ಹೆಚ್ಚುತ್ತಿರುವ ಕೊರೊನಾ, ಒಮಿಕ್ರಾನ್​; ತಮ್ಮ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡೆರ್ನ್

ಹೆಚ್ಚುತ್ತಿರುವ ಕೊರೊನಾ, ಒಮಿಕ್ರಾನ್​; ತಮ್ಮ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡೆರ್ನ್
ಜಸಿಂದಾ ಅರ್ಡರ್ನ್​

ಹೀಗೆ ಮದುವೆ ರದ್ದುಗೊಳಿಸಿಕೊಳ್ಳುತ್ತಿರುವುದಕ್ಕೆ ಏನೆನ್ನಿಸುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಸಿಂದಾ, ಅದೇ ಜೀವನ-ಇನ್ನೇನು ಮಾಡುವುದು ಎಂದು ಉತ್ತರಿಸಿದ್ದಾರೆ.

TV9kannada Web Team

| Edited By: Lakshmi Hegde

Jan 24, 2022 | 5:49 PM

ವೆಲ್ಲಿಂಗ್ಟನ್​: ಕೊರೊನಾ ವೈರಸ್ ಜಗತ್ತಿನಾದ್ಯಂತ ಪಸರಸಿದೆ. ಈ ಸೋಂಕಿನ ಕಾರಣದಿಂದ ಶುಭ ಸಮಾರಂಭಗಳಿಗೆ ಕಡಿವಾಣ ಬೀಳುತ್ತಲೇ ಇದೆ. ಸಾಮಾನ್ಯ ಜನರು ಬಿಡಿ, ದೇಶದ ಪ್ರಮುಖ ನಾಯಕರೂ ಕೂಡ ಕೊರೊನಾ ಪ್ರಭಾವಕ್ಕೆ ಒಳಗಾಗಿದ್ದಾರೆ. ಅದರಲ್ಲೀಗ ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡೆರ್ನ್ (New Zealand Prime Minister Jacinda Ardern) ಕೂಡ ಸೇರಿದ್ದಾರೆ. ನ್ಯೂಜಿಲ್ಯಾಂಡ್​ನಲ್ಲಿ ಕೊರೊನಾ ಮತ್ತು ಒಮಿಕ್ರಾನ್ ಸೋಂಕಿನ ಅಬ್ಬರ ಹೆಚ್ಚುತ್ತಿರುವ ಕಾರಣಕ್ಕೆ ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾಗಿ ಪ್ರಧಾನಿ ಜಸಿಂದಾ ಭಾನುವಾರ ತಿಳಿಸಿದ್ದಾರೆ. 

ಕೊವಿಡ್ 19 ಪರಿಸ್ಥಿತಿ ಘೋಷಿಸಲು ಜಸಿಂದಾ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಅದರಲ್ಲಿ ಮಾತನಾಡಿದ ಅವರು, ಕೊವಿಡ್​ 19 ಕಾರಣದಿಂದ ನನ್ನ ಮದುವೆ ನಡೆಯುತ್ತಿಲ್ಲ.ಈ ಮೂಲಕ ಕೊರೊನಾ ವೈರಸ್ ಕಾರಣದಿಂದ ಇಂಥ ಅನುಭವ ಹೊಂದಿದ ಅನೇಕ ಜನರ ಸಾಲಿಗೆ ನಾನೂ ಸೇರುತ್ತಿದ್ದೇನೆ ಎಂದು ತಿಳಿಸಿದ್ದಾರೆ.  ಮೊಟುಯೆಕಾ ನಗರದ ಒಂದೇ ಕುಟುಂಬದ ನಾಲ್ವರಲ್ಲಿ ಒಮಿಕ್ರಾನ್​ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅವರೆಲ್ಲ ಒಂದು ಮದುವೆಗಾಗಿ ಆಕ್ಲೆಂಡ್​ಗೆ ತೆರಳಿದ್ದರು. ಹೀಗೆ ಮದುವೆ, ಅಂತ್ಯಸಂಸ್ಕಾರ, ಮನರಂಜನಾ ಪಾರ್ಕ್​ಗಳು, ಇತರ ಪ್ರವಾಸಿ ತಾಣಗಳೆಲ್ಲ ದೇಶವನ್ನು ಕೊವಿಡ್ 19 ಅಪಾಯದ ಕೂಪಕ್ಕೆ ತಳ್ಳುತ್ತಿವೆ ಎಂದು ಜಸಿಂದಾ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಜಸಿಂದಾ ಮದುವೆ ಅವರ ಪ್ರಿಯತಮ ಕ್ಲಾರ್ಕ್ ಗೇಫೋರ್ಡ್ ರೊಂದಿಗೆ  ಬರುವ ಬೇಸಿಗೆಯಲ್ಲಿ ನಡೆಯಬೇಕಿತ್ತು. ಆದರೆ ಇದೀಗ ಮತ್ತೆ ಕೊರೊನಾ ಹೆಚ್ಚುತ್ತಿರುವ ಕಾರಣಕ್ಕೆ ಅದನ್ನು ರದ್ದುಗೊಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಂದರೆ ಸದ್ಯಕ್ಕೆಂತೂ ಮದುವೆ ನಡೆಯುವುದಿಲ್ಲ ಎಂದಿದ್ದಾರೆ. ಹೀಗೆ ಮದುವೆ ರದ್ದುಗೊಳಿಸಿಕೊಳ್ಳುತ್ತಿರುವುದಕ್ಕೆ ಏನೆನ್ನಿಸುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದೇ ಜೀವನ-ಇನ್ನೇನು ಮಾಡುವುದು ಎಂದು ಉತ್ತರಿಸಿದ್ದಾರೆ. ಇನ್ನು ಕಳೆದ ತಿಂಗಳು ಮಾತನಾಡಿದ್ದ ದೇಶದ ಸಚಿವ ಕ್ರಿಸ್​ ಹಿಪ್​ಕಿನ್ಸ್​, ನ್ಯೂಜಿಲ್ಯಾಂಡ್​ನಲ್ಲಿ ಫೆಬ್ರವರಿಯವರೆಗೂ ಕೊರೊನಾ ಮತ್ತು ಒಮಿಕ್ರಾನ್​ ತೀವ್ರವಾಗಿ ಹರಡುತ್ತದೆ. ನಂತರ ಸ್ವಲ್ಪ ನಿಧಾನವಾಗಲಿದೆ. ನಾವು ನಿರ್ಬಂಧ ವಿಧಿಸಲೇಬೇಕಾಗುತ್ತದೆ. ಇದು ಸಾಮಾನ್ಯ ಜನರ ರಜಾದಿನಗಳ ಮನರಂಜನೆ, ಪ್ರವಾಸಗಳಿಗೆ ಕಡಿವಾಣ ಹಾಕುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಸಾಧನೆಗೆ ಬಡತನ ಅಡ್ಡಿ ಎಂಬುದು ಸುಳ್ಳು! ಕಷ್ಟಪಟ್ಟು ಓದಿ ಪಿಎಸ್​ಐ ಆದ ಹೆಣ್ಣುಮಗಳು; ಇಲ್ಲಿದೆ ವಿಶೇಷ ವರದಿ

Follow us on

Related Stories

Most Read Stories

Click on your DTH Provider to Add TV9 Kannada