಡಿದು ವಾಹನ ಚಾಲನೆ ಮಾಡ್ತಿದ್ದೀರಾ ಎಂದು ಹೆದರಿಸಿ, ಐದು ಸಾವಿರ ಹಣ ಸುಲಿಗೆ ಮಾಡಿದ ಆರೋಪ ಜೀವನ್ ಭೀಮಾ ನಗರ ಸಂಚಾರ ಠಾಣೆ (Jeevan Bhima Nagara Police Station) ಪೊಲೀಸರ ವಿರುದ್ಧ ಕೇಳಿಬಂದಿದೆ.

ಬೆಂಗಳೂರಿನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಹೆಸರಿನಲ್ಲಿ ಸುಲಿಗೆ ಆರೋಪ: ಟ್ವೀಟ್ ಮೂಲಕ ಕಮಿಷನರ್​ಗೆ ದೂರು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಫೆ.24: ಬೆಂಗಳೂರಿನಲ್ಲಿ ಡ್ರಂಕ್ ಅಂಡ್​ ಡ್ರೈವ್ ತಪಾಸಣೆ ಹೆಸರಿನಲ್ಲಿ ನಿನ್ನೆ(ಫೆ.24) ರಾತ್ರಿ ಮಹಿಳೆಯಿಂದ  ಗೂಗಲ್​ಪೇ ಮೂಲಕ ಹಣ ಪಡೆದ ಆರೋಪ ಜೀವನ್ ಭೀಮಾ ನಗರ ಸಂಚಾರ ಠಾಣೆ (Jeevan Bhima Nagara Police Station) ಪೊಲೀಸರ ವಿರುದ್ಧ ಕೇಳಿಬಂದಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆ ಬೈಕ್​ನಲ್ಲಿ ಬರುತ್ತಿದ್ದ ವೇಳೆ ತಪಾಸಣೆ ಮಾಡದೆಯೇ ಪೊಲೀಸರಿಂದ ಹಣಕ್ಕೆ ಬೇಡಿಕೆ ಜೊತೆಗೆ ಕುಡಿದು ವಾಹನ ಚಾಲನೆ ಮಾಡ್ತಿದ್ದೀರಾ ಎಂದು ಹೆದರಿಸಿದ್ದಾರೆ. ಮೊದಲಿಗೆ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಟ್ರಾಫಿಕ್ ಪೊಲೀಸರು, ನಂತರ ಗೂಗಲ್ ಪೇ ಮೂಲಕ 5 ಸಾವಿರ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಹಿಳೆಯ ತಂದೆ ಎಕ್ಸ್ ಆ್ಯಪ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಯುವತಿಯೊಂದಿಗೆ ಸಲುಗೆ; ಯುವಕನನ್ನು ಠಾಣೆಗೆ ಕರೆತಂದು ಚಿತ್ರಹಿಂಸೆ ಆರೋಪ

ಕೋಲಾರ: ಯುವತಿಯೊಂದಿಗೆ ಸಲುಗೆಯಿಂದ ಇದ್ದ ಹಿನ್ನಲೆ, ಯುವಕನ ಮೇಲೆ ಕಳ್ಳತನ ಆರೋಪದಡಿ ಪೊಲೀಸ್ ಠಾಣೆಗೆ ಕರೆತಂದು ಚಿತ್ರಹಿಂಸೆ ಮಾಡಿದ ಆರೋಪ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸರ ವಿರುದ್ದ ಕೇಳಿಬಂದಿದೆ. ಗೋಣಿಕೊಪ್ಪ ಗ್ರಾಮದ ರಮೇಶ್ ಎನ್ನುವರ ಮನೆಯಲ್ಲಿ 1 ಲಕ್ಷ ಹಣ ಕಳುವಾಗಿರೊ ಆರೋಪ‌ ಹೊರಿಸಿ ಫೆ.22 ರಂದು ತಿಪ್ಪದೊಡ್ಡಿ ಗ್ರಾಮದ 19 ವರ್ಷದ ಯುವಕರಾದ ಗುರುಮೂರ್ತಿ ಮತ್ತು ಶಿವುರನ್ನು ಪೊಲೀಸರು ಬಂಧಿಸಿದ್ದರು. ನಂತರ ಠಾಣೆಗೆ ಕರೆತಂದು ಪೊಲೀಸರಿಂದ ಹಲ್ಲೆ ಮಾಡಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಅರ್ಜುನ್ ಗೌಡ ವಿರುದ್ದ ಆರೋಪ ಕೇಳಿಬಂದಿದ್ದು, ಯುವಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಲಕ್ನೋ: ಏರ್​ಪೋರ್ಟ್​ನಲ್ಲಿ ತಪಾಸಣೆ ವೇಳೆ ವ್ಯಕ್ತಿಯ ಬಳಿ ಸಜೀವ ಗುಂಡುಗಳು ಪತ್ತೆ, ಬಂಧನ

ಮನೆ ಮುಂದೆ ಹೊಂಚು ಹಾಕಿ ನಾಯಿಯನ್ನ ಹೊತ್ತೊಯ್ದ ಚಿರತೆ

ಉತ್ತರ ಕನ್ನಡ: ಚಿರತೆಯೊಂದು ಮನೆ ಮುಂದೆ ಹೊಂಚು ಹಾಕಿ ನಾಯಿಯನ್ನ ಹೊತ್ತೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬೆಳ್ಳಕ್ಕಿ ಗ್ರಾಮದ ದತ್ತಾತ್ರೇಯ ಭಟ್ ಎಂಬುವವರ ಮನೆಯಲ್ಲಿ ನಡೆದಿದೆ. ಮೊದಲ ಬಾರಿಗೆ ಚಿರತೆ ದಾಳಿ ಮಾಡುತ್ತಿದ್ದಂತೆ ಬಚಾವ ಆಗಿದ್ದ ನಾಯಿ, ಎರಡನೆ ಬಾರಿಗೆ ಮಲಗಿರುವಾಗ ನಾಯಿಯನ್ನ ಹೊತ್ತೊಯ್ದಿದೆ. ಮನೆಯಂಗಳಕ್ಕೆ ಚಿರತೆ ಎಂಟ್ರಿಕೊಟ್ಟ ವಿಡಿಯೋ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕುಮಟಾ ಭಾಗದಲ್ಲಿ ಆತಂಕ ಮೂಡಿಸಿದೆ. ಚಿರತೆಯನ್ನು ಆದಷ್ಟು ಬೇಗ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Sat, 24 February 24