ಲಸಿಕೆ ಒಲ್ಲೆನೆಂದು ಮಾಳಿಗೆ ಹತ್ತಿ ಕುಳಿತ ಮಂಜುನಾಥನನ್ನು ಕೆಳಗಿಳಿಸಲು ಅರೋಗ್ಯ ಕಾರ್ಯಕರ್ತರು ಹರಸಾಹಸ ಪಡಬೇಕಾಯಿತು!

ಲಸಿಕೆ ಒಲ್ಲೆನೆಂದು ಮಾಳಿಗೆ ಹತ್ತಿ ಕುಳಿತ ಮಂಜುನಾಥನನ್ನು ಕೆಳಗಿಳಿಸಲು ಅರೋಗ್ಯ ಕಾರ್ಯಕರ್ತರು ಹರಸಾಹಸ ಪಡಬೇಕಾಯಿತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 24, 2022 | 10:28 PM

ಅವನ ಮನೆಯ ಸುತ್ತ ನೆರೆದಿರುವ ಜನ ತಮ್ಮ ಕಣ್ಣೆದಿರು ನಡೆಯುತ್ತಿರುವ ಲೈವ್ ತಮಾಷೆಯನ್ನು ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ. ಅವನ ಕುಟುಂಬದ ಸದಸ್ಯರಿಗೆ ಮಂಜುನಾಥ ಕೆಳಗಿಳಿದು ಬರುವಂತೆ ಮನವೊಲಿಸಲು ತಹಸೀಲ್ದಾರ್ ಹೇಳುತ್ತಿದ್ದಾರೆ.

ಕೊವಿಡ್ ಲಸಿಕಾ ಅಭಿಯಾನವನ್ನು (Covid Vaccination Programme) ಯಶಸ್ವೀಯಾಗಿ ನಡೆಸುತ್ತಿರುವ ಅಧಿಕಾರಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ (health workers) ಹಲವು ಸ್ವಾರಸ್ಯಕರ ಸಂಗತಿಗಳು ಎದುರಾಗುತ್ತಿವೆ. ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹೆದರಿ ಮನೆಬಿಟ್ಟು ಓಡುತ್ತಾರೆ. ಕಲಬುರ್ಗಿಯ (Kalaburagi) ಜಿಲ್ಲೆಯಲ್ಲಿರುವ ತಾಂಡಾದ ವೃದ್ಧೆಯೊಬ್ಬಳು ನಾನು ಕೊರೋನಾ ರೋಗ ಬಂದು ಸಾಯ್ತೀನಿ ಅದರೆ, ಸೂಜಿ (ಲಸಿಕೆ) ಚುಚ್ಚಿಸಿಕೊಳ್ಳುವುದಿಲ್ಲ ಹಟ ಹಿಡಿದು ಕೂತುಬಿಡುತ್ತಾಳೆ! ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ಒಬ್ಬ ಮಹಿಳೆ ಲಸಿಕೆ ಹಾಕಲು ಬಂದವರ ಮುಂದೆ ಮೈಮೇಲೆ ದೇವರು ಬಂದಂತೆ ಆಡುತ್ತಾಳೆ. ಕೆಲವರು ಮನೆಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಇನ್ನೂ ಹಲವಾರು ತಮಾಷಿ ಘಟನೆಗಳು ಮಾರಾಯ್ರೇ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಎನ್ ದೇವರಹಳ್ಳಿ ಸೋಮವಾರ ನಡೆದ ಘಟನೆ ಕಡಿಮೆ ಸ್ವಾರಸ್ಯಕರವಾಗಿಲ್ಲ ಮಾರಾಯ್ರೇ! ಈ ವಿಡಿಯೋದ ಹೀರೋ ನೋಡಿ ಏನು ಮಾಡಿದ್ದಾನೆ ಅಂತ. ಚಳ್ಳಕೆರೆ ತಹಸಿಲ್ದಾರ್ ಎನ್ ರಘುಮೂರ್ತಿ ಅವರ ನೇತೃತ್ವದಲ್ಲಿ ಆರೋಗ್ಯ ಕಾರ್ಯಕರ್ತರ ತಂಡ ತನ್ನ ಮನೆ ಬಳಿ ಬರುತ್ತಿದ್ದಂತೆ ಈ ಮಹಾಶಯ ಮನೆ ಮಾಳಿಗೆ ಹತ್ತಿದ್ದಾನೆ ಮತ್ತು ಕೆಳಗಿಳಿಯಲು ಸುತಾರಾಂ ತಯಾರಿಲ್ಲ.

ಅಂದಹಾಗೆ, ಕಥಾನಾಯಕನ ಹೆಸರು ಮಂಜುನಾಥ. ಅವನ ಮನೆಯ ಸುತ್ತ ನೆರೆದಿರುವ ಜನ ತಮ್ಮ ಕಣ್ಣೆದಿರು ನಡೆಯುತ್ತಿರುವ ಲೈವ್ ತಮಾಷೆಯನ್ನು ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ. ಅವನ ಕುಟುಂಬದ ಸದಸ್ಯರಿಗೆ ಮಂಜುನಾಥ ಕೆಳಗಿಳಿದು ಬರುವಂತೆ ಮನವೊಲಿಸಲು ತಹಸೀಲ್ದಾರ್ ಹೇಳುತ್ತಿದ್ದಾರೆ.

ನರ್ಸ್​ಗಳು, ‘ಮಂಜಾ ಕೆಳಗಿಳಿದು ಬಾರೋ,’ ಅನ್ನುತ್ತಿದ್ದಾರೆ. ಅದರೆ ಅವನು ಸುಲಭಕ್ಕೆ ಮಣಿಯುವ ಆಸಾಮಿಯಲ್ಲ.

ಅಂತಿಮವಾಗಿ ಅದ್ಯಾರ ಮಾತು ಅವನಿಗೆ ತಾಕಿತೋ? ಕೆಳಗಿಳಿದು ಬಂದು ಲಸಿಕೆ ಚುಚ್ಚಿಸಿಕೊಳ್ಳುವ ಮೊದಲು ಸಹ ಕಾರ್ಯಕರ್ತರೊಂದಿಗೆ ವಾದ ಮಾಡುತ್ತಾನೆ. ತಮ್ಮ ಮಿಶನ್ ಯಶ ಕಂಡ ನಂತರ ತಹಸೀಲ್ದಾರ್ ರಘುಮೂರ್ತಿ ಖುಷಿಯಿಂದ ಅವನಿಗೆ ಹೂ ನೀಡಿ ಧನ್ಯವಾದಗಳನ್ನು ಹೇಳುತ್ತಾರೆ!

ಇದನ್ನೂ ಓದಿ:   Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್​ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ