ಬಾಗಲಕೋಟೆ ಜಿಲ್ಲೆ ಗ್ರಾಮವೊಂದರ ಸರ್ಕಾರಿ ಜಾಗದಲ್ಲಿ ಸ್ಥಾಪಿಸಿದ್ದ ಪ್ರತಿಮೆಗಳನ್ನು ತೆರವುಗೊಳಿಸಿದ್ದಕ್ಕೆ ಜನರ ಆಕ್ರೋಶ
ಅಧಿಕಾರಿಗಳು ಪ್ರತಿಮೆಗಳನ್ನು ತೆರವುಗೊಳಿಸಿದ್ದು ಸರಿಯಾದ ಕ್ರಮವೇ ಇರಬಹುದು ಅದರೆ ಅಗಲೇ ಹೇಳಿದಂತೆ ಜನರು ಪ್ರತಿಮೆಗಳೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ ಎಂಬ ಅಂಶವನ್ನು ಅವರು ಕಡೆಗಣಿಸಿದ್ದಾರೆ.
ಪ್ರತಿಮೆಗಳ (statues) ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಗಲಾಟೆ ದೊಂಬಿ, ವಿವಾದಗಳು (controversies) ನಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರು (freedom fighters), ಮಹಾತ್ಮರು, ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿದವರರ ಪ್ರತಿಮೆಗಳನ್ನು ದೇಶದಾದ್ಯಂತ ಸ್ಥಾಪಿಸಲಾಗಿದೆ. ಪುಂಡರು, ಸಮಾಜದಲ್ಲಿ ಸಹಬಾಳ್ವೆ, ಶಾಂತಿ-ಸಮಾಧಾನ ಬಯಸದ ಪುಂಡರು ಈ ಪ್ರತಿಮೆಗಳನ್ನು ವಿರೂಪಗೊಳಿಸಿ ದೊಂಬಿ ಸೃಷ್ಟಿಸುತ್ತಾರೆ. ಪ್ರತಿಮೆಗಳೊಂದಿಗೆ ಆಯಾ ಸಮುದಾಯದ ಜನ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಕೆಣಕಿ ಅಶಾಂತಿ ಸೃಷ್ಟಿಸುವುದು ಅವರ ಉದ್ದೇಶವಾಗಿರುತ್ತದೆ. ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ದೃಶ್ಯ ಪ್ರತಿಮೆಗಳ ಸ್ಥಾನಪಲ್ಲಟಕ್ಕೆ ಸಂಬಂಧಿಸಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ವೆಂಕಟಾಪುರ ಹೆಸರಿನ ಗ್ರಾಮದ ಸರ್ಕಾರೀ ಜಾಗಗಳಲ್ಲಿ ಅನುಮತಿ ಪಡೆಯದೆ ಪ್ರತಿಷ್ಠಾಪಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಜ್ಯೋತಿಬಾ ಫುಲೆ ಅವರ ಪ್ರತಿಮೆಗಳನ್ನು ಅಧಿಕಾರಿಗಳು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ.
ಅಧಿಕಾರಿಗಳ ಕ್ರಮ ಜನರನ್ನು ರೊಚ್ಚಿಗೆಬ್ಬಿಸಿದ್ದು ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಅಧಿಕಾರಿಗಳು ಪ್ರತಿಮೆಗಳನ್ನು ತೆರವುಗೊಳಿಸಿದ್ದು ಸರಿಯಾದ ಕ್ರಮವೇ ಇರಬಹುದು ಅದರೆ ಅಗಲೇ ಹೇಳಿದಂತೆ ಜನರು ಪ್ರತಿಮೆಗಳೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ ಎಂಬ ಅಂಶವನ್ನು ಅವರು ಕಡೆಗಣಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇತ್ತು. ಪ್ರತಿಮೆಗಳಿಗೆ ಕಲ್ಪಿಸಲಾಗುವ ಜಾಗವನ್ನು ಅವರಿಗೆ ತೋರಿಸಿ ತೆರವುಗೊಳಿಸುವ ಕ್ರಿಯೆ ಆರಂಭಿಸಬೇಕಿತ್ತು. ವೆಂಕಟಾಪುರ ಜನ ಅಕ್ರೋಶಗೊಂಡಿದ್ದಾರೆ, ಅವರನ್ನು ಸಮಾಧಾನಪಡಿಸಲು ಜಿಲ್ಲಾಡಳಿತ ಪ್ರಯತ್ನಿಸಬೇಕು.