ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಲೈಂಗಿಕ ಕಿರುಕುಳ‌ ಆರೋಪ; ವೈದ್ಯನ ಮೇಲೆ ದೂರು ದಾಖಲಿಸಿದ ವೈದ್ಯೆ

| Updated By: ಆಯೇಷಾ ಬಾನು

Updated on: Feb 09, 2024 | 7:25 AM

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜು( ಕಿಮ್ಸ್​) ನಲ್ಲಿ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ವೈದ್ಯೆಗೆ ಅದೇ ವಿಭಾಗದಲ್ಲಿ ಕೆಲಸ ಮಾಡ್ತಿರುವ ಡಾ. ರಾಜು ಎಂಬುವವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ದೂರು ದಾಖಲಾಗಿದ್ದು ಬನಶಂಕರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಲೈಂಗಿಕ ಕಿರುಕುಳ‌ ಆರೋಪ; ವೈದ್ಯನ ಮೇಲೆ ದೂರು ದಾಖಲಿಸಿದ ವೈದ್ಯೆ
ಕಿಮ್ಸ್ ಆಸ್ಪತ್ರೆ
Follow us on

ಬೆಂಗಳೂರು, ಫೆ.09: ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ (kims hospital) ಲೈಂಗಿಕ ಕಿರುಕುಳ‌ ಆರೋಪ ಕೇಳಿ ಬಂದಿದೆ. ವೈದ್ಯೆಯೊಬ್ಬರಿಗೆ ವೈದ್ಯರೊಬ್ಬರು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಫಾಲೋ ಮಾಡ್ತಾನೆ, ಮೈ, ಕೈ ಮುಟ್ತಾನೆ ಅಂತಾ ಬನಶಂಕರಿ ಠಾಣೆಗೆ (Banashankari Police Station) ಕಿಮ್ಸ್ ವೈದ್ಯೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅರೋಪ ಸಾಬೀತಾದರೆ ಅರೆಸ್ಟ್ ಮಾಡಿ ಕಂಬಿ ಹಿಂದೆ ಕೂರಿಸುವ ಸಾಧ್ಯತೆ ಇದೆ.

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ (ಕಿಮ್ಸ್) ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ವೈದ್ಯೆಗೆ ಅದೇ ವಿಭಾಗದಲ್ಲಿ ಕೆಲಸ ಮಾಡ್ತಿರುವ ಡಾ. ರಾಜು ಎಂಬುವವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಲೇಜಿನಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಬರ್ತಿದ್ದಾರೆ. ನನ್ನನ್ನ ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡ್ತಾನೆ ಅಂತಾ ಆರೋಪಿಸಿ ವೈದ್ಯೆ ಡಾ. ರಾಜು ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 15 ದಿನಗಳಿಗಿಂತ ಹೆಚ್ಚು ರಸ್ತೆ ಬದಿ ವಾಹನ ಪಾರ್ಕ್ ಮಾಡಿ ಹೋಗಿದ್ದೀರಾ, ಕಾದಿದೆ ಕಠಿಣ ಕ್ರಮ

ಹುಡುಗಿ ರೇಗಿಸಿದ್ದಕ್ಕೆ ಚಾಕು ಇರಿತ

ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದ ಕೋಳಿ ಅಂಗಡಿ ಯುವಕನಿಗೆ ಚಾಕು ಇರಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಘಟನೆ ನಡೆದಿದೆ. ಆರೋಪಿ ಸುದೀಪ್​​​ಗೆ ಮದ್ವೆ ನಿಶ್ಚಯವಾಗಿದ್ದು, ಹುಡುಗಿ ಜೊತೆಗೆ ಆಟೋದಲ್ಲಿ ಹೋಗಿದ್ದನಂತೆ. ಜೊತೆಗೆ ಆಕೆಯ ಸ್ನೇಹಿತೆ ಮಲ್ಲವ್ವ ಕೂಡ ಇದ್ಲು. ಆ ವೇಳೆ ಆಟೋದಲ್ಲಿದ್ದ ಇಬ್ಬರು ಹುಡುಗಿಯರನ್ನ ವಿವೇಕ್ ರಾವ್ ಎಂಬಾತ ರೇಗಸಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದು ಸುದೀಪ್ ಚಾಕು ಇರಿದಿದ್ದಾನೆ.

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ

ಚಿಕ್ಕಮಗಳೂರು ನಗರದ ವಿಜಯಪುರದಲ್ಲಿ ಕಲ್ಲು ತೂರಾಟ ನಡೆದಿದೆ. ನಮೋ ಭಾರತ್ ಕಾರ್ಯಕ್ರಮದ ವೇಳೆ ಕಲ್ಲು ತೂರಾಟ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿದ್ದ ಕಟ್ಟಡದ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಚಕ್ರವರ್ತಿ ಸೂಲಿಬೆಲೆ, ಸಿ.ಟಿ.ರವಿ ಇದ್ದರು. ಕಲ್ಲು ತೂರಿದ ಕಟ್ಟಡದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ