tumakur news: ಹಣ ಡಬ್ಲಿಂಗ್ ಆಸೆ ತೋರಿಸಿ ಮಹಿಳೆಯಿಂದ 9.60 ಲಕ್ಷ ರೂ. ವಂಚನೆ: ಐದು ಜನರ ಬಂಧನ

ಪೊಲೀಸರು, ಪತ್ರಕರ್ತರ ಹೆಸರಿನಲ್ಲಿ ಹೆದರಿಸಿ ವಸೂಲಿ ಮಾಡುತ್ತಿದ್ದ ಕತರ್ನಾಕ್ ಗ್ಯಾಂಗ್​ನ್ನು ಜಿಲ್ಲೆಯ ಕಿತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.

tumakur news: ಹಣ ಡಬ್ಲಿಂಗ್ ಆಸೆ ತೋರಿಸಿ ಮಹಿಳೆಯಿಂದ 9.60 ಲಕ್ಷ ರೂ. ವಂಚನೆ: ಐದು ಜನರ ಬಂಧನ
ಬಂಧಿತರಿಂದ 5.58 ಲಕ್ಷ ವಶ, ಮಹಿಳೆಗೆ ವಾಪಸ್.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 28, 2022 | 11:03 AM

ತುಮಕೂರು: ಮಹಿಳೆಗೆ ಹಣ ಡಬ್ಲಿಂಗ್ ಆಸೆ ತೋರಿಸಿ, 9.60 ಲಕ್ಷ ರೂ ವಂಚಿಸಿದ್ದ ಐದು ಜನ ಖದೀಮರ ತಂಡವನ್ನು ಜಿಲ್ಲೆಯ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ತುರುವೇಕೆರೆ ತಾಲೂಕಿನ ಸಂಪಿಗೆ ಹೊಸಹಳ್ಳಿ ನಿವಾಸಿ ಮುತ್ತುರಾಜ್, ಬಾಣಸಂದ್ರ ಮೂಲದ ಪುನೀತ್, ತಿಪಟೂರು ನಿವಾಸಿ ವಸಂತಕುಮಾರ್, ಮಹೇಶ್ ಹಾಗೂ ಗಂಗಾಧರ ಬಂಧಿತ ಆರೋಪಿಗಳು. ಬೆಂಗಳೂರು ನಿವಾಸಿ ವಿಜಯಲಕ್ಷ್ಮಿ ವಂಚನೆಗೆ ಒಳಗಾದ ಮಹಿಳೆ. 100 ರೂ ಮುಖಬೆಲೆಯ ಹಳೆ ನೋಟುಗಳನ್ನು ಎರಡು ಪಟ್ಟು ನೀಡುವ ಆಸೆ ಹುಟ್ಟಿಸಿ ಮಹಿಳೆಗೆ ವಂಚಿಸಿದ್ದರು. ಬಂಧಿತರಿಂದ 5.58 ಲಕ್ಷ ವಶಕ್ಕೆ ಪಡೆದಿದ್ದು, ಮಹಿಳೆಗೆ ವಾಪಸ್ ನೀಡಲಾಗಿದೆ. ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲಿಗೆರೆ ಬಳಿ ಮಹಿಳೆಯಿಂದ ಹಣ ಪಡೆದು ಆರೋಪಿಗಳು ಪರಾರಿಯಾಗಿದ್ದರು.

ಡಬ್ಲಿಂಗ್ ಹಣ ಇದೆ ಎಂದು ಬೀಗ ಹಾಕಿದ್ದ ಕಪ್ಪು ಬಣ್ಣದ ಬ್ಯಾಗ್ ನೀಡಿ, ಇಲ್ಲಿ ಎಣಿಕೆ ಬೇಡ ಮನೆಗೆ ಹೋಗಿ ನೋಡಿಕೊಳ್ಳಿ ಎಂದು ಹೋಗಿದ್ದರು. ಮಹಿಳೆ ಬ್ಯಾಗ್ ಹರಿದು ನೋಡಿದಾಗ ಕಾಗದದ ಕಂತೆ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಗುಬ್ಬಿ ಪೊಲೀಸ್ ಠಾಣೆಗೆ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Leopard: 24ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ: ದೂರವಾಗದ ಬೆಳಗಾವಿ ಜನರ ಆತಂಕ

ಪೊಲೀಸರು, ಪತ್ರಕರ್ತರ ಹೆಸರಿನಲ್ಲಿ ಹೆದರಿಸಿ ವಸೂಲಿ: ಬಂಧನ

ಬೆಳಗಾವಿ: ಪೊಲೀಸರು, ಪತ್ರಕರ್ತರ ಹೆಸರಿನಲ್ಲಿ ಹೆದರಿಸಿ ವಸೂಲಿ ಮಾಡುತ್ತಿದ್ದ ಕತರ್ನಾಕ್ ಗ್ಯಾಂಗ್​ನ್ನು ಜಿಲ್ಲೆಯ ಕಿತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಸೆಹಲ್ ಅಹ್ಮದ್ ತರಸಗಾರ(41), ನಯೀಮ್ ಮುಲ್ಲಾ(30), ಸರ್ವೇಶ್ ತುಡವೇಕರ(38), ಬಸವರಾಜ ಪಾಟೀಲ್(32), ಜಾಕೀರಹುಸೇನ್ ಮನಿಯಾರ(42) ಬಂಧಿತರು. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕೋಳಿ ಮೊಟ್ಟೆ ಸಾಗಿಸುತ್ತಿದ್ದ ಲಾರಿ ಅಡ್ಡಗಟ್ಟಿ ವಸೂಲಿ ಮಾಡಲಾಗಿದೆ. ಲಾರಿಯಲ್ಲಿ ಗಾಂಜಾ ಸಾಗಿಸುತ್ತಿದ್ದೀಯಾ ಅಂತಾ 4ಲಕ್ಷ 79ಸಾವಿರ ಹಣ ವಸೂಲಿ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ನಂತರ ಕಿತ್ತೂರು ಠಾಣೆಗೆ ಹೋಗಿ ವಿಚಾರಿಸಿದ್ದ ಲಾರಿ ಡ್ರೈವರ್ ಅತಾವುಲ್ಲಾ‌‌, ಈ ವೇಳೆ ನಕಲಿ ಗ್ಯಾಂಗ್ ಅನ್ನೋದು ಗೊತ್ತಾಗಿ ದೂರು ದಾಖಲು ಮಾಡಲಾಗಿದೆ. ಆರೋಪಿಗಳಿಂದ 70 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು, ಎರಡು ಬೈಕ್ ಹಾಗೂ ನಕಲಿ ಗುರುತಿನ ಚೀಟಿ ಜಪ್ತಿ‌ ಮಾಡಲಾಗಿದೆ. ಇನ್ನೂ ನಾಲ್ವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು‌.

ಬೆಳೆಗಳ ಮಧ್ಯೆ ಗಾಂಜಾ ಬೆಳೆ

ಬೀದರ್: ಔರಾದ್ ತಾಲೂಕಿನ ಚಿಂತಾಕಿ ಬಳಿ ಅಕ್ರಮವಾಗಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಕೀಶನ್‌ ತಾಂಡಾದ ನಿವಾಸಿ ಪುಂಡಲೀಕ ಎನ್ನುವವನನ್ನು ಬಂಧನ ಮಾಡಲಾಗಿದೆ. ಜಮೀನಿನಲ್ಲಿ ಬೆಳೆಗಳ ನಡುವೆ 15 ಕೆಜಿಯಷ್ಟು ‌ಗಾಂಜಾ ಬೆಳೆದಿದ್ದ ಆರೋಪಿ ಪುಂಡಲೀಕ, ಚಿಂತಾಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ