ಬಿಜೆಪಿಯಲ್ಲಿ ಭಿನ್ನಮತ, ಬಣ ರಾಜಕಾರಣ: ಸಿದ್ದರಾಮಯ್ಯ ಟೀಕೆ
ಕರ್ನಾಟಕದ ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಗಮನವೇ ಹರಿಸಿಲ್ಲ. ಬಿಜೆಪಿಯು ಶಿಸ್ತಿನ ಪಕ್ಷ ಅಲ್ಲ, ಅಶಿಸ್ತಿನ ಪಕ್ಷ ಅದು ಎಂದು ವ್ಯಂಗ್ಯವಾಡಿದರು.
ಬಾಗಲಕೋಟೆ: ಕರ್ನಾಟಕದ ಬಿಜೆಪಿಯಲ್ಲಿ ಹಲವು ಗುಂಪುಗಳಿರುವುದು ಸ್ಪಷ್ಟವಾಗಿದೆ. ಸಚಿವ ಸಂಪು ಪುರಾರಚನೆ ಮತ್ತು ಕೆಲ ವಿಚಾರಗಳಲ್ಲಿ ಶಾಸಕರ ನಡುವೆ ಭಿನ್ನಮತ ಇರುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಬಿಜೆಪಿಯಲ್ಲಿ ಗುಂಪುಗಾರಿಕೆ ಇತ್ತು. ಈಗ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆಯೂ ಆಗಿದ್ದಾಗಲೂ ಗುಂಪುಗಾರಿಕೆ ಮುಂದುವರಿದಿದೆ. ಇದನ್ನು ಸರಿದೂಗಿಸಿಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕದ ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಗಮನವೇ ಹರಿಸಿಲ್ಲ. ಬಿಜೆಪಿಯು ಶಿಸ್ತಿನ ಪಕ್ಷ ಅಲ್ಲ, ಅಶಿಸ್ತಿನ ಪಕ್ಷ ಅದು ಎಂದು ವ್ಯಂಗ್ಯವಾಡಿದರು.
ಬಾದಾಮಿ ಪಟ್ಟಣದ ಮ್ಯೂಸಿಯಂ ಬಳಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸಿದ್ದರಾಮಯ್ಯ ಇದೇ ವೇಳೆ ಭೂಮಿಪೂಜೆ ನೆರವೇರಿಸಿದರು. ಮಂಗಳಾರತಿ ತಟ್ಟೆಗೆ ಐದನೂರು ರೂಪಾಯಿ ದಕ್ಷಿಣೆ ಹಾಕಿದರು. ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸೂಚಿಸಿ, ಕಾಮಗಾರಿಗಳನ್ನು ಪರಿಶೀಲಿಸಿದರು. ನಂತರ ಪುರಸಭೆಯ ನೂತನ ಅಧ್ಯಕ್ಷ ರಾಜಮಹಮ್ಮದ ಭಾಗವಾನ ಮನೆಗೆ ಭೇಟಿ ನೀಡಿ, ಶುಗರ್ಲೆಸ್ ಕಾಫಿ ಕುಡಿದರು. ಈ ವೇಳೆ ಕೆಲಕಾಲ ಸ್ಥಳೀಯರೊಂದಿಗೆ ಮಾತನಾಡಿದರು. ನಂತರ ನೂತನ ಅಧ್ಯಕ್ಷ ರಾಜಮಹಮ್ಮದ ಕುಟುಂಬದ ಜೊತೆ ಗ್ರೂಪ್ ಫೋಟೊ ತೆಗೆಸಿಕೊಂಡರು.
ಬಾದಾಮಿ ಪುರಸಭೆ ಬಳಿ ವಿಕಲಚೇತನರಿಗೆ ಎರಡು ಸಾವಿರ ರೂಪಾಯಿ ನಗದು ಕೊಟ್ಟು ಧನಸಹಾಯ ಮಾಡಿದರು. ವಿಕಲಚೇತನ ತಂದೆ ಹಾಗೂ ಮಗಳು ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬಂದಿದ್ದರು.
ಕಾಂಗ್ರೆಸ್ ಪಾದಯಾತ್ರೆ ಹತ್ತಿಕ್ಕಲು ವೀಕೆಂಡ್ ಕರ್ಫ್ಯೂ ಜಾರಿ: ಸಿದ್ದರಾಮಯ್ಯ ಹುಬ್ಬಳ್ಳಿ: ಕರ್ನಾಟಕದ ಬಿಜೆಪಿ ಸರ್ಕಾರವು ಕಾಂಗ್ರೆಸ್ ನಡೆಸುತ್ತಿದ್ದ ಮೇಕೆದಾಟು ಪಾದಯಾತ್ರೆ ಹತ್ತಿಕ್ಕಲು ವೀಕೆಂಡ್ ಕರ್ಪ್ಯೂ ಜಾರಿ ಮಾಡಿತು. ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಹರಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್ ಅವರಿಗೆ ನಮ್ಮ ಪಾದಯಾತ್ರೆಯಿಂದ ಕೊವಿಡ್ ಬಂತಾ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಮಹದಾಯಿ, ಕೃಷ್ಣ, ಕಲ್ಯಾಣ ಕರ್ನಾಟಕದ 371 ಜೆ ಪರವಾಗಿ ಹೋರಾಟ ನಡೆಸುತ್ತೇವೆ. ಮಹದಾಯಿ ಪಾದಯಾತ್ರೆ ಬಗ್ಗೆ ಈಗಾಗಲೇ ಪಕ್ಷದಲ್ಲಿ ಚರ್ಚೆ ನಡೆದಿದೆ. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಮಹದಾಯಿ ವಿಷಯದಲ್ಲಿ ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಹೋರಾಟ ಮಾಡಿದ್ದರು. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಹದಾಯಿ ಕಾಮಗಾರಿ ಜಾರಿಗೆ ತರುತ್ತೇವೆ. ಈ ಬಗ್ಗೆ ರಕ್ತದಲ್ಲಿ ಬರೆದು ಕೊಡುತ್ತೆನೆಂದು ಯಡಿಯೂರಪ್ಪನವರು ಮಾತು ಕೊಟ್ಟಿದ್ದರು.
ಈಗ ಉತ್ತರ ಕರ್ನಾಟಕ ಭಾಗದ ಜನರಿಗೆ ನೀರು ಬಂತಾ? ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮಹದಾಯಿ ಪಾದಯಾತ್ರೆಯ ರೂಪುರೇಷೆಯನ್ನು ಶೀಘ್ರ ಸಿದ್ಧಪಡಿಸುತ್ತೇವೆ ಎಂದರು. ರಾಜ್ಯದ ಜನ ಈಗಾಗಲೇ ಹತ್ತಾರು ಸಮಸ್ಯೆಗಳಿಂದ ತತ್ತರಿಸಿದ್ದಾರೆ. ವೀಕೆಂಡ್ ಕರ್ಪ್ಯೂ ಅವಶ್ಯಕತೆ ಇರಲಿಲ್ಲ. ಆದರೂ ಸರ್ಕಾರ ಜಾರಿಗೆ ಜಾರಿ ಮಾಡಿತು. ಪಾದಯಾತ್ರೆ ಹತ್ತಿಕ್ಕುವ ಉದ್ದೇಶ ಬಿಟ್ಟರೆ ಸರ್ಕಾರದ ನಿರ್ಧಾರದ ಹಿಂದೆ ಬೇರೇನೂ ಇರಲಿಲ್ಲ ಎಂದರು.
ಇದನ್ನೂ ಓದಿ: ಹೇ ನಾಗರಾಜ್, ಇಮ್ಮಿಡಿಯಟ್ ಆರ್ಡರ್ ಮಾಡು: ಸಚಿವ ಎಂಟಿಬಿ ನಾಗರಾಜ್ ಜೊತೆ ಸಿದ್ದರಾಮಯ್ಯ ಖಡಕ್ ಮಾತು ಇದನ್ನೂ ಓದಿ: ಭಾರತೀಯ ಆಡಳಿತ ಸೇವೆಯ ನಿಯಮ 1954ಕ್ಕೆ ತಿದ್ದುಪಡಿ ಮೂಲಕ ಕೇಂದ್ರ ನಿಯಂತ್ರಣ ಸಾಧಿಸಲು ಹೊರಟಿದೆ -ಸಿದ್ದರಾಮಯ್ಯ ಅಸಮಾಧಾನ