ಕೊವಿಡ್, ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್; 28 ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ ರಾಜ್ಯ ಸರ್ಕಾರ

ಕೊವಿಡ್, ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್; 28 ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ ರಾಜ್ಯ ಸರ್ಕಾರ
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ

ಎಸ್.ಅಂಗಾರ-ಉಡುಪಿ ಜಿಲ್ಲಾ ಉಸ್ತುವಾರಿ, ಆರಗ ಜ್ಞಾನೇಂದ್ರ-ತುಮಕೂರು ಜಿಲ್ಲಾ ಉಸ್ತುವಾರಿ, ಡಾ.ಅಶ್ವತ್ಥ್ ನಾರಾಯಣ-ರಾಮನಗರ ಜಿಲ್ಲಾ ಉಸ್ತುವಾರಿ, ಸಿ.ಸಿ.ಪಾಟೀಲ್-ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ.

TV9kannada Web Team

| Edited By: preethi shettigar

Jan 24, 2022 | 5:24 PM

ಬೆಂಗಳೂರು: ಕೊವಿಡ್, ಜಿಲ್ಲಾ ಉಸ್ತುವಾರಿ ಸಚಿವರ (District incharge Ministers) ಪಟ್ಟಿ ಬಿಡುಗಡೆ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಬೆಂಗಳೂರು ನಗರ, ಗೋವಿಂದ ಕಾರಜೋಳ ಬೆಳಗಾವಿ ಜಿಲ್ಲಾ ಉಸ್ತುವಾರಿ, ಕೆ.ಎಸ್.ಈಶ್ವರಪ್ಪ-ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ, ಬಿ.ಶ್ರೀರಾಮುಲು-ಬಳ್ಳಾರಿ ಜಿಲ್ಲಾ ಉಸ್ತುವಾರಿ, ವಿ.ಸೋಮಣ್ಣ-ಚಾಮರಾಜನಗರ ಜಿಲ್ಲಾ ಉಸ್ತುವಾರಿ, ಉಮೇಶ್ ಕತ್ತಿ(Umesh katti)-ವಿಜಯಪುರ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ.

ಎಸ್.ಅಂಗಾರ-ಉಡುಪಿ ಜಿಲ್ಲಾ ಉಸ್ತುವಾರಿ, ಆರಗ ಜ್ಞಾನೇಂದ್ರ-ತುಮಕೂರು ಜಿಲ್ಲಾ ಉಸ್ತುವಾರಿ, ಡಾ.ಅಶ್ವತ್ಥ್ ನಾರಾಯಣ-ರಾಮನಗರ ಜಿಲ್ಲಾ ಉಸ್ತುವಾರಿ, ಸಿ.ಸಿ.ಪಾಟೀಲ್-ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ.

ಆನಂದ್ ಸಿಂಗ್ ಕೊಪ್ಪಳ ಜಿಲ್ಲಾ ಉಸ್ತುವಾರಿಯಾದರೆ ಕೋಟ ಶ್ರೀನಿವಾಸ ಪೂಜಾರಿ-ಉತ್ತರ ಕನ್ನಡ ಜಿಲ್ಲೆ, ಪ್ರಭು ಚೌಹಾಣ್-ಯಾದಗಿರಿ ಜಿಲ್ಲಾ ಉಸ್ತುವಾರಿ, ಮುರುಗೇಶ್ ನಿರಾಣಿ-ಕಲಬುರಗಿ ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ಇನ್ನೂ ಶಿವರಾಮ್ ಹೆಬ್ಬಾರ್-ಹಾವೇರಿ ಜಿಲ್ಲಾ ಉಸ್ತುವಾರಿ, ಎಸ್.​ಟಿ.ಸೋಮಶೇಖರ್-ಮೈಸೂರು ಜಿಲ್ಲಾ ಉಸ್ತುವಾರಿ, ಬಿ.ಸಿ.ಪಾಟೀಲ್-ಚಿತ್ರದುರ್ಗ, ಗದಗ ಜಿಲ್ಲೆ ಉಸ್ತುವಾರಿಯಾಗಿದ್ದಾರೆ. 

ಭೈರತಿ ಬಸವರಾಜ್-ದಾವಣಗೆರೆ ಜಿಲ್ಲಾ ಉಸ್ತುವಾರಿ, ಡಾ.ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೆ.ಗೋಪಾಲಯ್ಯ-ಹಾಸನ, ಮಂಡ್ಯ ಜಿಲ್ಲೆ ಉಸ್ತುವಾರಿಯಾದರೆ, ಶಶಿಕಲಾ ಜೊಲ್ಲೆ-ವಿಜಯನಗರ ಜಿಲ್ಲಾ ಉಸ್ತುವಾರಿ, ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ, ಕೆ.ಸಿ.ನಾರಾಯಣಗೌಡ-ಶಿವಮೊಗ್ಗ ಜಿಲ್ಲಾ ಉಸ್ತುವಾರಿ, ಬಿ.ಸಿ.ನಾಗೇಶ್-ಕೊಡಗು ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ.

ವಿ.ಸುನಿಲ್ ಕುಮಾರ್-ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಹಾಲಪ್ಪ ಆಚಾರ್-ಧಾರವಾಡ ಜಿಲ್ಲಾ ಉಸ್ತುವಾರಿ, ಶಂಕರ ಪಾಟೀಲ್ ಮುನೇನಕೊಪ್ಪ-ರಾಯಚೂರು, ಬೀದರ್, ಮುನಿರತ್ನ-ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆ ಮಾಡಲಾಗಿದೆ.

ಸಿಎಂ ಬಳಿ ಉಳಿಸಿಕೊಂಡ ಬೆಂಗಳೂರು ನಗರ ಉಸ್ತುವಾರಿ

ಬೆಂಗಳೂರು ನಗರ ಉಸ್ತುವಾರಿ ಯಾರಿಗೂ ನೀಡದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಗೆ ಭಾರಿ ಪೈಪೋಟಿಯಿತ್ತು. ಆದರೆ ಬೆಂಗಳೂರು ನಗರ ಉಸ್ತುವಾರಿಯನ್ನು ಸದ್ಯ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮಲ್ಲಿಯೇ ಉಳಿಸಕೊಂಡಿದ್ದಾರೆ.

ಬಳ್ಳಾರಿ ಉಸ್ತುವಾರಿ ಪಡೆಯುವಲ್ಲಿ ರಾಮುಲು ಯಶಸ್ವಿ

ಕೊನೆಗೂ ಬಳ್ಳಾರಿ ಉಸ್ತುವಾರಿ ಪಡೆಯುವಲ್ಲಿ ಶ್ರೀ ರಾಮುಲು ಯಶಸ್ವಿಯಾಗಿದ್ದಾರೆ. ಹಲವು ದಿನಗಳಿಂದ ಬಳ್ಳಾರಿ ಉಸ್ತುವಾರಿಗೆ ಪಟ್ಟು ಹಿಡಿದಿದ್ದರು. ಸದ್ಯ ಜಯ ಸಿಕ್ಕಂತಾಗಿದೆ.

ಮಾಧುಸ್ವಾಮಿಗೆ ಕೈತಪ್ಪಿದ ತುಮಕೂರು ಜಿಲ್ಲಾ ಉಸ್ತುವಾರಿ ಹೊಣೆ

ತುಮಕೂರು ಜಿಲ್ಲೆ ಬಿಟ್ಟು ಬೇರೆ ಜಿಲ್ಲೆ ಬೇಡವೆಂದು ನಾನೇ ಹೇಳಿದ್ದೆ. ನಾನು ನಿನ್ನೆಯೇ ಹೇಳಿದ್ದೆ ಯಾರನ್ನಾದರೂ ಮಾಡಿಕೊಳ್ಳಿ,  ನಿನ್ನೆಯೇ ತುಮಕೂರು ಜಿಲ್ಲೆ ಕೊಡಿ ಅಂತಾ ಕೇಳಿದ್ದೇ. ತುಮಕೂರು ಜಿಲ್ಲೆ ಬಿಟ್ಟು ಬೇರೆ ಜಿಲ್ಲೆ ಬೇಡ ಎಂದಿದ್ದೆ ಎಂದು ಉಸ್ತುವಾರಿ ಹೊಣೆ ಕೈತಪ್ಪಿದ ಬಗ್ಗೆ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

ನಡೆಯದ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ನಿರ್ಲಕ್ಷ್ಯ: ಇದು ನಿಷ್ಕ್ರಿಯ ಸರ್ಕಾರ ಎಂದ ಈಶ್ವರ ಖಂಡ್ರೆ

ರಜೆ ಘೋಷಣೆ ಹಿಂಪಡೆದ ಧಾರವಾಡ ಜಿಲ್ಲಾಧಿಕಾರಿ; ಸೋಂಕಿನ ಪ್ರಮಾಣ ಆಧರಿಸಿ ಶಾಲೆಗೆ ರಜೆ ನೀಡುವುದಾಗಿ ಆದೇಶ

Follow us on

Related Stories

Most Read Stories

Click on your DTH Provider to Add TV9 Kannada