ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಬ್ಲೋ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಹುಕ್ಕಾ ಬಾರ್ನ ಪರಿಕರಗಳು, 80 ಸಾವಿರ ಹುಕ್ಕಾ ಪ್ಲೇವರ್ ಮತ್ತು 6,050 ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿಯಿಂದ ರೇಡ್ ಮಾಡಿದ್ದು, ಅಪ್ರಾಪ್ತರು ಹುಕ್ಕಾ ಬಾರ್ನಲ್ಲಿ ಮಾದಕ ವಸ್ತು ಸೇವನೆ ಆರೋಪ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಸಿಸಿಬಿ ದಾಳಿ ನಡೆಸಿದೆ. ಹುಕ್ಕಾ ಬಾರ್ ಮಾಲೀಕರು, ಮ್ಯಾನೇಜರ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹೃದಯಾಘಾತದಿಂದ ಕರ್ತವ್ಯ ನಿರತ BSF ಯೋಧ ಸಾವು
ಧಾರವಾಡ: ಹೃದಯಾಘಾತದಿಂದ ಕರ್ತವ್ಯ ನಿರತ ಧಾರವಾಡದ BSF ಯೋಧ ಸಾವನ್ನಪ್ಪಿರುವಂತಹ ಘಟನೆ ಪಶ್ಚಿಮ ಬಂಗಾಳದ ಕುಚ್ ಬಿಹಾರ್ನಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಗಂಗಾಧರಯ್ಯ ಹಿರೇಮಠ(49) ಮೃತ ಯೋಧ. ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ಯೋಧ. ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸ್ತಿದ್ದ ಯೋಧ ಗಂಗಾಧರಯ್ಯ, BSF ಬೆಟಾಲಿಯನ್ 138ರಲ್ಲಿ ಸೇವೆ ಸಲ್ಲಿಸ್ತಿದ್ದರು. 28 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ರಾತ್ರಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು, ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: tumakur news: ಹಣ ಡಬ್ಲಿಂಗ್ ಆಸೆ ತೋರಿಸಿ ಮಹಿಳೆಯಿಂದ 9.60 ಲಕ್ಷ ರೂ. ವಂಚನೆ: ಐದು ಜನರ ಬಂಧನ
ರೈಲಿಗೆ ಸಿಲುಕಿ ವ್ಯಕ್ತಿ ಸಾವು
ನೆಲಮಂಗಲ: ರೈಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ತುಮಕೂರು-ಬೆಂಗಳೂರು ರೈಲು ಮಾರ್ಗದ ದಾಬಸ್‌ಪೇಟೆ ಬಳಿ ನಡೆದಿದೆ. ದಾಬಸ್‌ಪೇಟೆ ನಿವಾಸಿ ಗಂಗಾಧರ್ (31) ಮೃತ ವ್ಯಕ್ತಿ. ಕಳೆದ ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದ.
ಮೃತನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳೀಯವಾಗಿ ಕ್ಯಾಂಟರ್ ಚಾಲಕನಾಗಿದ್ದ ಮೃತ ಗಂಗಾಧರ್,
ಯಶವಂತಪುರ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:23 pm, Sun, 28 August 22