ಬೆಂಗಳೂರು, ಮಾರ್ಚ್.13: ಕೆಂಗೇರಿ ಉಪ ವಿಭಾಗದಲ್ಲಿ ನಡೆದಿರುವ 200 ಅಕ್ರಮ `ಎ’ ಖಾತೆಗಳಿಗೆ ಸಂಬಂಧಿಸಿದಂತೆ ವಂಚಕರಾದ ಕಂದಾಯ ಅಧಿಕಾರಿ ಮತ್ತು ಸಹಾಯಕ ಕಂದಾಯ ಅಧಿಕಾರಿಗಳು ಸೃಷ್ಟಿಸಿರುವ ಮತ್ತಷ್ಟು ನಕಲಿ ದಾಖಲೆಗಳಿಗೆ ಸಂಬಂಧಿಸಿದಂತೆ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ್ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೇವರಾಜು ಮತ್ತು ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್ ಪಾಲಿಕೆಗೆ ಮಾಡಿರುವ ಬೃಹತ್ ಮಟ್ಟದ ವಂಚನೆಯು ನಿಜಕ್ಕೂ ಬೆಚ್ಚಿಬೀಳುವಂತಿದೆ. ಅಧಿಕಾರಿಗಳು ಪ್ರಭಾವಿ ಲ್ಯಾಂಡ್ ಡೆವ್ಹಪ್‌ರ್ಸ್ ಗಳೊಂದಿಗೆ ಸೇರಿ ಪುಟ್ಟಮ್ಮ ಎಂಬಾಕೆಯ ಹೆಸರಿನಲ್ಲಿ ಸುಮಾರು 10ಕ್ಕೂ ಹೆಚ್ಚು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದು, ಪುಟ್ಟಮ್ಮ ರವರ ಪತಿ ಮುನಿಯಪ್ಪ ನವರ ತಂದೆಯ ಹೆಸರನ್ನು ಗಾಳಪ್ಪ ಎಂಬುದಾಗಿ ನಕಲಿ ಮರಣ ಪತ್ರದ ದಾಖಲೆಗಳನ್ನು ಸೃಷ್ಟಿ ಮಾಡಿ ದೊಖಾ ಮಾಡಿದ್ದಾರೆ.
ಇನ್ನೂ ಮತ್ತೊಂದು ನಿವೇಶನಕ್ಕೆ ಸಂಬಂಧಪಟ್ಟ ದಾಖಲೆಯಲ್ಲಿ ಇದೇ ಪುಟ್ಟಮ್ಮರವರ ಪತಿ ಮುನಿಯಪ್ಪನವರ ತಂದೆ ಪೆಂಟಗಪ್ಪ ಎಂಬುದಾಗಿ ನಕಲಿ ಮರಣ ಪತ್ರವನ್ನು ಸೃಷ್ಟಿಸಿ ನಕಲಿ ಖಾತೆ-ಪುಟ್ಟಮ್ಮ ಹೆಸರಿಗೆ ಮಾಡಲಾಗಿರುವ ನಿವೇಶನಗಳಿಗೆ ಸಂಬಂಧಿಸಿದಂತೆ ನಕಲಿ ಭೂ ಪರಿವರ್ತನಾ ಆದೇಶದ ದಾಖಲೆ ಕೂಡ ಸೃಷ್ಟಿಸಿ-ಪಾಲಿಕೆಯ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ನೀಡುವ ಇಲಾಖೆಯಲ್ಲಿ ಮುನಿಯಪ್ಪನವರ ತಂದೆಯ ಮರಣ ಪ್ರಮಾಣಪತ್ರದ ದಾಖಲೆಗಳನ್ನು ಪಡೆದುಕೊಳ್ಳಲಾಗಿದ್ದು KEN/D/2010/00316/ 000784 – Registration at 02/09/2010 ಎಂದು ನಮೂದಿಸಲಾಗಿರುವ ದಾಖಲೆ ದೊರೆತಿದೆ. ಅದರನ್ವಯ ಮುನಿಯಪ್ಪನವರ ತಂದೆ ಪೆಂಟಗಪ್ಪ ಎಂಬುದು ಧೃಢವಾಗಿರುತ್ತದೆ.
ಇದನ್ನೂ ಓದಿ: ಮಧುಮಗ ದೊಡ್ಡ ಕಾರಿನ ಮೇಲೆ ಉದ್ದೋಉದ್ದ ನಿಂತು ಮದುವೆ ಮೆರವಣಿಗೆ ಹೊರಟ, ಪೊಲೀಸರು ಏನು ಮಾಡಿದರು ನೋಡಿ!
ಆದರೆ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಮುನಿಯಪ್ಪನವರ ತಂದೆ ಗಾಳಪ್ಪ ಎಂಬುದಾಗಿ ತಿದ್ದಿ ಮರಣ ಪತ್ರಗಳನ್ನು ಸೃಷ್ಟಿಸಿ ಅಧಿಕಾರಿಗಳು ಕಳ್ಳಾಟವಾಡಿದ್ದಾರೆ. ವಿಶೇಷವೆಂದರೆ ಪೆಂಟಗಪ್ಪ ಮತ್ತು ಗಾಳಪ್ಪನವರ ನಕಲಿ ಮರಣ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ಕೆಂಗೇರಿ ವಿಭಾಗದ ಹಿರಿಯ ಆರೋಗ್ಯ ಪರಿವೀಕ್ಷಕರ ಕಛೇರಿಯಲ್ಲಿ ಒಂದೇ ಸಂಖ್ಯೆಯ ಖಾಲಿ ರಿಜಿಸ್ಟರ್ ರಸೀದಿಗಳನ್ನು ತೆಗೆದುಕೊಂಡು ಜೆರಾಕ್ಸ್ ಮಾಡಿ ಒಂದೊಂದು ಜೆರಾಕ್ಸ್ ಪ್ರತಿಯಲ್ಲಿ ಒಂದೊಂದು ಹೆಸರು ಮತ್ತು ದಿನಾಂಕವನ್ನು ನಮೂದಿಸಿ ನಕಲಿ ಮರಣ ಪ್ರಮಾಣ ಪತ್ರಗಳನ್ನು ಸೃಷ್ಟಿ ಮಾಡಿ ಅಧಿಕಾರಿಗಳಿಂದ ಮರಣ ಪ್ರಮಾಣ ಪತ್ರ ಹೆಸ್ರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿರೋದು ಬೆಳಕಿಗೆ ಬಂದಿದ್ದು, ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಬಿಬಿಎಂಪಿಯ ಕೆಂಗೇರಿ ಕಂದಾಯ ವಿಭಾಗದ ಅಧಿಕಾರಿಗಳ ಬಣ್ಣ ಬಗೆದಷ್ಟು ಬಯಲಾಗುತ್ತಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆನ್ನುವುದು ದೂರುದಾರರ ಆಗ್ರಹವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ