Covid 19 Karnataka Update: ಕರ್ನಾಟಕದ 46,426 ಮಂದಿಗೆ ಕೊರೊನಾ ಸೋಂಕು, ಕೊವಿಡ್ನಿಂದ 32 ಜನರು ಸಾವು
Coronavirus: ರಾಜ್ಯದಲ್ಲಿ ಈವರೆಗೆ ಒಟ್ಟು 35,64,108 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 31,62,977 ಜನರು ಚೇತರಿಸಿಕೊಂಡಿದ್ದಾರೆ. 38,614 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ (ಜ.24) 46,426 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 41,703 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 32 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ 3,62,487 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 35,64,108 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 31,62,977 ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು 38,614 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 32.95 ಇದ್ದು, ಸೋಂಕಿತರ ಸಾವಿನ ಸರಾಸರಿ ಶೇ 0.06 ಇದೆ.
ಬೆಂಗಳೂರು ನಗರದಲ್ಲಿ ಸೋಮವಾರ ಒಟ್ಟು 21,569 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 27,008 ಜನರು ಚೇತರಿಸಿಕೊಂಡಿದ್ದಾರೆ. ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಈವರೆಗೆ 16,07,226 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 13,64,333 ಜನರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 2,26,385 ಸಕ್ರಿಯ ಸೋಂಕು ಪ್ರಕರಣಗಳಿವೆ. ಕೊವಿಡ್ನಿಂದ ಈವರೆಗೆ ಒಟ್ಟು 16,507 ಜನರು ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಬೆಂಗಳೂರು ನಗರ 21,569, ಬಾಗಲಕೋಟೆ 291, ಬಳ್ಳಾರಿ 817, ಬೆಳಗಾವಿ 625, ಬೆಂಗಳೂರು ಗ್ರಾಮಾಂತರ 1607, ಬೀದರ್ 284, ಚಾಮರಾಜನಗರ 656, ಚಿಕ್ಕಬಳ್ಳಾಪುರ 905, ಚಿಕ್ಕಮಗಳೂರು 144, ಚಿತ್ರದುರ್ಗ 642, ದಕ್ಷಿಣ ಕನ್ನಡ 655, ದಾವಣಗೆರೆ 467, ಧಾರವಾಡ 1407, ಗದಗ 257, ಹಾಸನ 1908, ಹಾವೇರಿ 304, ಕಲಬುರ್ಗಿ 379, ಕೊಡಗು 657, ಕೋಲಾರ 661, ಕೊಪ್ಪಳ 525, ಮಂಡ್ಯ 1837, ಮೈಸೂರು 4105, ರಾಯಚೂರು 281, ರಾಮನಗರ 288, ಶಿವಮೊಗ್ಗ 537, ತುಮಕೂರು 2960, ಉಡುಪಿ 677, ಉತ್ತರ ಕನ್ನಡ 626, ವಿಜಯಪುರ 270, ಯಾದಗಿರಿ 85.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ಬೆಂಗಳೂರು ನಗರ 9, ಮೈಸೂರು, ದಕ್ಷಿಣ ಕನ್ನಡ, ಉಡುಪಿ 3, ಹಾವೇರಿ, ಕಲಬುರ್ಗಿ 2, ಹಾಸನ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಗದಗ, ಬೆಳಗಾವಿ 1.
ಧಾರವಾಡ ಶಾಲೆಯಲ್ಲಿ ಕೊರೊ ಧಾರವಾಡ: ಅಣ್ಣಿಗೇರಿ ಪಟ್ಟಣದ ಅಮೃತೇಶ್ವರ ಪದವಿ ಪೂರ್ವ ಕಾಲೇಜಿನ ಮೂವರು ಶಿಕ್ಷಕರು, 29 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜ.30ರವರೆಗೆ ಕಾಲೇಜು ಸೀಲ್ಡೌನ್ ಮಾಡಿ ತಹಶೀಲ್ದಾರ್ ಮಂಜುನಾಥ್ ಅಮಾಸೆ ಆದೇಶ ಹೊರಡಿಸಿದ್ದಾರೆ.
ಇಂದಿನ 24/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/9gKMtbi8XI @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/8CsQ5MVLgy
— K’taka Health Dept (@DHFWKA) January 24, 2022
ಇದನ್ನೂ ಓದಿ: ಹೆಚ್ಚುತ್ತಿರುವ ಕೊರೊನಾ, ಒಮಿಕ್ರಾನ್; ತಮ್ಮ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡೆರ್ನ್ ಇದನ್ನೂ ಓದಿ: ಕೊವಿಡ್, ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್; 28 ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ ರಾಜ್ಯ ಸರ್ಕಾರ