ವಿಡಿಯೋ ಇದೆ ಎಂದು ಆನಂದ ಗುರೂಜಿ ಕಾರು ಅಡ್ಡ ಗಟ್ಟಿ ಹಣಕ್ಕಾಗಿ ಬ್ಲ್ಯಾಕ್​ ಮೇಲ್​: ಕೇಸ್​ ಬುಕ್​

ಆನಂದ ಗುರೂಜಿ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದಿಸಿ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಹಾಗೂ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ. ವಿಡಿಯೋ, ಜಮೀನು ಖರೀದಿ ಪ್ರಕರಣ ಸಂಬಂಧ ಆನಂದ ಗುರೂಜಿ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ. ಆದರೂ ಸಹ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆನಂದ ಗುರೂಜಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಇದೆ ಎಂದು ಆನಂದ ಗುರೂಜಿ ಕಾರು ಅಡ್ಡ ಗಟ್ಟಿ ಹಣಕ್ಕಾಗಿ ಬ್ಲ್ಯಾಕ್​ ಮೇಲ್​: ಕೇಸ್​ ಬುಕ್​
ದಿವ್ಯಾ ವಸಂತ, ಆನಂದ ಗುರೂಜಿ
Edited By:

Updated on: May 15, 2025 | 3:09 PM

ಬೆಂಗಳೂರು, (ಮೇ 15): ಆನಂದ ಗುರೂಜಿಯ (Anand Guruji) ಕಾರು ಅಡ್ಡಿಗಟ್ಟಿ ಹಣಕ್ಕೆ ಬ್ಲ್ಯಾಕ್​ಮೇಲ್ (blackmail) ಹಾಗೂ ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಆನಂದ ಗುರೂಜಿ ಅವರು ಬೆಂಗಳೂರಿನ (Bengaluru) ಚಿಕ್ಕಜಾಲ ಠಾಣೆಗೆ ದೂರು ನೀಡಿದ್ದು, ಈ ದೂರಿನ ಸಂಬಂಧ ಪೊಲೀಸರು, ಕೃಷ್ಣಮೂರ್ತಿ(ಎ1) ಹಾಗೂ ದಿವ್ಯಾ ವಸಂತ (ಎ2) ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆನಂದ ಗುರೂಜಿ ವಿಡಿಯೋ ಹಾಗೂ ಜಮೀನು ಖರೀದಿ ಪ್ರಕರಣ ಸಂಬಂಧ ಕೋರ್ಟ್​ನಿಂದ ತಡೆಯಾಜ್ಞೆ ತರಲಾಗಿದೆ. ಆದರೂ ಸಹ ಈ ಪ್ರಕರಣ ಸಂಬಂಧ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್, ಜೀವಬೆದರಿಕೆ ಹಾಕಿದ್ದಾರೆ ಎಂದು ಆನಂದ ಗುರೂಜಿ ಆರೋಪಿಸಿದ್ದಾರೆ.

ವಿಡಿಯೋ ಇದೆ ಎಂದು ಪ್ರಖ್ಯಾತ ಆನಂದ್ ಗುರೂಜಿಗೆ ಪ್ರತಿನಿತ್ಯ ಹಣಕ್ಕಾಗಿ ಆರೋಪಿಗಳು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ. ಕೋರ್ಟ್​ನಿಂದ ತಡೆಯಾಜ್ಞೆ ತಂದರೂ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್, ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೇ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ವಿನಯ್ ಗುರೂಜಿ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಚಿಕ್ಕಜಾಲ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ರಫೇಲ್ ಯುದ್ಧ ವಿಮಾನ, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ರಾಯಚೂರಿನಲ್ಲಿ ವ್ಯಕ್ತಿಯ ಬಂಧನ

ಅಶ್ಲೀಲ ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ. ಹಲವಾರು ಯುಟ್ಯೂಬ್ ಚಾನೆಲ್ ಗಳ ಮೂಲಕ ಮಾನಹಾನಿ ಮಾಡಿದ್ದಾರೆ. ಮುಖವಾಡ, ಸಾಮ್ರಾಟ್ ಹೆಸರಿನ ಯೂಟ್ಯೂಬ್ ಚಾನೆಲ್ ಗಳಲ್ಲೂ ಚಾರಿತ್ರ್ಯ ತೇಜೋವಧೆ ಮಾಡಿದ್ದಾರೆ ಎಂದು ಆನಂದ ಗುರೂಜಿ ಆರೋಪಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಕೃಷ್ಣಮೂರ್ತಿ ಎ1 ಆರೋಪಿಯಾಗಿದ್ದರೆ, ದಿವ್ಯಾ ವಸಂತ ಎ2 ಆರೋಪಿಯಾಗಿದ್ದಾರೆ.

ಇದನ್ನೂ ಓದಿ
ಧರ್ಮ, ಜನಾಂಗದ ನಡುವೆ ದ್ವೇಷ ಹಬ್ಬಿಸುವ ಪೋಸ್ಟ್: ಯಾದಗಿರಿ ನಿವಾಸಿ  ಬಂಧನ
ಬೆಂಗಳೂರು: ಪಿಜಿಯಲ್ಲಿ ಪಾಕ್ ಪರ ಘೋಷಣೆ, ಛತ್ತೀಸ್​ಗಢ ಮೂಲದ ಟೆಕ್ಕಿ ಬಂಧನ
ಬೆಂಗಳೂರು: ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ ಎಂದ ಯುವಕನ ಬಂಧನ
'ಹಿಂದೂಸ್ಥಾನ್ ನಹಿ, ಮುಸ್ಲಿಂಸ್ಥಾನ ಬೋಲ್..' ಉಡುಪಿಯಲ್ಲಿ ದೇಶ ವಿರೋಧಿ ಬರಹ

ಕನ್ನಡದ ನಟಿಯೊಬ್ಬಳು ಮದುವೆಯಾಗಿ ಗರ್ಭಿಣಿಯಾದಾಗ… ”ಇದು ಇಡೀ ರಾಜ್ಯವೇ ಖುಷಿಪಡುವ ವಿಚಾರ” ಎಂದು ಹೇಳುವ ಮೂಲಕ ಭಾರೀ ಟ್ರೋಲ್ ಗೆ ಒಳಗಾಗಿದ್ದ ಟಿವಿ ನಿರೂಪಕಿಯಾಗಿದ್ದ ದಿವ್ಯಾ ವಸಂತ್ ವಿರುದ್ಧ ಈ ಹಿಂದೆ ಹನಿಟ್ರ್ಯಾಪ್​ ಪ್ರಕರಣದಲ್ಲಿ ಬಂಧನವಾಗಿದ್ದಳು. ಇಂದಿರಾ ನಗರದ ಬ್ಯೂಟಿ ಪಾರ್ಲರ್ ನಲ್ಲಿ ಸ್ಟಿಂಗ್​​ ಆಪರೇಷನ್​ ನಡೆಸಿ ಬಳಿಕ ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡಿದ್ದಳು, ಈ ಸಂಬಂಧ ಪಾರ್ಲರ್​ ಮಾಲೀಕರು ನೀಡಿದ್ದ ಹನಿಟ್ರ್ಯಾಪ್ ದೂರಿನ ಮೇರೆಗೆ ದಿವ್ಯಾ ವಸಂತಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ​​

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ