ಬಿಡಿಎನಲ್ಲಿ ಅಕ್ರಮ! ನಕಲಿ ದಾಖಲೆ ಮೂಲಕ ಕ್ರಯಪತ್ರವನ್ನು ತಯಾರಿಸುತ್ತಿದ್ದ ಆರೋಪಿಗಳ ವಿರುದ್ಧ ಎಫ್ಐಆರ್

| Updated By: sandhya thejappa

Updated on: Jan 25, 2022 | 8:50 AM

ಆರೋಪಿಗಳು ಬೆಂಗಳೂರಿನ ಹೆಚ್ಬಿಆರ್ ಲೇಔಟ್, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ಬಿಡಿಎ ಜಾಗಕ್ಕೆ ಬೋಗಸ್ ದಾಖಲೆ ಸೃಷ್ಟಿಸುತ್ತಿದ್ದರು. ಗುತ್ತಿಗೆ, ಮಾರಾಟ ಒಪ್ಪಂದದ ನಕಲಿ ಪ್ರತಿಗಳು ಸೃಷ್ಟಿ ಮಾಡುತ್ತಿದ್ದರು.

ಬಿಡಿಎನಲ್ಲಿ ಅಕ್ರಮ! ನಕಲಿ ದಾಖಲೆ ಮೂಲಕ ಕ್ರಯಪತ್ರವನ್ನು ತಯಾರಿಸುತ್ತಿದ್ದ ಆರೋಪಿಗಳ ವಿರುದ್ಧ ಎಫ್ಐಆರ್
ಎಫ್​ಐಆರ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಬಿಡಿಎನಲ್ಲಿ (BDA) ಅಕ್ರಮವೆಸಗಿದ ಸುಮಾರು 8 ಜನರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡಿಎಸ್ 3 ಅನಿಲ್ ಕುಮಾರ್, ಡಿಎಸ್ 4 ಎಸ್ ಎಮ್ ಮಂಗಳಾ, ಅನಿಲ್ ಕುಮಾರ್ ಸೇರಿ, ನಕಲಿ ಫಲಾನುಭವಿಗಳಾದ ಅಪ್ಪಯ್ಯಣ್ಣ, ಶ್ರೀನಿವಾಸರೆಡ್ಡಿ, ಕಮರುನ್ನೀಸಾ, ರುಕ್ಮಿಣಿ, ರಾಜೇಂದ್ರ, ಗುಲಾಬ್ ಜಾನ್, ಶಶಿಕುಮಾರ್, ಬಿಡಿಎ ಕೇಸ್ ವರ್ಕರ್ ವೆಂಕಟರಮಣಪ್ಪ, ಸಂಜಯ್ ಕುಮಾರ್, ಕಮಲಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳು ಬೆಂಗಳೂರಿನ ಹೆಚ್ಬಿಆರ್ ಲೇಔಟ್, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ಬಿಡಿಎ ಜಾಗಕ್ಕೆ ಬೋಗಸ್ ದಾಖಲೆ ಸೃಷ್ಟಿಸುತ್ತಿದ್ದರು. ಗುತ್ತಿಗೆ, ಮಾರಾಟ ಒಪ್ಪಂದದ ನಕಲಿ ಪ್ರತಿಗಳು ಸೃಷ್ಟಿ ಮಾಡುತ್ತಿದ್ದರು. ನಂತರ ಅದೇ ನಕಲಿ ದಾಖಲೆ ಇಟ್ಟುಕೊಂಡು ಕ್ರಯಪತ್ರವನ್ನು ತಯಾರಿಸುತ್ತಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಶೇಷಾದ್ರಿಪುರಂ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಹಣ ದೋಚಿದ್ದ ಆರೋಪಿ ಬಂಧನ
ವ್ಯಕ್ತಿಯನ್ನು ಅಡ್ಡಗಟ್ಟಿ ಹಣ ದೋಚಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸರು ಆರೋಪಿ ಅಬ್ದುಲ್ ವಾಹಿದ್ ಎಂಬುವವನನ್ನು ಬಂಧಿಸಿದ್ದಾರೆ. ಬೇತಮಂಗಲ ಬಳಿ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಅಡ್ಡಗಟ್ಟಿ 1.52 ಲಕ್ಷ ರೂ. ಹಣ ದೋಚಿದ್ದ. ಈ ಸಂಬಂಧ ಬೇತಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶ್ರೀಗಂಧ ಮರ ಸಾಗಿಸಲು ಯತ್ನಿಸುತ್ತಿದ್ದ ಆರೋಪಿ ಸೆರೆ
ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿಯ ಚರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ದಾಳಿ ನಡೆಸಿ ಶ್ರೀಗಂಧ ಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಹೇಮಣ್ಣ ಬಂಧನಕ್ಕೊಳಗಾಗಿದ್ದು, ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಅಕ್ಕಿ ಗೋಡೌನ್ ಮೇಲೆ ದಾಳಿ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರಗುಂಟಾದ ಬಳಿ ಗೋಡೌನ್ ಒಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗೋಡೌನ್ ಮೇಲೆ ದಾಳಿ ನಡೆಸಿ 821 ಚೀಲ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ಗೋಡೌನ್ ಮಾಲೀಕ ತಿಮ್ಮಾರೆಡ್ಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ದೇವರ ದರ್ಶನ ಮಾಡುವ ಮುಂಚೆ ಈ ಕ್ರಮವನ್ನು ನೆನಪಿನಲ್ಲಿಡಿ, ಆಗಲೇ ದರ್ಶನದ ಫಲ ಪ್ರಾಪ್ತಿಯಾಗುವುದು

ಲಸಿಕೆ ಒಲ್ಲೆನೆಂದು ಮಾಳಿಗೆ ಹತ್ತಿ ಕುಳಿತ ಮಂಜುನಾಥನನ್ನು ಕೆಳಗಿಳಿಸಲು ಅರೋಗ್ಯ ಕಾರ್ಯಕರ್ತರು ಹರಸಾಹಸ ಪಡಬೇಕಾಯಿತು!