ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಟರ್ಬನ್ ವಿವಾದ; ಕಾಲೇಜು ನಡೆ ವಿರೋಧಿಸಿ ಸಿಎಂ ಬೊಮ್ಮಾಯಿಗೆ ಶಿರೋಮಣಿ ಗುರುದ್ವಾರ ಸಮಿತಿ ಪತ್ರ
ವಿದ್ಯಾರ್ಥಿನಿಗೆ ಟರ್ಬನ್ ತಗೆಯುವಂತೆ ಹೇಳಿರುವ ಕಾಲೇಜು ನಡೆ ವಿರೋಧಿಸಿ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ. ಹಾಗೂ ಸಿಎಂಗೆ ಪತ್ರ ಬರೆದು ಟರ್ಬನ್ ಹಕ್ಕುಗಳ ಬಗ್ಗೆ ತಿಳಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್(Hijab) ಕೇಸರಿ ಶಾಲು(Kesari Row) ವಿವಾದ ದಿನದಿಂದ ದಿನಕ್ಕೇ ಬೇರೆ ಬೇರೆ ತಿರುವು ಪಡೆಯುತ್ತಿದೆ. ಸಿಂಧೂರ, ಬಳೆ ಕುಂಕುಮದ ಬಳಿಕ ಟರ್ಬನ್(Turban) ಪ್ರಶ್ನೆ ಎದ್ದಿದೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ(Mount Carmel College) ಟರ್ಬನ್ ವಿವಾದ ಹುಟ್ಟಿಕೊಂಡಿದೆ. ನಿನ್ನೆ (ಫೆ.24) ಸಿಖ್ ವಿದ್ಯಾರ್ಥಿನಿಯೊಬ್ಬರು ಧರಿಸಿದ್ದ ಟರ್ಬಲ್ ತೆಗೆಸುವಂತೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ತಗಾದ ತೆಗೆದಿದ್ದರು. ಈ ವಿಚಾರವಾಗಿ ಆಡಳಿ ಮಂಡಳಿ ಮತ್ತು ಪೋಷಕರ ನಡುವೆ ಚರ್ಚೆ ವಾಗ್ವಾದ ನಡೆದಿತ್ತು. ಸದ್ಯ ಟರ್ಬನ್ ತೆಗೆಯುವಂತೆ ಸಿಖ್ ವಿದ್ಯಾರ್ಥಿಗೆ ಸೂಚನೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿಗೆ(Basavaraj Bommai )ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ(Shiromani Gurdwara Parbandhak Committee) ಪತ್ರ ಬರೆದಿದೆ.
ವಿದ್ಯಾರ್ಥಿನಿಗೆ ಟರ್ಬನ್ ತಗೆಯುವಂತೆ ಹೇಳಿರುವ ಕಾಲೇಜು ನಡೆ ವಿರೋಧಿಸಿ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ. ಹಾಗೂ ಸಿಎಂಗೆ ಪತ್ರ ಬರೆದು ಟರ್ಬನ್ ಹಕ್ಕುಗಳ ಬಗ್ಗೆ ತಿಳಿಸಿದೆ. ಅಮೃತ್‌ಧಾರಿ ದೀಕ್ಷಾಸ್ನಾನ ಪಡೆದ ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಬೇಕು ಅಂತಾ ಕಾಲೇಜು ಹೇಳಿದೆ. ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ಆಡಳಿತ ಮಂಡಳಿ ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯುವಂತೆ ಹೇಳಿದೆ.
ಸಿಖ್ ರೆಹತ್ ಮರ್ಯಾದಾ ಪ್ರಕಾರ ಸಿಖ್ ಸಮುದಾಯವು ತಮ್ಮ ನಂಬಿಕೆಯನ್ನು ಮುಕ್ತವಾಗಿ ಅನುಸರಿಸಲು ಅವಕಾಶ ಇದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಸಿಖ್ ಪುರುಷರು ಮತ್ತು ಮಹಿಳೆಯರು ದ್ವಿಚಕ್ರ ವಾಹನ ಓಡಿಸುವಾಗ ಟರ್ಬನ್ ಧರಿಸುತ್ತಾರೆ. ಭಾರತೀಯ ಸೇನೆ ಮತ್ತು ಇತರ ದೇಶಗಳಲ್ಲಿ ಸಿಖ್ ಸೈನಿಕರು ಕ್ಯಾಪ್ ಅಥವಾ ಹೆಲ್ಮೆಟ್ ಬದಲಿಗೆ ಟರ್ಬನ್ ಧರಿಸುತ್ತಾರೆ. ಯುದ್ಧದ ನಡುವೆಯೂ ಸಹ ಹೆಲ್ಮೆಟ್ ಬದಲಿಗೆ ಟರ್ಬನ್ ಧರಿಸುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದು ಟರ್ಬನ್ ಪ್ರಶ್ನಿಸುವವರ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಸಿಎಂಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಮೊದಲ ಪ್ಯಾನ್ ಇಂಡಿಯಾ ಚಿತ್ರ ನಮ್ಮ ಕನ್ನಡದ್ದು’: ದಶಕಗಳ ಹಿಂದಿನ ಮಾಹಿತಿ ತಿಳಿಸಿದ ಎಸ್. ನಾರಾಯಣ್
Hijab; ಹಿಜಾಬ್ ಮೂಲಭೂತ ಹಕ್ಕೆಂದು ನೀವು ಸಾಬೀತು ಮಾಡಬೇಕು; ಅರ್ಜಿದಾರರಿಗೆ ಸಿಜೆ ಸೂಚನೆ
Published On - 9:37 am, Fri, 25 February 22