Indira Canteen: ಇಂದಿರಾ ಕ್ಯಾಂಟೀನ್​ನಲ್ಲಿ ಕೋಟಿ ಕೋಟಿ ಲೂಟಿ ಮೇಯರ್ ಮತ್ತು ಸಚಿವರ ಹೆಸರು ಕೇಳಿಬಂದಿದೆ

ದಿನ ಕಳೆದಂತೆ ಕ್ಯಾಂಟೀನ್ ಕಡೆ ಜನ ಹೋಗುತ್ತಿಲ್ಲ. ಈ ನಡುವೆ ಇಂದಿರಾ ಕ್ಯಾಂಟೀನ್​ನಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗ್ತಿದೆ.. ಅದು ಕೂಡ ಮೇಯರ್ ಮತ್ತು ಸಚಿವರ ಹೆಸರು ಕೇಳಿಬಂದಿದೆ!

sadhu srinath

|

Jan 25, 2022 | 7:35 AM

ಇಂದಿರಾ ಕ್ಯಾಂಟೀನ್​ನಲ್ಲಿ ಕೋಟಿ ಕೋಟಿ ಲೂಟಿ ಮೇಯರ್ ಮತ್ತು ಸಚಿವರ ಹೆಸರು ಕೇಳಿಬಂದಿದೆ. ಕಡಿಮೆ ಅಮೌಂಟ್.. ಒಳ್ಳೆ ಫುಡ್ ಅಂತಾ ಪ್ರಾರಂಭದಲ್ಲಿ ಜನ ಇಂದಿರಾ ಕ್ಯಾಂಟೀನ್​ಗೆ ಹೋಗುತ್ತಿದ್ರು. ಆದ್ರೆ, ದಿನ ಕಳೆದಂತೆ ಕ್ಯಾಂಟೀನ್ ಕಡೆ ಜನ ಹೋಗುತ್ತಿಲ್ಲ. ಈ ನಡುವೆ ಇಂದಿರಾ ಕ್ಯಾಂಟೀನ್​ನಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗ್ತಿದೆ.. ಅದು ಕೂಡ ಮೇಯರ್ ಮತ್ತು ಸಚಿವರ ಹೆಸರು ಕೇಳಿಬಂದಿದೆ!

ನಕಲಿ ಬಿಲ್ ತೋರಿಸಿ ಕೋಟಿ ಕೋಟಿ ಲೂಟಿ..!
ರಾಜ್ಯದ ಹತ್ತು ಜಿಲ್ಲೆಗಳಲ್ಲಿ 68 ಇಂದಿರಾ ಕ್ಯಾಂಟೀನ್​ಗಳನ್ನ ರಿವಾರ್ಡ್ಸ್ ಹಾಗೂ ಭಾರತೀಯ ಮಾನವ ಕಲ್ಯಾಣ ಪರಿಷತ್ತು ಕಂಪನಿ ಗುತ್ತಿಗೆ ಪಡೆದಿದೆ. ಸರ್ಕಾರ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆಗೆ ಅಂತಾ ಒಟ್ಟು 1400 ಪ್ಲೇಟ್ ಊಟ, ತಿಂಡಿಗೆ ಗುತ್ತಿಗೆ ನೀಡಿದೆ. ಆದ್ರೆ, ಇಲ್ಲೂ ಭ್ರಷ್ಟಚಾರದ ಹೊಗೆಯಾಡ್ತಿದೆ. ಅದು ಕೂಡ ನಕಲಿ ಬಿಲ್​ಗೆ ಆಯಾ ಜಿಲ್ಲಾಡಳಿತ ಹಾಗೂ ಪಾಲಿಕೆಗಳು ಬಿಲ್ ಪಾವತಿ ಮಾಡ್ತಿದ್ಯಂತೆ. ಇಷ್ಟೇ ಅಲ್ಲ, ಗುತ್ತಿಗೆದಾರ ಅಧಿಕಾರಿಗಳಿಗೆ ಹಾಗೂ ಮೇಯರ್​ಗೆ ಲಂಚ ನೀಡುತ್ತಿದ್ದಾರಂತೆ.

ಲಂಚ ಪಡೆದ್ರಾ ತುಮಕೂರು ಪಾಲಿಕೆಯ ಮೇಯರ್..?
ಇನ್ನು, ಒಂದು ಕ್ಯಾಂಟೀನ್​ನಲ್ಲಿ ಪ್ರತಿದಿನ 10 ಜನ ತಿಂಡಿ ಊಟ ಮಾಡ್ತಿದ್ದಾರೆ. ಆದ್ರೆ ಗುತ್ತಿಗೆದಾರ ತಿಂಡಿಗೆ 500 ಟೋಕನ್, ಊಟಕ್ಕೆ 500 ಟೋಕನ್ ತೋರಿಸಿ, ಸರ್ಕಾರ ನೀಡುವ ಸಬ್ಸಿಡಿ ಹಣವನ್ನ ಪಡೀತಿದ್ದಾರೆ. ಈ ವಿಚಾರ ಗೊತ್ತಿದ್ರೂ ಅಧಿಕಾರಿಗಳು ಲಂಚ ಪಡೆದು ಸೈಲೆಂಟ್ ಆಗಿದ್ದಾರಂತೆ. ಮುಖ್ಯವಾಗಿ ತುಮಕೂರಿನ ಮೇಯರ್ ಕೃಷ್ಣಪ್ಪ ಲಂಚ ಪಡೆದು ಬಿಲ್ ಪಾವತಿ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದ ಕಂಪನಿಯ ಅಕೌಂಟೆಂಟ್ ಶ್ರೀಧರ್ ಎಂಬಾತ ನಾವೇ ಎಲ್ಲರಿಗೂ ಲಂಚ ನೀಡಿದ್ದೇವೆ ನನ್ನ ಬಳಿ ದಾಖಲೆ ಇದೆ ಅಂತಿದ್ದಾರೆ. ಜೊತೆಗೆ ಓರ್ವ ಸಚಿವರಿಗೆ ಇದೇ ವಿಚಾರವಾಗಿ 45 ಲಕ್ಷ ನೀಡಿರುವ ಬಗ್ಗೆಯೂ ಆರೋಪಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಲೂಟಿ ಮಾಡ್ತಿರೋದು ಹೊಸದೇನಲ್ಲ. ಆದ್ರೆ, ಇವತ್ತು ಅದೇ ಕಂಪನಿ ಸಿಬ್ಬಂದಿ ಲೂಟಿಕೋರರ ವಿರುದ್ಧ ತಿರುಗಿಬಿದ್ದಿದ್ದಾನೆ.. ಮತ್ತೊಂದ್ಕಡೆ ಲಂಚ ಪಡೆದಿದ್ದಾರೆ ಅನ್ನೋ ಆರೋಪದ ಬಗ್ಗೆ ಮೇಯರ್ ಅವರನ್ನ ಪ್ರಶ್ನಿಸಿದ್ರೆ, ಲಂಚ ಪಡೆದಿಲ್ಲ ಅಂತಾ ರಾಗ ಎಳೀತಿದ್ದಾರೆ. ಸದ್ಯ, ಇಂದಿರಾ ಕ್ಯಾಂಟೀನ್ ಬಿಲ್ ಹೆಸರಲ್ಲಿ ಲೂಟಿ ಮಾಡಲಾಗ್ತಿದೆ ಅಂತಾ ಸಿಬ್ಬಂದಿಯೇ ಆರೋಪ ಮಾಡ್ತಿದ್ದಾರೆ. ಅದ್ರಲ್ಲೂ ಸಚಿವರು ಮತ್ತು ಮೇಯರ್ ಹಾಗೂ ಅಧಿಕಾರಿಗಳು ಲಂಚ ಪಡೀತಿದ್ದಾರೆ ಅಂತಾ ದಾಖಲೆ ತೋರಿಸ್ತಿದ್ದಾರೆ.. ಹೀಗಾಗಿ ಸರ್ಕಾರ ತನಿಖೆ ನಡೆಸಿದ್ರೆ, ದೊಡ್ಡ ಹಗರಣ ಬಯಲಿಗೆ ಬರಬಹುದು.

Also Read:
Horoscope Today- ದಿನ ಭವಿಷ್ಯ; ಈ ರಾಶಿಯ ಕೆಲವರಿಗೆ ಸ್ಥಳ ಬದಲಾವಣೆ ಅಥವಾ ಉದ್ಯೋಗ ವರ್ಗಾವಣೆ ಸಾಧ್ಯತೆ ಇದೆ

Also Read:
ದೇವರ ದರ್ಶನ ಮಾಡುವ ಮುಂಚೆ ಈ ಕ್ರಮವನ್ನು ನೆನಪಿನಲ್ಲಿಡಿ, ಆಗಲೇ ದರ್ಶನದ ಫಲ ಪ್ರಾಪ್ತಿಯಾಗುವುದು

Follow us on

Click on your DTH Provider to Add TV9 Kannada