ಬೆಂಗಳೂರು: ತಡರಾತ್ರಿ ಟೆಕ್ಕಿ ಮೇಲೆ ಹಲ್ಲೆ ನಡೆಸಿ ಬೈಕ್ ಕಳ್ಳತನ ಮಾಡಿದ್ದ ಯುವಕರು; ಸಿಸಿಟಿವಿ ಆಧರಿಸಿ ಬಲೆ ಬೀಸಿರುವ ಪೊಲೀಸ್
ತಡರಾತ್ರಿ 1 ಗಂಟೆ ಸುಮಾರಿಗೆ ಚಂದ್ರ ಲೇಔಟ್ನ ಬಿಸಿಸಿ ಲೇಔಟ್ನಲ್ಲಿ ನಾಲ್ವರು ಯುವಕರ ಗ್ಯಾಂಗ್ ಟೆಕ್ಕಿ ಮೇಲೆ ಹಲ್ಲೆ ನಡೆಸಿ ಬೈಕ್ ಕದ್ದೊದ್ದಿದ್ದರು. ಹಾಗೂ ಮರು ದಿನ ಅದೇ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದಾರೆ. ಸದ್ಯ ದೂರು ದಾಖಲಾಗಿದ್ದು ಪೊಲೀಸರು ಪುಂಡರಿಗಾಗಿ ಬಲೆ ಬೀಸಿದ್ದಾರೆ. ಸಿಸಿಟಿವಿ ಆಧರಿಸಿ ಆರೋಪಿಗಳನ್ನು ಹಿಡಿಯಲು ಸಂಚು ರೂಪಿಸಿದ್ದಾರೆ.
ಬೆಂಗಳೂರು, ಫೆ.09: ಸ್ನೇಹಿತನಿಗೆ ಡೆಬಿಟ್ ಕಾರ್ಡ್ ಕೊಡಲು ಬಂದಿದ್ದ ಟೆಕ್ಕಿಯೋರ್ವನಿಗೆ ಪುಂಡರ ಗುಂಪೊಂದು ಅಡ್ಡಗಟ್ಟಿ ಇಲ್ಲಸಲ್ಲದ ಪ್ರಶ್ನೆಗಳನ್ನು ಮಾಡಿ ಆತನ ಬೈಕ್ ಕೀ (Bike) ಕಸಿದು ಬೈಕ್ ಕಳ್ಳತನ ಮಾಡಿದ್ದ ಘಟನೆ ಬುಧವಾರ ತಡರಾತ್ರಿ 1 ಗಂಟೆ ಸುಮಾರಿಗೆ ಚಂದ್ರ ಲೇಔಟ್ನ ಬಿಸಿಸಿ ಲೇಔಟ್ನಲ್ಲಿ ನಡೆದಿದೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ (Chandra Layout Police Station) ದೂರು ದಾಖಲಾಗಿದ್ದು ಸಿಸಿಟಿವಿ ದೃಶ್ಯಾವಳಿ ಹಾಗೂ ಆಟೋ ನಂಬರ್ ಪ್ಲೇಟ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.
ಇಮ್ಯಾನುಯೆಲ್ ಎಂಬ ಟೆಕ್ಕಿಯೊಬ್ಬರು ತಮ್ಮ ಸ್ನೇಹಿತನಿಗೆ ಡೆಬಿಟ್ ಕಾರ್ಡ್ ಕೊಡಲು ಬುಧವಾರ ತಡರಾತ್ರಿ 1 ಗಂಟೆ ಸುಮಾರಿಗೆ ಚಂದ್ರ ಲೇಔಟ್ನ ಬಿಸಿಸಿ ಲೇಔಟ್ಗೆ ಬಂದಿದ್ದರು. ಈ ವೇಳೆ ನಾಲ್ವರು ಯುವಕರ ಗ್ಯಾಂಗ್ ಇಮ್ಯಾನುಯೆಲ್ ಬಳಿ ಬಂದು ಅವಾಜ್ ಹಾಕಿದ್ದಾರೆ. ತಡರಾತ್ರಿ ಇಲ್ಲಿ ಏನ್ ಮಾಡ್ತಿದ್ದೀಯಾ? ಯಾರೋ ನೀನು? ಬ್ಯಾಗಲ್ಲಿ ಏನಿದೆ? ದುಡ್ಡಿದ್ಯಾ ಅಂತ ಅವಾಜ್ ಹಾಕಿ ಬ್ಯಾಗ್ ಕಸಿದು ಚೆಕ್ ಮಾಡಿದ್ದಾರೆ. ನಂತರ ಟೆಕ್ಕಿ ಬಳಿ ಹಣವಿಲ್ಲದಿದ್ದಾಗ ಬೈಕ್ ಕೀ ಕಸಿದು ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ. ಆಗ ಇಮ್ಯಾನುಯೆಲ್ ಅವರು ಬೈಕ್ ಕೀಗಾಗಿ ಆಟೋ ಹಿಂದೆ ಓಡಿದ್ದಾರೆ.
ಇದನ್ನೂ ಓದಿ: ನಿರಂತರ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆ ಬಾಗಿಲಿಗೆ ಬರಲಿದ್ದಾರೆ ಟ್ರಾಫಿಕ್ ಪೊಲೀಸರು
ಸ್ವಲ್ಪ ದೂರ ಹೋದ ಆರೋಪಿಗಳು ಕಡೆಗೆ ಆಟೋವನ್ನು ಯೂ ಟರ್ನ್ ಮಾಡಿಕೊಂಡು ಬಂದು ಇಮ್ಯಾನುಯೆಲ್ ಮೇಲೆ ಹಲ್ಲೆ ನಡೆಸಿ ಬೈಕ್ ಕದ್ದೊಯ್ದಿದ್ದಾರೆ. ಆಟೋದಲ್ಲಿ ಬಂದು ಬೈಕ್ ಕದ್ದೊಯ್ದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಬಳಿಕ ಇಮ್ಯಾನುಯೆಲ್ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಿನ್ನೆ ತಡರಾತ್ರಿ ಬೈಕ್ ಕಳುವಾಗ್ತಿದ್ದಂತೆ ಹೊಯ್ಸಳ ಪೊಲೀಸರು ಏರಿಯಾ ಫುಲ್ ಬೀಟ್ ಹಾಕಿದ್ರು.
ಇನ್ನು ಆರೋಪಿಗಳು ರಾತ್ರಿ ಬೈಕ್ ಕದ್ದೊಯ್ದು ಸಂಜೆ ವೇಳೆಗೆ ಪುನಃ ಅದೇ ಸ್ಥಳಕ್ಕೆ ಬೈಕ್ ತಂದು ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಟೆಕ್ಕಿ ಇಮ್ಯಾನುಯೆಲ್ ದೂರು ದಾಖಲಿಸಿದ್ದು ಸಿಸಿಟಿವಿ ದೃಶ್ಯಾವಳಿ ಹಾಗೂ ಆಟೋ ನಂಬರ್ ಪ್ಲೇಟ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ