ಬೆಂಗಳೂರು: ಕಂದಾಯ ಸಚಿವರ ಹೆಸರೇಳಿಕೊಂಡು ಭಾರೀ ದಂಧೆ ನಡೆಯುತ್ತಿದೆ. ಕಂದಾಯ ಸಚಿವ ಆರ್.ಅಶೋಕ್(R Ashok) ಹೆಸರಿನಲ್ಲಿ ವರ್ಗಾವಣೆ ದಂಧೆ(Transfer Scam) ಆರೋಪ ಕೇಳಿ ಬಂದಿದೆ. ಅಶೋಕ್ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೂ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ವರ್ಗಾವಣೆ ದಂಧೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೆಸರು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಪಿಡ್ಲ್ಯೂಡಿ ಇಲಾಖೆಯ ನಿವೃತ್ತ ಇಂಜಿನಿಯರ್ ಮಂಜುನಾಥ್ ರಿಂದ ಸಚಿವರ ಹೆಸರು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಹೊಳೆ ಬಸಪ್ಪ ಎಸ್ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಮತ್ತೊಂದು ಕಡೆ ವರ್ಗಾವಣೆ ದಂಧೆಗೆ ಶಾಸಕರ ಕೊಠಡಿ ಕೂಡ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಶಾಸಕರ ಭವನ ಕೊಠಡಿ ಸಂಖ್ಯೆ 275 ರಲ್ಲಿ ಶಾಸಕ ರವಿಸುಬ್ರಮಣ್ಯರಿಗೆ ಕೊಠಡಿ ಮಂಜೂರಾಗಿದೆ. ಆದ್ರೆ ಮಂಜುನಾಥ್, ಶಾಸಕರ ಕಚೇರಿಯನ್ನೂ ದುರುಪಯೋಗ ಮಾಡಿದ್ದಾರೆ ಎಂಬ ಆರೋಪವಿದ್ದು ಹೊಳೆ ಬಸಪ್ಪ ಎಸ್ ಹಾಳಕೇರಿಯವರಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ: Side Effects of Kajal: ಕಣ್ಣಿನ ಅಂದ ಹೆಚ್ಚಿಸುವ ಕಾಜಲ್ ಬಳಕೆಯ ಮುನ್ನ ಈ ಅಂಶಗಳನ್ನು ಗಮನಿಸಿ