Liquor Price Hike: ಮದ್ಯಪ್ರಿಯರಿಗೆ 3ನೇ ಬಾರಿ ದರ ಏರಿಕೆ ಶಾಕ್: ಯಾವ ಎಣ್ಣೆ ಎಷ್ಟು ಹೆಚ್ಚಳ?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬುತ್ತಿದೆ. ಇದರ ಮಧ್ಯೆ ಈಗಾಗಲೇ ಎರಡು ಬಾರಿ ಐಎಂಎಲ್ ಗಳ ಮೇಲಿನ ದರವನ್ನು ಹೆಚ್ಚಳ ಮಾಡಿತ್ತು. ಇದೀಗ ಮೂರನೇ ಬಾರಿ ದರ ಹೆಚ್ಚಳ ಮಾಡಲು ಅಬಕಾರಿ ಇಲಾಖೆ ಮುಂದಾಗಿದ್ದು,ಇಂದಿನಿಂದಲೇ ಮದ್ಯದ ನೂತನ ದರ ಜಾರಿಯಾಗಿದೆ. ಇದಕ್ಕೆ ಮದ್ಯಪ್ರಿಯರು ಗರಂ ಆಗಿದ್ದಾರೆ. ಹಾಗಾದ್ರೆ, ಯಾವೆಲ್ಲಾ ಬ್ರಾಂಡ್ಗಳ ಮದ್ಯ ದರ ಹೆಚ್ಚಳವಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮೇ 15): ಕರ್ನಾಟಕದಲ್ಲಿ (Karnataka) ಮತ್ತೆ ಐಎಂಎಲ್ (ಮದ್ಯ) ಮೇಲಿನ ದರ ಏರಿಕೆ ಆಗಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಮದ್ಯದ(Liquor) ದರ ಹೆಚ್ಚಳ ಮಾಡಲಾಗಿತ್ತು, ಇದೀಗ ಮತ್ತೆ ಮೂರನೇ ಬಾರಿ ದರ ಹೆಚ್ಚಳವಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಕಾರಣ 2024-25 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಬರೋಬ್ಬರಿ 38600 ಕೋಟಿ ರುಪಾಯಿ ಟಾರ್ಗೆಟ್ ನೀಡಿತ್ತು. ಈ ಬಾರಿಯ ಬಜೆಟ್‌ನಲ್ಲಿ 40 ಸಾವಿರ ಕೋಟಿ ಟಾರ್ಗೆಟ್ ನೀಡಲಾಗಿದೆ ಅಂದರೆ ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರೂಪಾಯಿ ಟಾರ್ಗೆಟ್ ನೀಡಿದ್ದು, ಈ ಹೊಸ ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಮತ್ತೆ ದರ ಹೆಚ್ಚಳ ಮಾಡಲು ಮುಂದಾಗಿದೆ. ಇವತ್ತಿನಿಂದಲೇ ಎಲ್ಲಾ ರೀತಿಯ ಐಎಂಎಲ್ ಗಳ ಮೇಲೆ 10% ರಿಂದ 20 ರಷ್ಟು ಏರಿಕೆ ಆಗಿದೆ.
ಇನ್ನೂ ಈಗಾಗಲೇ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು,16 ಸ್ಲ್ಯಾಬ್ ಗಳಲ್ಲಿ 1 ರಿಂದ 4 ಸ್ಲ್ಯಾಬ್ ಗಳ ಮೇಲೆ ದರ ಏರಿಕೆ ಏರಿಕೆ ಮಾಡಿರುವ ಅಬಕಾರಿ ಇಲಾಖೆ. ಸ್ಯ್ಲಾಬ್-1, ಒಂದು ಕ್ವಾರ್ಟರ್ 65 ರೂಪಾಯಿ ಇದ್ದು ಅದರ ಮೇಲೆ 15 ರೂಪಾಯಿ ಏರಿಕೆ ಆಗಿದೆ. ಸ್ಲ್ಯಾಬ್- 2, 80 ರೂಪಾಯಿ ಇದ್ದು, ಅದರ ಮೇಲೆ 15 ರೂಪಾಯಿ ಏರಿಕೆ ಆಗಿದೆ. ಇನ್ನು ಸ್ಲ್ಯಾಬ್- 3, 120 ರೂಪಾಯಿ ಇದ್ದು, ಅದರ ಮೇಲೆ 10 ರಿಂದ 15 ರೂಪಾಯಿ ಏರಿಕೆ ಆಗಿದೆ. ಇನ್ನು ಸ್ಲ್ಯಾಬ್- 4, 130rಊ. ಇದ್ದು ಅದರ ಮೇಲೆ 10 ರಿಂದ 15 ರೂಪಾಯಿ ಏರಿಕೆಯಾಗಿದೆ.
ಇದನ್ನೂ ಓದಿ: ಇನ್ಮುಂದೆ ಮನೆ ಕಟ್ಟುವ ಮುಂಚೆ OC ಸರ್ಟಿಫಿಕೆಟ್ ಕಡ್ಡಾಯ: ಇಲ್ಲಾಂದ್ರೆ ವಿದ್ಯುತ್, ನೀರಿನ ಸಂಪರ್ಕವಿಲ್ಲ
ಒಂದು ಕ್ವಾರ್ಟರ್ ಮೇಲೆ 10 ರಿಂದ 25 ರೂಪಾಯಿ ದರ ಏರಿಕೆ ಆದರೆ ಒಂದು ಫುಲ್ ಬಾಟಲ್ ಮೇಲೆ 50 ರಿಂದ 100 ರೂಪಾಯಿ ವರೆಗೆ ಏರಿಕೆ ಆಗಿದೆ. ಇದು ಕೇವಲ ಎಂಆರ್ಪಿ ದರ ಮಾತ್ರ. ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಈ ದರದ ಮೇಲೆ 10 ರಿಂದ 15 ರೂಪಾಯಿವರೆಗೆ ಮತ್ತೆ ಹೆಚ್ಚುವರಿ ಕೊಡಬೇಕಾಗುತ್ತದೆ. ಈ ಬಗ್ಗೆ ಮದ್ಯ ಪ್ರಿಯರು ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿರೋ ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಮತ್ತೊಮ್ಮೆ ದರ ಹೆಚ್ಚಳ ಮಾಡಿದ್ದು, ಮದ್ಯಪ್ರಿಯರ ಕೆಂಗಣ್ಣಿಗೆ ಗುರಿಯಾಗಿದಂತೂ ಸುಳ್ಳಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 pm, Thu, 15 May 25







