ದುಪ್ಪಟ್ಟು ದರ ವಸೂಲಿ: ಕಾರ್ಯಾಚರಣೆಗಿಳಿದ ಆರ್ಟಿಒ ಅಧಿಕಾರಿಗಳು, ಹಲವು ಬಸ್ಗಳಿಗೆ ದಂಡ
ಖಾಸಗಿ ಬಸ್ಗ ದುಪ್ಪಟ್ಟು ದರ ವಸೂಲಿ ಆರೋಪ ಹಿನ್ನೆಲೆ ಖಾಸಗಿ ಬಸ್ಗಳನ್ನು ನಿಲ್ಲಿಸಿ, ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿಯಿಂದ ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿ ಟಿಕೆಟ್ಗಳ ಪರಿಶೀಲನೆ ಮಾಡಲಾಗಿದೆ.

ಬೆಂಗಳೂರು: ದೀಪಾವಳಿ (Diwali 2022) ಹಬ್ಬಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವವರ ಸಂಖ್ಯೆ ಹೆಚ್ಚು. ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ ಸಾಕಷ್ಟು ಜನರು ತಮ್ಮ ಸ್ವಂತ ಊರಿನತ್ತ ಹೋಗುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಬಸ್ಸು (private bus) ಗಳು ಟಿಕೆಟ್ ದರವನ್ನು ಡಬಲ್ ಪಡೆಯುತ್ತಿದ್ದಾರೆ. ಹೀಗಾಗಿ ಆರ್ಟಿಒ ಅಧಿಕಾರಿಗಳು ಪ್ರಯಾಣಿಕರ ಟಿಕೆಟ್ ಪರಿಶೀಲನೆ ಮಾಡುತ್ತಿದ್ದಾರೆ. ಖಾಸಗಿ ಬಸ್ ದುಪ್ಪಟ್ಟು ದರ ವಸೂಲಿ ಆರೋಪ ಹಿನ್ನೆಲೆ ಖಾಸಗಿ ಬಸ್ಗಳನ್ನು ನಿಲ್ಲಿಸಿ, ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿಯಿಂದ ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿ ಟಿಕೆಟ್ಗಳ ಪರಿಶೀಲನೆ ಮಾಡಲಾಗಿದೆ. ಖಾಸಗಿ (VRL) ಟ್ರಾವೆಲ್ಸ್ನಲ್ಲಿ ಟಕೆಟ್ ದರ ಹೆಚ್ಚಳವಾಗಿದ್ದು, ಬೆಂಗಳೂರಿನಿಂದ ಸಿಂದಗಿಗೆ ರೂ. 1550 ತೆಗೆದುಕೊಂಡಿದ್ದಾರೆ. ಬಿಜಾಪುರ 800 ರೂ ತೆಗದುಕೊಳ್ಳಲಾಗುತ್ತಿದೆ. ಬಿಜಾಪುರಕ್ಕೆ 1800 ರೂ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರನ್ನ ಪ್ರಶ್ನೆ ಮಾಡಿ, ಆರ್ಟಿಒ ಅಧಿಕಾರಿಗಳು ಪೆನಾಲ್ಟಿ ಹಾಕಿ ಕೇಸ್ ಬರೆಯುತ್ತಿದ್ದಾರೆ.
ಆರೆಂಜ್ ಟ್ರಾವೆಲ್ಸ್ ವಿರುದ್ಧ RTO ಅಧಿಕಾರಿಗಳು ಕೇಸ್
ಆರೆಂಜ್ ಟ್ರಾವೆಲ್ಸ್ನಂತಹ ಇತರೆ ಖಾಸಗಿ ಟ್ರಾವೆಲ್ಸ್ಗಳು ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದು, ಆರ್ಟಿಒ ಅಧಿಕಾರಿಗಳು ದಂಡ ವಿಧಿಸಿ ಕೇಸ್ ಹಾಕುತ್ತಿದ್ದಾರೆ. ಸಾಮಾನ್ಯ ದಿನದಲ್ಲಿ ಟಿಕೆಟ್ ದರ 700 ರೂ.ನಿಂದ 800 ರೂ. ಆದರೆ ಇಂದು 2,700 ರೂಪಾಯಿ ಪಡೆಯುತ್ತಿದ್ದಾರೆ. ಹೀಗಾಗಿ ಚಾಲಕನನ್ನು ಕರೆದು ದಾಖಲೆ ಪರಿಶೀಲಿಸಿದ್ದು, ಆರೆಂಜ್ ಟ್ರಾವೆಲ್ಸ್ ವಿರುದ್ಧ RTO ಅಧಿಕಾರಿಗಳು ಕೇಸ್ ಹಾಕಿದ್ದಾರೆ. ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿ ಅಧಿಕಾರಿಗಳಿಂದ ತಪಾಸಣೆ ನಡೆಯುತ್ತಿದೆ.
ಬೆಂಗಳೂರಿನ ಮೆಜೆಸ್ಟಿಕ್ಗೆ ಹರಿದು ಬಂದ ಜನಸಾಗರ
ಇನ್ನು ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಇರುವುದರಿಂದ ತಮ್ಮ ಊರುಗಳಿಗೆ ಜನರು ತೆರಳುತ್ತಿದ್ದು, ಬೆಂಗಳೂರಿನ ಮೆಜೆಸ್ಟಿಕ್ಗೆ ಜನಸಾಗರ ಹರಿದು ಬರುತ್ತಿದೆ. ತಮ್ಮ ಊರುಗಳಿಗೆ ತೆರಳಲು ಜನರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಇತರೆ ಬಸ್ ನಿಲ್ದಾಣಗಳಿಗೂ ಜನ ಬರುತ್ತಿದ್ದಾರೆ. ಕಲಾಸಿಪಾಳ್ಯ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ, ಯಶವಂತಪುರ, ಬಾಪೂಜಿನಗರ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:14 pm, Sat, 22 October 22




