AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Syed Modi Tournament: ಸೈಯದ್ ಮೋದಿ ಪ್ರಶಸ್ತಿ ಗೆದ್ದ ಪಿವಿ ಸಿಂಧು! ಸುಲಭವಾಗಿ ಸೋತ ಮಾಳವಿಕಾ

PV Sindhu: ಭಾರತದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಬಿಡಬ್ಲ್ಯೂಎಫ್ ಸೂಪರ್ 350 ಸೈಯದ್ ಮೋದಿ ಟೂರ್ನಮೆಂಟ್ ಗೆದ್ದಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿಂಧು ಯುವ ತಾರೆ ಮಾಳವಿಕಾ ಬನ್ಸೋಡ್ ಅವರನ್ನು ಕೇವಲ 35 ನಿಮಿಷಗಳಲ್ಲಿ ಸೋಲಿಸಿದರು.

Syed Modi Tournament: ಸೈಯದ್ ಮೋದಿ ಪ್ರಶಸ್ತಿ ಗೆದ್ದ ಪಿವಿ ಸಿಂಧು! ಸುಲಭವಾಗಿ ಸೋತ ಮಾಳವಿಕಾ
ಪಿವಿ ಸಿಂಧು
TV9 Web
| Edited By: |

Updated on: Jan 23, 2022 | 4:34 PM

Share

ಭಾರತದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಬಿಡಬ್ಲ್ಯೂಎಫ್ ಸೂಪರ್ 350 ಸೈಯದ್ ಮೋದಿ ಟೂರ್ನಮೆಂಟ್ ಗೆದ್ದಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಿಂಧು ಯುವ ತಾರೆ ಮಾಳವಿಕಾ ಬನ್ಸೋಡ್ ಅವರನ್ನು ಕೇವಲ 35 ನಿಮಿಷಗಳಲ್ಲಿ ಸೋಲಿಸಿದರು. ಸಿಂಧು 21-13, 21-16 ನೇರ ಗೇಮ್‌ಗಳಿಂದ ಗೆದ್ದರು. ಮಾಳವಿಕಾ ಈ ಹಿಂದೆ ಇಂಡಿಯಾ ಓಪನ್‌ನಲ್ಲಿ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರನ್ನು ಸೋಲಿಸಿದ್ದರು. ಇದಾದ ಬಳಿಕ ಈ ಪಂದ್ಯದಲ್ಲೂ ಉಲ್ಫಟರ್ ನಡೆಯದಿದ್ದರೂ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದರು.

ಇದಕ್ಕೂ ಮುನ್ನ ಮೂರು ಗೇಮ್‌ಗಳ ಸೆಮಿಫೈನಲ್‌ನಲ್ಲಿ ಮಾಳವಿಕಾ 19-21 21-19 21-7 ರಲ್ಲಿ ಅನುಪಮಾ ಉಪಾಧ್ಯಾಯ ಅವರನ್ನು ಸೋಲಿಸಿದ್ದರು. ಮತ್ತೊಂದೆಡೆ, ಐದನೇ ಶ್ರೇಯಾಂಕದ ರಷ್ಯಾದ ಪ್ರತಿಸ್ಪರ್ಧಿ ಎವ್ಗೆನಿಯಾ ಕೊಸೆಟ್ಸ್ಕಾಯಾ ಅವರು ಸೆಮಿಫೈನಲ್‌ನಲ್ಲಿ ಗಾಯಗೊಂಡು ನಿವೃತ್ತರಾದ ನಂತರ ಪಿವಿ ಸಿಂಧು ಸೈಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಹಿಳೆಯರ ಸಿಂಗಲ್ಸ್ ಫೈನಲ್ ತಲುಪಿದ್ದರು. ಅಗ್ರ ಶ್ರೇಯಾಂಕದ ಸಿಂಧು ಮೊದಲ ಗೇಮ್ ಅನ್ನು 21-11 ರಿಂದ ಸುಲಭವಾಗಿ ಗೆದ್ದ ನಂತರ, ಕೊಸೆಟ್ಸ್ಕಾಯಾ ಅವರು ನಿವೃತ್ತಿಯೊಂದಿಗೆ ಎರಡನೇ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಗೆಲುವು ಭಾನುವಾರ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಅವರು ದೇಶವಾಸಿಗಳಾದ ಟಿ ಹೇಮಾ ನಾಗೇಂದ್ರ ಬಾಬು ಮತ್ತು ಶ್ರೀವೇದ್ಯಾ ಗುರಜಾಡ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದರು. ಇಶಾನ್ ಮತ್ತು ತನಿಶಾ ಶ್ರೇಯಾಂಕ ರಹಿತ ಭಾರತದ ಜೋಡಿ ವಿರುದ್ಧ ಕೇವಲ 29 ನಿಮಿಷಗಳಲ್ಲಿ 21-16, 21-12 ಗೆಲುವು ದಾಖಲಿಸಿದರು.

ಕೊರೊನಾದಿಂದಾಗಿ ಪುರುಷರ ಡಬಲ್ಸ್ ನಡೆಯಲಿಲ್ಲ ಇದಕ್ಕೂ ಮೊದಲು, ಅರ್ನಾಡ್ ಮರ್ಕೆಲ್ ಮತ್ತು ಲ್ಯೂಕಾಸ್ ಕ್ಲೇರ್‌ಬೌಟ್ ನಡುವಿನ ಪುರುಷರ ಸಿಂಗಲ್ಸ್ ಪ್ರಶಸ್ತಿ ಪಂದ್ಯವನ್ನು ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರು COVID-19 ಗೆ ತುತ್ತಾದ್ದರಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಹೇಳಿಕೆಯಲ್ಲಿ, “ಸೈಯದ್ ಮೋದಿ ಇಂಡಿಯಾ ಇಂಟರ್‌ನ್ಯಾಶನಲ್ 2022 ರ ಪುರುಷರ ಸಿಂಗಲ್ಸ್ ಫೈನಲ್ ಅನ್ನು ‘ನೋ ಮ್ಯಾಚ್’ ಎಂದು ಘೋಷಿಸಲಾಗಿದೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ