ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2022: ಬೆಂಗಳೂರಿನಲ್ಲಿ ಇಬ್ಬರು ಬಾಲಕರಿಗೆ ಬಾಲ ಪುರಸ್ಕಾರ ಪ್ರಶಸ್ತಿ

ಜಿಲ್ಲಾಡಳಿತದಿಂದಲೂ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಗಿದೆ. ಸೈಯದ್ ಫತೀನ್ ಅಹ್ಮದ್, ಅಭಿನವ್ ಚೌಧರಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2022: ಬೆಂಗಳೂರಿನಲ್ಲಿ ಇಬ್ಬರು ಬಾಲಕರಿಗೆ ಬಾಲ ಪುರಸ್ಕಾರ ಪ್ರಶಸ್ತಿ
ಸೈಯದ್ ಫತೀನ್ ಅಹ್ಮದ್, ಅಭಿನವ್ ಚೌಧರಿಗೆ
Follow us
TV9 Web
| Updated By: preethi shettigar

Updated on:Jan 24, 2022 | 8:15 PM

ಬೆಂಗಳೂರು: ವರ್ಚುವಲ್‌ನಲ್ಲಿ ಬ್ಲಾಕ್ ಚೈನ್ ಟೆಕ್ನಾಲಜಿ ಮೂಲಕ ಇಬ್ಬರು ಬಾಲಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ (Pradhan Mantri Rashtriya Bal puraskar). ಪ್ರಶಸ್ತಿಯೊಂದಿಗೆ 1 ಲಕ್ಷ ರೂಪಾಯಿ ನಗದು ಪುರಸ್ಕಾರ ಸಹ ದೊರೆತಿದೆ. ಜಿಲ್ಲಾಡಳಿತದಿಂದಲೂ ಪ್ರಶಸ್ತಿ(Award) ಪಡೆದವರನ್ನು ಸನ್ಮಾನಿಸಲಾಗಿದೆ. ಸೈಯದ್ ಫತೀನ್ ಅಹ್ಮದ್, ಅಭಿನವ್ ಚೌಧರಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ(DC) ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ನಗರದ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಪುರಸ್ಕೃತರಾಗಿರುವುದು ನಮಗೆ ಹೆಮ್ಮೆ ತಂದಿದೆ. ಅಭಿನವ್ ಕುಮಾರ್ ಚೌದ್ರಿ ಸಾಮಾಜಿಕ ಸೇವೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ. ನವೋದಯ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಾರೆ. ಕ್ರೂಸ್ ಎನ್ನುವ ಸಂಸ್ಥೆಯ ಇಲ್ಲ ಪುಸ್ತಕಗಳನ್ನು ರೀಯೂಸ್ ಮಾಡುವುದು, ಪ್ಲಾಸ್ಟಿಕ್ ರೀ ಯೂಸ್ ಮಾಡುವ ಬಗ್ಗೆ ಸಹ ಕೆಲಸ ಮಾಡಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಸಯದ್ ಫತೀಮ್ ಅಹ್ಮದ್ ಬೆಂಗಳೂರಿನ ಸಂವೇದ್ ಶಾಲೆಯ ವಿದ್ಯಾರ್ಥಿ. ವೆಸ್ಟ್ರನ್ ಕ್ಲಾಸಿಕಲ್ ಪಿಯಾನೊ ನುಡಿಸುವುದರಲ್ಲಿ ಪ್ರಶಸ್ತಿ ಬಂದಿದೆ. 17 ಕ್ಕೂ ಹೆಚ್ಚಿನ ದೇಶಗಳಲ್ಲಿ ಪಿಯಾನೊ ನುಡಿಸುವ ಮೂಲಕ ದೇಶದ ಗೌರವ ಹೆಚ್ಚಿಸಿದ್ದಾರೆ. ಲಂಡನ್ ಆರ್ಟ್ ಕಾಲೇಜ್ ಪದವಿ ಪಡೆದ ಅತೀ ಕಿರಿಯ ವ್ಯಕ್ತಿ ಎನ್ನುವ ಕೀರ್ತಿ ಇವರದ್ದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ. ಇಬ್ಬರಿಗೂ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಅವರಿಂದ ಮೈಸೂರು ಪೇಟ ಹಾಕಿ ಹೂಗುಚ್ಚ ನೀಡಿ ಸನ್ಮಾನಿಸಿದ್ದಾರೆ.

ಸಮಾಜ ಸೇವೆ ವಿಭಾಗದಿಂದ ಆಯ್ಕೆಯಾದ ಅಭಿನವ್ ಚೌದ್ರಿ

ಪ್ರಧಾನ ಮಂತ್ರಿಗಳಿಂದ ಪ್ರಶಸ್ತಿ ಪಡೆದಿರುವುದು ನನಗೆ ಬಹಳ ಸಂತೋಷವಾಗಿದೆ. ನಾನು ಸಮಾಜಸೇವೆ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದೇನೆ. ನಾವು ಕ್ರೂಸ್ ಅನ್ನುವ ಸಂಸ್ಥೆ ಮೂಲಕ ನಡೆಸಿದಂತಹ ಕೆಲಸಗಳಿಗೆ ನನಗೆ ಪ್ರಶಸ್ತಿ ದೊರಕಿದೆ. ನಾನು ಲಾಕ್​ಡೌನ್​ ಸಂದರ್ಭದಲ್ಲಿ ಮನೆಗೆ ಹೋದಾಗ ಪುಸ್ತಕ ತೆಗೆದುಕೊಳ್ಳಲು ಬಹಳ ಕಷ್ಟವಾಯ್ತು.  ನನಗೆ ಆದಾ ರೀತಿ ಬಹಳಷ್ಟು ಮಕ್ಕಳಿಗೆ ಪುಸ್ತಕ ಪಡೆಯಲು ಕಷ್ಟವಾಗುತ್ತದೆ ಹಾಗಾಗಿ ಪುಸ್ತಕಗಳ ರೀ ಯೂಸ್ ಬಗ್ಗೆ ಆ್ಯಪ್ ಮಾಡಿದೆ ಎಂದು ಅಭಿನವ್ ಚೌದ್ರಿ ಹೇಳಿದ್ದಾರೆ.

ಹಳೆಯ ಪುಸ್ತಕಗಳನ್ನು ಮಾರಲು ಹಾಗೂ ತೆಗೆದುಕೊಳ್ಳಲು ಅನುಕೂಲವಾಗುವಂತಹ ಕೆಲಸ ಮಾಡಿದೆ. ನಮ್ಮ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸೋ ಕೆಲಸ ಮಾಡುತ್ತಿದೆ. ಪ್ರಧಾನ ಮಂತ್ರಿಗಳು ಹೇಳಿದ ಕೆಲವು ಮಾತುಗಳು ನನಗೆ ಬಹಳ ಸ್ಪೂರ್ತಿ ತಂದಿದೆ. ಇಂದಿನ ಯುವ ಪೀಳಿಗೆಯೇ ಮುಂದಿನ ಭಾರತದ ಭವಿಷ್ಯ ಅಂತ ಹೇಳಿದ್ದಾರೆ. ಅವರ ಮಾತುಗಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಾನು ಭವಿಷ್ಯದಲ್ಲಿ ಮುಂದುವರೆಯುತ್ತೇನೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೊಳಿಸಲು ಪೂರಕವಾಗುವಂತಹ ಕೆಲಸ ಮಾಡಬೇಕು ಎನ್ನುವುದು ನನ್ನ ಗುರಿ ಎಂದು ಅಭಿನವ್ ಚೌದ್ರಿ ತಿಳಿಸಿದ್ದಾರೆ.

ಮಂಗಳೂರಿನ ರೆಮೊನಾ ಇವೆಟ್ಟೆ ಪೆರೆರಿಯಾಗೆ ಪ್ರಶಸ್ತಿ

ದಕ್ಷಿಣ ಕನ್ನಡ: ಜಿಲ್ಲಾ ಪಂಚಾಯತ್​ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೆಮೊನಾ ಇವೆಟ್ಟೆ ಪೆರೆರಿಯಾ ಪ್ರಧಾನಿ ನರೇಂದ್ರ ಮೋದಿ ಜೊತೆ ಸಂವಾದದಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿ.ಪಂ.ನಿಂದ ರೆಮೊನಾಗೆ ಸನ್ಮಾನ ಮಾಡಲಾಗಿದೆ. ಭರತನಾಟ್ಯ ಕ್ಷೇತ್ರ, ಡ್ಯಾನ್ಸಿಂಗ್ ವಿವಿಧ ಪ್ರಕಾರಗಳ ಕ್ಷೇತ್ರದಲ್ಲಿ ಸಾಧನೆ ಮಾಡಿದ 17 ವರ್ಷ ವಯಸ್ಸಿನ ರೆಮೊನಾ, ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2022 ಪಡೆದಿದ್ದಾರೆ.

13 ವರ್ಷದ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೇಳಿದ್ರು. ಸಾಧನೆಯ ಹಿಂದಿನ ಕಷ್ಟದ ಬಗ್ಗೆ ಆಲಿಸಿದ್ರು. ಭವಿಷ್ಯದ ಪ್ಲಾನ್ ಏನು ಅಂತಾ ಕೇಳಿದ್ರು. ಭವಿಷ್ಯದಲ್ಲಿ, ಕಲೆ ಇದ್ದು ಆರ್ಥಿಕವಾಗಿ ಅಬಲರಾಗಿರುವವರಿಗೆ ಉಚಿತವಾಗಿ ನೃತ್ಯಕಲಿಕೆ‌. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಮಾಡುವ ಪ್ಲಾನ್ ಇದೆ ಎಂದು ಹೇಳಿದ್ದೇನೆ ಎಂದು ರೆಮೊನಾ ತಿಳಿಸಿದ್ದಾಳೆ.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರಧಾನಿ ಶುಭ ಹಾರೈಸಿದರು ದೇಶದಾದ್ಯಂತ ಒಟ್ಟು 29 ಮಕ್ಕಳಿಗೆ ಕಲೆ, ಕ್ರೀಡೆ, ನಾವಿನ್ಯತೆ, ಶಿಕ್ಷಣ, ಸಾಹಸ  ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಮಾಡಿರುವ  ಸಾಧನೆಗಾಗಿ ಇಂದು  ಪ್ರಧಾನಿಯವರು ಪ್ರಶಸ್ತಿ ನೀಡಿ ಪುರಸ್ಕರಿಸಿ ನೇರ ಸಂವಾದ ನಡೆಸಿದರು. ಪ್ರಶಸ್ತಿ ಪುರಸ್ಕೃತರ ಪೈಕಿ 14 ಹೆಣ್ಣು ಮಕ್ಕಳು ಇದ್ದ ಬಗ್ಗೆ ಪ್ರಧಾನಿ ಅತೀವ ಹರ್ಷ ವ್ಯಕ್ತ ಪಡಿಸಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರಧಾನಿ ಶುಭ ಹಾರೈಸಿದರು.

ದೊಡ್ಡ ಸಾಧನೆ ಮಾಡಲು ಚಿಕ್ಕ ವಯಸ್ಸು ಅಡ್ಡಿ ಬರುವುದಿಲ್ಲ ಎಂದ ಪ್ರಧಾನಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪುಟಾಣಿಗಳನ್ನು ಅಭಿನಂದಿಸಿದರು. ದೇಶದಾದ್ಯಂತ ನಿಮ್ಮಂತೆ ಇನ್ನೂ ಸಾವಿರಾರು ಪ್ರತಿಭಾನ್ವಿತ ಮಕ್ಕಳು ಇದ್ದಾರೆ. ಅವರನ್ನೂ ಗುರುತಿಸುವ ಕಾರ್ಯವಾಗಬೇಕು. ನಿಮ್ಮ ಸಾಧನೆ ನಿಮ್ಮ ಮೇಲಿನ ಜವಾಬ್ದಾರಿಯನ್ನು, ನೀರೀಕ್ಷೆಗಳನ್ನೂ ಹೆಚ್ಚಿಸಲಿದೆ. ಅದರ ಒತ್ತಡಕ್ಕೆ ಮಣಿಯದೇ ಅದನ್ನು ಸವಾಲಾಗಿ, ಸ್ಪೂರ್ತಿಯಾಗಿ ಸ್ವೀಕರಿಸಿ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಸಚಿವರಾದ ಸ್ಮೃತಿ ಜ಼ುಬೀನ್ ಇರಾನಿ ಅವರು ಮಾತನಾಡಿ ಕೊವಿಡ್ ಹೆನ್ನೆಲೆಯಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಪುರಸ್ಕೃತರಿಗೆ ಪ್ರಮಾಣಪತ್ರ ನೇರವಾಗಿ ಅವರ ಸ್ಮಾರ್ಟ್ ಫೋನ್​ಗಳಿಗೆ ತಲುಪಿಸಲಾಗಿದೆ. ಈ ಪುರಸ್ಕಾರವು ಪದಕ, 1 ಲಕ್ಷ ರೂ. ನಗದು ಸೇರಿದಂತೆ ಪ್ರಶಸ್ತಿ ಪ್ರಮಾಣ ಪತ್ರವನ್ನು ಹೊಂದಿರುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನಿಶ್ಚಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ಸಯ್ಯದ್ ಫತೀನ್  ಅಹಮದ್ ತಂದೆ ಡಾ. ಸಯ್ಯದ್ ಜಮೀರ್ ಅಹಮದ್, ತಾಯಿ ಅಸ್ಮಾ ಕೌಸರ್, ನವೋದಯ ವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು.

ಇದನ್ನೂ ಓದಿ: Republic Day 2022: ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಮಕ್ಕಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ

Syed Modi Tournament: ಸೈಯದ್ ಮೋದಿ ಪ್ರಶಸ್ತಿ ಗೆದ್ದ ಪಿವಿ ಸಿಂಧು! ಸುಲಭವಾಗಿ ಸೋತ ಮಾಳವಿಕಾ

Published On - 3:06 pm, Mon, 24 January 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ