ಮದ್ಯಪ್ರಿಯರಿಗೆ ಬಿಗ್ ಶಾಕ್: ಬಜೆಟ್​ಗೂ ಮೊದಲೇ ಮತ್ತೊಮ್ಮೆ ಬಿಯರ್ ದರ ಏರಿಕೆ..!

Beer Price Hike In Karnataka: ಕೆಲ ತಿಂಗಳ ಹಿಂದಷ್ಟೇ ಮದ್ಯದ ದರ ಏರಿಕೆ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಇದೀಗ ಮತ್ತೊಮ್ಮೆ ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟಿದ್ದಾರೆ. ಬಜೆಟ್‌ಗೆ ಮೊದಲೇ ಮದ್ಯದ ದರ ಏರಿಕೆಯಾಗಿದೆ. 10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆಯಾಗಿದ್ದು ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಸಾಧಾರಣವಾಗಿ ಬಜೆಟ್‌ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್‌ ಮಂಡನೆಯಾಗುವ ಮೊದಲೇ ದರ ಏರಿಕೆಯಾಗಿದೆ. ಯಾವ ಬ್ರಾಂಡ್‌ ಬೀಯರ್‌ ದರ ಎಷ್ಟು ಏರಿಕೆ? ಎನ್ನುವ ವಿವರ ಇಲ್ಲಿದೆ.

ಮದ್ಯಪ್ರಿಯರಿಗೆ ಬಿಗ್ ಶಾಕ್: ಬಜೆಟ್​ಗೂ ಮೊದಲೇ ಮತ್ತೊಮ್ಮೆ ಬಿಯರ್ ದರ ಏರಿಕೆ..!
Alcohol
Follow us
ರಮೇಶ್ ಬಿ. ಜವಳಗೇರಾ
|

Updated on:Jan 20, 2025 | 3:09 PM

ಬೆಂಗಳೂರು, (ಜನವರಿ 20): ಕರ್ನಾಟಕದಲ್ಲಿ ಬಿಯರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಹಾಗಂತ ಎಲ್ಲಾ ಬ್ರ್ಯಾಂಡ್‌ನ ಬಿಯರ್‌ಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. ಜನಸಾಮಾನ್ಯರ ಪಾಲಿಗೆ ಕೈಗೆಟುವ 300 ರೂ. ಒಳಗಡೆ ಇರುವ ಕೆಲವು ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಿದೆ. ಜನಪ್ರಿಯ ಬ್ರ್ಯಾಂಡ್‌ಗಳಾದ ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿದಂತೆ ಹಲವು ಬಿಯರ್‌ಗಳ ಬೆಲೆ 10 ರಿಂದ 45 ರೂ.ವರೆಗೆ ಏರಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಈ ಮೂಲಕ ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಬಿಯರ್‌ಗಳ ದರ ಏರಿಕೆ ಮಾಡಿದಂತಾಗಿದೆ.

6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಆಗಿತ್ತು. ಹೀಗಾಗಿ ಇದೀಗ ಸಿದ್ದರಾಮಯ್ಯ ಸರ್ಕಾರ ಬಿಯರ್ ಮೇಲಿನ ಸುಂಕ ಹೆಚ್ಚಳ ಮಾಡಿದೆ. ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ‌ ಹೆಚ್ಚಳ ಮಾಡಿದೆ. ಕಳೆದ ಒಂದೇ ವರ್ಷದಲ್ಲಿ ಕರ್ನಾಟಕದಲ್ಲಿ ಮೂರನೇ ಬಾರಿಗೆ ಬಿಯರ್‌ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಅಲ್ಲದೇ ಕಾಂಗ್ರೆಸ್​ ಸರ್ಕಾರ ಬಂದಾಗಿನಿಂದ ಒಟ್ಟು ಐದು ಬಾರಿ ಬಿಯರ್ ದರ ಏರಿಕೆ ಮಾಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬಿಯರ್ ಮಾರಾಟ ಭರ್ಜರಿ ಹೆಚ್ಚಳ: ಅಬಕಾರಿ ಇಲಾಖೆಗೆ ಹರಿದುಬಂತು ಆದಾಯ

ಯಾವ ಬ್ರಾಂಡ್‌ ಬೀಯರ್‌ ದರ ಎಷ್ಟು ಏರಿಕೆ?

ಇನ್ನು ಯಾವೆಲ್ಲಾ ಬಿಯರ್‌ಗಳಿಗೆ ಬೆಲೆ ಏರಿಕೆ ಮಾಡಲಾಗಿದೆ ಎನ್ನುವುದನ್ನು ನೋಡುವುದಾದರೆ, ಲಜೆಂಡ್‌ ಬಿಯರ್‌ ಮೊದಲು 100 ರೂಪಾಯಿಗೆ ಸಿಗುತ್ತಿತ್ತು. ಇದರಲ್ಲಿ 45 ರೂಪಾಯಿ ಏರಿಕೆಯಾಗಿದೆ. ಇನ್ನು ಪವರ್‌ಕೂಲ್‌ ಹೆಸರಿನ ಬಿಯರ್‌ಗೆ ಈ ಹಿಂದೆ 130 ರೂಪಾಯಿ ಬೆಲೆ ಇತ್ತು. ಇಂದಿನಿಂದ 155 ರೂಪಾಯಿಗೆ ಹೆಚ್ಚಳವಾಗಿದೆ.

ಬ್ಲ್ಯಾಕ್‌ ಫೋರ್ಟ್‌ ಹೆಸರಿನ ಬಿಯರ್‌ಗೆ 15 ರೂಪಾಯಿ ದರ ಏರಿಕೆ ಮಾಡಲಾಗಿದೆ. ಇದರೊಂದಿಗೆ ಬ್ಲ್ಯಾಕ್‌ ಫೋರ್ಟ್‌ ಬಿಯರ್ ಇಂದಿನಿಂದ ಬಾಟಲ್‌ಗೆ 160 ರೂಪಾಯಿ ಆಗಿದೆ. ಹಂಟರ್‌ ಬಿಯರ್‌ನ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 190 ರೂಪಾಯಿ ಆಗಿದೆ. ಅದರೊಂದಿಗೆ ವುಡ್‌ಪೀಕರ್‌ ಕ್ರೆಸ್ಟ್‌ ಹಾಗೂ ವುಡ್‌ಪೀಕರ್‌ ಗ್ಲೈಡ್‌ ಬಿಯರ್‌ ಬೆಲೆಯಲ್ಲಿ ತಲಾ 10 ರೂಪಾಯಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಿಯರ್‌ಗಳು ಕ್ರಮವಾಗಿ 250 ಹಾಗೂ 240 ರೂಪಾಯಿಗೆ ಇಂದಿನಿಂದ ಮಾರಾಟವಾಗುತ್ತಿದೆ.

ಬಿಯರ್​ ದರ ಏರಿಕೆಗೆ ಬಾರ್ ಮಾಲೀಕರು, ಮದ್ಯಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಾರ್ ಮ್ಯಾನೇಜರ್ ಪ್ರತಿಕ್ರಿಯಿಸಿದ್ದು, ಬಿಯರ್ ದರ ಹೆಚ್ಚಳದಿಂದ ಗ್ರಾಹಕರು ನಮ್ಮ ಜೊತೆ ಜಗಳವಾಡ್ತಾರೆ. ದರ ಹೆಚ್ಚಳ ನಾವು ಮಾಡಿದ್ದೀವಿ eMdu ಗ್ರಾಹಕರು ಜಗಳ ಮಾಡ್ತಾರೆ. ಈ ಸರ್ಕಾರ ಬಂದಮೇಲೆ 5ನೇ ಬಾರಿ ಬಿಯರ್ ದರ ಏರಿಕೆ ಮಾಡಿದೆ ಎಂದು ಅಸಮಾದಾನ ಹೊರಹಾಕಿದರು.

ಬಿಯರ್​ ದರ ಏರಿಕೆ ಮಾಡಿರೋದು ಸರಿಯಲ್ಲ. ನಮ್ಮಿಂದ ತಗೊಂಡು ಮಹಿಳೆಯರಿಗೆ ಕೊಡುತ್ತಿರುವುದು ಸರಿಯಲ್ಲ. ಕೂಡಲೇ ಬಿಯರ್ ದರ‌ ಇಳಿಸಬೇಕೆಂದು ಮದ್ಯಪ್ರಿಯರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದು, ನಾವೂ ವೋಟ್​ ಹಾಕಿದ್ದೀವಿ, ನಮಗೂ ಬಸ್​​ನಲ್ಲಿ ಉಚಿತ ಪ್ರಯಾಣ ಕಲ್ಪಿಸಿ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರಕ್ಕೆ ಮದ್ಯಪ್ರಿಯರ ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:02 pm, Mon, 20 January 25

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ