ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್: ಕೇವಲ 4 ಕಿ.ಮೀ ​ ಸಾಗಲು ಬರೋಬ್ಬರಿ 1 ಗಂಟೆ

Updated on: Jul 21, 2025 | 7:38 PM

ಬೆಂಗಳೂರಿನ ಟ್ರಾಫಿಕ್‌ ದೇಶದಾದ್ಯಂತ ಸುದ್ದಿಯಲ್ಲಿದೆ. ಎಐ ಆಧಾರಿತ ಸಿಗ್ನಲ್‌, ದಟ್ಟಣೆ ನಿಯಂತ್ರಣಕ್ಕೆ ಯೋಜನೆ ರೂಪಿಸಿದರು ಸಹ ನಗರಕ್ಕಿರುವ ಕುಖ್ಯಾತಿ ಮಾತ್ರ ಕಡಿಮೆಯಾಗಿಲ್ಲ. ವಾಹನ ಸಂಚಾರ ದಟ್ಟಣೆಗೆ ಏನೇ ಪ್ರಯೋಗಗಳು ಮಾಡಿದರೂ ಸಹ ಸಾಧ್ಯವಾಗುತ್ತಿಲ್ಲ. ಬದಲಿಗೆ ಕೆಲ ರಸ್ತೆಗಳಲ್ಲಿ ದಿನೇ ದಿನೇ ಟ್ರಾಫಿಕ್ ಜಾಮ್ ಹೆಚ್ಚುತ್ತಲೇ ಇದೆ. ಹೌದು.. ಸರ್ಜಾಪುರ ಜಂಕ್ಷನ್, ರಿಂಗ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಬೆಂಗಳೂರು, (ಜುಲೈ 21): ಬೆಂಗಳೂರಿನ ಟ್ರಾಫಿಕ್‌ ದೇಶದಾದ್ಯಂತ ಸುದ್ದಿಯಲ್ಲಿದೆ. ಎಐ ಆಧಾರಿತ ಸಿಗ್ನಲ್‌, ದಟ್ಟಣೆ ನಿಯಂತ್ರಣಕ್ಕೆ ಯೋಜನೆ ರೂಪಿಸಿದರು ಸಹ ನಗರಕ್ಕಿರುವ ಕುಖ್ಯಾತಿ ಮಾತ್ರ ಕಡಿಮೆಯಾಗಿಲ್ಲ. ವಾಹನ ಸಂಚಾರ ದಟ್ಟಣೆಗೆ ಏನೇ ಪ್ರಯೋಗಗಳು ಮಾಡಿದರೂ ಸಹ ಸಾಧ್ಯವಾಗುತ್ತಿಲ್ಲ. ಬದಲಿಗೆ ಕೆಲ ರಸ್ತೆಗಳಲ್ಲಿ ದಿನೇ ದಿನೇ ಟ್ರಾಫಿಕ್ ಜಾಮ್ ಹೆಚ್ಚುತ್ತಲೇ ಇದೆ. ಹೌದು.. ಸರ್ಜಾಪುರ ಜಂಕ್ಷನ್, ರಿಂಗ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿ.ಮೀಟರ್​ ಗಟ್ಟಲೇ ವಾಹನಗಳು ರಸ್ತೆಯಲ್ಲೇ ನಿಂತಲ್ಲೇ ನಿಂತಿದ್ದು, ಕೇವಲ 2 ರಿಂದ 3 ಕಿ.ಮೀ ಸಾಗಲು ಬರೋಬ್ಬರಿ 45 ರಿಂದ 60 ನಿಮಿಷವಾಗುತ್ತಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದು, ಈ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುವುದು ಯಾವಾಗ ಎಂದು ಪ್ರಯಾಣಿಕರು ಹಾಗೂ ವಾಹನ ಸವಾರರ ಪ್ರಶ್ನೆಯಾಗಿದೆ.