ಸಾಧನೆಗೆ ಬಡತನ ಅಡ್ಡಿ ಎಂಬುದು ಸುಳ್ಳು! ಕಷ್ಟಪಟ್ಟು ಓದಿ ಪಿಎಸ್​ಐ ಆದ ಹೆಣ್ಣುಮಗಳು; ಇಲ್ಲಿದೆ ವಿಶೇಷ ವರದಿ

ಸಾಧನೆಗೆ ಛಲ ಮುಖ್ಯ. ಬಡತನ ಕಷ್ಟ ಯಾವುದು ಅಡ್ಡಿ ಅಲ್ಲ ಅನ್ನೋದನ್ನು ಕೆಲವರು ಸಾಬೀತು ಮಾಡುತ್ತಲೇ ಬಂದಿದ್ದಾರೆ. ಇಂತವರಲ್ಲಿ ಸದ್ಯ ರೇಣುಕಾ ವಡ್ಡರ್ ಎಂಬ ಈ ಯುವತಿ ಕೂಡ ಒಬ್ಬರಾಗಿದ್ದಾರೆ. ರೇಣುಕಾ ಅವರನ್ನು ಈಗ ಬರಿ ರೇಣುಕಾ ಅನ್ನುವ ಹಾಗಿಲ್ಲ. ಇವರನ್ನು ಪಿಎಸ್ಐ ರೇಣುಕಾ ಎನ್ನಬೇಕು.

ಸಾಧನೆಗೆ ಬಡತನ ಅಡ್ಡಿ ಎಂಬುದು ಸುಳ್ಳು! ಕಷ್ಟಪಟ್ಟು ಓದಿ ಪಿಎಸ್​ಐ ಆದ ಹೆಣ್ಣುಮಗಳು; ಇಲ್ಲಿದೆ ವಿಶೇಷ ವರದಿ
ಪಿಎಸ್​ಐ ರೇಣುಕಾ ತಾಯಿ ಜೊತೆಗೆ
Follow us
TV9 Web
| Updated By: ganapathi bhat

Updated on: Jan 24, 2022 | 5:30 PM

ಬಾಗಲಕೋಟೆ: ಆಕೆ ಕೇವಲ ನಾಲ್ಕು ವರ್ಷದವಳಿದ್ದಾಗ ತಂದೆಯನ್ನು ಕಳೆದುಕೊಂಡಿದ್ದರಳು. ಮಕ್ಕಳ ಸಹಿತ ಸಂಸಾರ ನಿರ್ವಹಣೆ ಮಾಡೋದಕ್ಕೆ ಆಕೆಯ ತಾಯಿ ಹತ್ತಾರು ಮನೆಗಳಲ್ಲಿ ಪಾತ್ರೆ ತೊಳೆದು ಜೀವನ ಮಾಡಿದ್ದಳು. ಸಹೋದರರು ಗೌಂಡಿ ಕೆಲಸ ಮಾಡಿ ಸಹೋದರಿಗೆ ಆಸರೆಯಾಗಿದ್ದರು. ಈಗ ಇಂತಹ ಕಡುಬಡತನದಲ್ಲಿ ಬೆಳೆದ ಆ ಮನೆ ಮಗಳು ಪಿಎಸ್​ಐ ಆಗಿ ಆಯ್ಕೆಯಾಗಿದ್ದಾಳೆ. ಚಿಕ್ಕಂದಿನಿಂದಲೂ ಬಡತನದಲ್ಲಿ ಬೆಳೆದ ಮಗಳ ಸಾಧನೆ ತಾಯಿಯ ಕಣ್ಣಂಚಲ್ಲಿ ನೀರು ತರಿಸಿದೆ. ಮಗಳು ಪಿಎಸ್ಐ ಆದಳು ಎಂಬ ಸುದ್ದಿ ಮನೆಯಲ್ಲಿ ಆನಂದ ಬಾಷ್ಪ ಹರಿಸಿದೆ.

ಪ್ಲಾಷ್ಟರ್ ಇಲ್ಲದ ಅರ್ದಂಬರ್ಧ ಸ್ಥಿತಿಯಲ್ಲಿರುವ ಚಿಕ್ಕ ಗೂಡಿನಂತಹ ಮನೆ. ಆ ಮನೆಯಲ್ಲಿ ಕಡುಬಡತನದಲ್ಲಿ ಅರಳಿ ಸಾಧನೆ ಮೆರೆದ ಯುವತಿ. ಮಗಳ ಸಾಧನೆ ಕಂಡು ತಾಯಿಯ ಕಣ್ಣಂಚಲ್ಲಿ ಆನಂದಬಾಷ್ಪ. ಬಡತನವನ್ನು ಸವಾಲಾಗಿ ಮೆಟ್ಟಿನಿಂತು ಸಾಧನೆಗೈದ ಸಾಧಕಿಗೆ ಸ್ಥಳೀಯರಿಂದ ಸನ್ಮಾನ. ಅಂದ ಹಾಗೆ ಈ ಘಟನೆ ನಡೆದಿದ್ದು ಬಾಗಲಕೋಟೆಯ ನವನಗರದ ಸೆಕ್ಟರ್ ನಂ 36ರ ಒಂದು ಮನೆಯಲ್ಲಿ.

ಹೌದು ಸಾಧನೆಗೆ ಬಡತನ ಅಡ್ಡಿ ಅಂತ ಬಹುತೇಕರು ಅಂದುಕೊಂಡರೆ. ಅಲ್ಲಲ್ಲಿ ಆಗಾಗ ಸಾಧನೆಗೆ ಛಲ ಮುಖ್ಯ. ಬಡತನ ಕಷ್ಟ ಯಾವುದು ಅಡ್ಡಿ ಅಲ್ಲ ಅನ್ನೋದನ್ನು ಕೆಲವರು ಸಾಬೀತು ಮಾಡುತ್ತಲೇ ಬಂದಿದ್ದಾರೆ. ಇಂತವರಲ್ಲಿ ಸದ್ಯ ರೇಣುಕಾ ವಡ್ಡರ್ ಎಂಬ ಈ ಯುವತಿ ಕೂಡ ಒಬ್ಬರಾಗಿದ್ದಾರೆ. ಬಾಗಲಕೋಟೆಯ ನವನಗರ ನಿವಾಸಿ ರೇಣುಕಾರ ಅವರನ್ನು ಈಗ ಬರಿ ರೇಣುಕಾ ಅನ್ನುವ ಹಾಗಿಲ್ಲ. ಇವರನ್ನು ಪಿಎಸ್ಐ ರೇಣುಕಾ ಎನ್ನಬೇಕು.

ಮಗಳ ಸಾಧನೆ ನೆನೆದು ತಾಯಿ ಆನಂದ ಬಾಷ್ಪ

ರೇಣುಕಾ ವಡ್ಡರ್ ಇತ್ತೀಚೆಗೆ ಪಿಎಸ್ಐ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಈಗ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ. ಇವರ ತಾಯಿ ಕಲ್ಲವ್ವ ವಡ್ಡರ್ ಹತ್ತಾರು ಮನೆಯ ಪಾತ್ರೆ ತೊಳೆದು ಮಕ್ಕಳನ್ನು ಸಲುಹಿದ್ದು ಈಗ ಸಾರ್ಥಕವಾಗಿದ್ದು, ಮಗಳ ಸಾಧನೆ ನೆನೆದು ತಾಯಿ ಆನಂದ ಬಾಷ್ಪ ಹರಿಸಿದ್ದಾರೆ. ನನ್ನ ಸಾಧನೆಗೆ ನನ್ನ ತಾಯಿ ಸಹೋದರರು ಕುಟುಂಬದ ಎಲ್ಲರ ಸಹಕಾರ ಕಾರಣ, ಅವರ ಪ್ರೋತ್ಸಾಹವೆ ನಾನು ಪಿಎಸ್ಐ ಆಗಲು ಸಹಕಾರಿ ಆಯಿತು ಎಂದು ತಾಯಿ, ಸಹೋದರರು, ಕುಟುಂಬಸ್ಥರಿಗೆ ಯುವತಿ ಧನ್ಯವಾದ ಹೇಳಿದ್ದಾರೆ.

ರೇಣುಕಾ ತಂದೆ- ತಾಯಿಗೆ ಒಟ್ಟು ಐದು ಜನ ಮಕ್ಕಳು. ಇಬ್ಬರು ಸಹೋದರರು. ಮೂವರು ಹೆಣ್ಣು ಮಕ್ಕಳು. ಅದರಲ್ಲಿ ಕೊನೆಯವರೇ ರೇಣುಕಾ ವಡ್ಡರ್. ಮೊದಲಿನಿಂದಲೂ ಓದಿನಲ್ಲಿ ಜಾಣೆಯಿದ್ದ ರೇಣುಕಾ ಅವರನ್ನು ತಾಯಿ ಎಷ್ಟೇ ಕಷ್ಟ ಆಗಲಿ ಅಂದರೂ ಮಂದಿ ಮನೆ ಪಾತ್ರೆ ತೊಳೆದು ಓದಿಸಿದರು. ಇನ್ನು ನಂತರದಲ್ಲಿ ಇಬ್ಬರು ಸಹೋದರರು ಗೌಂಡಿಗಳಿದ್ದು, ಅವರು ರೇಣುಕಾ ಅವರಿಗೆ ಬೆನ್ನೆಲುಬಾಗಿ ನಿಂತು ಎಲ್ಲ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

PSI Renuka Bagalakote 1

ರೇಣುಕಾ ಸಾಧನೆಗೆ ಸ್ಥಳೀಯರ ಶುಭಾಶಯ

ರೇಣುಕಾ ಸಾಧನೆಗೆ ಸ್ಥಳೀಯರ ಶುಭಾಶಯ

ರೇಣುಕಾ ವಡ್ಡರ್ 2013 ರಲ್ಲಿ ಡಿಎಡ್ ಮುಗಿಸಿದ್ದು, 2016ರಲ್ಲಿ ಬಿಎ ಪದವಿ ಮುಗಿಸಿದ್ದಾರೆ. ಸದ್ಯ ತಾಯಿ, ಸಹೋದರರು ಎಲ್ಲರ ಪ್ರೋತ್ಸಾಹದಿಂದ ಬಡತನದಲ್ಲೂ ಕಷ್ಟಪಟ್ಟು ಓದಿದ ರೇಣುಕಾ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ. ಇವರು ಧಾರವಾಡದ ಐಸಿಎಸ್ ಕೋಚಿಂಗ್ ಸೆಂಟರ್​ನಲ್ಲಿ ಕೋಚಿಂಗ್ ಪಡೆದಿದ್ದರು. ನಂತರ ಬಾಗಲಕೋಟೆ ಸರಕಾರಿ ಲೈಬ್ರರಿಯಲ್ಲಿ ದಿನವೂ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಅಧ್ಯಯನ ಮಾಡುತ್ತಾ ತಯಾರಿ ನಡೆಸಿದ್ದ ಇವರು ಕೊನೆಗೂ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಇನ್ನು ರೇಣುಕಾ ಅವರ ಸಾಧನೆಗೆ ಸ್ಥಳೀಯರು ಮನೆಗೆ ಬಂದು ಶುಭಾಶಯ ಹೇಳೋದಲ್ಲದೆ ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದಾರೆ. ಮಗಳ ಸಾಧನೆಗೆ ಚಿಕ್ಕಪ್ಪಂದಿರು ನಮ್ಮ ಮನೆತನದಲ್ಲಿ ಇದೆ ಮೊದಲು ಇಂತಹ ಉತ್ತಮ ಸರಕಾರಿ ನೌಕರಿ ಸಿಕ್ಕಿರೋದು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇನ್ನು ಅದೆಷ್ಟೋ ಜನರು ಬಡತನ ಅಂತ ನೆಪ ಹೇಳಿಕೊಂಡು ಸಾಧನೆ ಹಾದಿ ಹಿಡಿಯೋದನ್ನೇ ಮರೆತು ಬಿಡುತ್ತಾರೆ. ಆದರೆ ಕಡುಬಡತನದಲ್ಲೂ ಶ್ರದ್ದೆಯಿಂದ ಓದಿದ ರೇಣುಕಾ ಪಿಎಸ್ಐ ಆಗುವ ಮೂಲಕ ತಾಯಿ, ಸಹೋದರರ ಕಷ್ಟ ದೂರ ಮಾಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ವಿಶೇಷ ವರದಿ: ರವಿ ಮೂಕಿ, ಟಿವಿ9 ಕನ್ನಡ, ಬಾಗಲಕೋಟೆ

ಇದನ್ನೂ ಓದಿ: ಬಾಗಲಕೋಟೆ: ರಂಗೋಲಿಯಲ್ಲಿ ಅರಳಿತು ಅಪ್ಪು ಭಾವಚಿತ್ರ; ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ

ಇದನ್ನೂ ಓದಿ: ಬಾಗಲಕೋಟೆಯಲ್ಲೊಂದು ವಿಶಿಷ್ಟ ಜಾತ್ರಾ ಮಹೋತ್ಸವ; ಪಲಕ್ಕಿಗೆ ತೆಂಗಿನಕಾಯಿ ಎಸೆಯುವುದರ ಹಿಂದಿನ ಕಾರಣ ಏನು ಗೊತ್ತಾ?

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ