ಕರ್ನಾಟಕದಲ್ಲಿ ಬಿಯರ್ ಮಾರಾಟ ಭರ್ಜರಿ ಹೆಚ್ಚಳ: ಅಬಕಾರಿ ಇಲಾಖೆಗೆ ಹರಿದುಬಂತು ಆದಾಯ

ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತೀಯ ನಿರ್ಮಿತ ಮದ್ಯದ ಮಾರಾಟದಲ್ಲಿ ಕುಸಿತ ಕಂಡುಬಂದಿದ್ದರೂ ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂಬುದು ಕರ್ನಾಟಕ ಅಬಕಾರಿ ಇಲಾಖೆ ಅಂಕಿಅಂಶಗಳಿಂದ ತಿಳಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ಎಷ್ಟು ಬಿಯರ್ ಮಾರಾಟವಾಗಿದೆ? ಎಷ್ಟು ಆದಾಯ ಸಂಗ್ರಹವಾಗಿದೆ? ವಿವರ ಇಲ್ಲಿದೆ

ಕರ್ನಾಟಕದಲ್ಲಿ ಬಿಯರ್ ಮಾರಾಟ ಭರ್ಜರಿ ಹೆಚ್ಚಳ: ಅಬಕಾರಿ ಇಲಾಖೆಗೆ ಹರಿದುಬಂತು ಆದಾಯ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Oct 10, 2024 | 11:03 AM

ಬೆಂಗಳೂರು, ಅಕ್ಟೋಬರ್ 10: ವಾತಾವರಣ, ಸಾಲು ರಜೆಗಳು ಇತ್ಯಾದಿ ಹಲವು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024-25ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಮದ್ಯ ಮಾರಾಟದಲ್ಲಿ ಶೇ 5.55 ರಷ್ಟು ಏರಿಕೆಯಾಗಿದೆ. ಅಬಕಾರಿ ಇಲಾಖೆ ದಾಖಲೆಗಳ ಪ್ರಕಾರ, ಏಪ್ರಿಲ್​ನಿಂದ ಸೆಪ್ಟೆಂಬರ್ ವರೆಗೆ 921.90 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

ಬಿಯರ್ ಮಾರಾಟದಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಮತ್ತು ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಬಿಯರ್ ಮಾರಾಟದಲ್ಲಿ ಶೇ 14.90 ಏರಿಕೆ ಮತ್ತು ಐಎಂಎಲ್ ಮಾರಾಟದಲ್ಲಿ ಶೇ 2 ಇಳಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ, ಬಿಯರ್ ಮಾರಾಟವು ಶೇ 15 ರಷ್ಟು ಬೆಳವಣಿಗೆಯನ್ನು ತೋರಿಸಿದೆ. ಇದು ಹವಾಮಾನ, ವೆಚ್ಚ, ರಜಾದಿನಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಅನೇಕ ಅಂಶಗಳಿಂದಾಗಿ ಆಗಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್​ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಎರಡು ತಿಂಗಳ ಹಿಂದೆ ಪ್ರೀಮಿಯಂ ಮತ್ತು ಸೆಮಿ ಪ್ರೀಮಿಯಂ ಬ್ರಾಂಡ್‌ಗಳ ಮೇಲಿನ ಬೆಲೆ ಏರಿಕೆ, ಕಡಿಮೆ ಉತ್ಪಾದನೆ ಮತ್ತು ಸ್ಟಾಕ್‌ಗಳಿಂದಾಗಿ ಐಎಂಎಲ್ ಮಾರಾಟದಲ್ಲಿ ಕುಸಿತವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳ ಪ್ರಕಾರ, 2023-24ರಲ್ಲಿ ಏಪ್ರಿಲ್-ಸೆಪ್ಟೆಂಬರ್ ವರೆಗೆ 352.82 ಲಕ್ಷ ಪೆಟ್ಟಿಗೆಗಳಷ್ಟು ಐಎಂಎಲ್ ಮಾರಾಟವಾಗಿತ್ತು. 2024-25ರ ಅದೇ ಅವಧಿಯಲ್ಲಿ 345.76 ಲಕ್ಷ ಪೆಟ್ಟಿಗೆಗಳಷ್ಟು ಮಾರಾಟವಾಗಿವೆ. ಅದೇ ರೀತಿ, 2023-24ರಲ್ಲಿ ಏಪ್ರಿಲ್-ಸೆಪ್ಟೆಂಬರ್ ವರೆಗೆ 211.25 ಲಕ್ಷ ಸಿಬಿ ಬಿಯರ್ ಮಾರಾಟವಾಗಿದ್ದರೆ, 2024-25ರಲ್ಲಿ ಅದೇ ಅವಧಿಯಲ್ಲಿ 242.73 ಲಕ್ಷ ಸಿಬಿ ಮಾರಾಟವಾಗಿವೆ.

ಮದ್ಯ ಮಾರಾಟದಿಂದ ಆದಾಯ ಸಂಗ್ರಹ ಹೆಚ್ಚಳ

2023 ರ ಏಪ್ರಿಲ್-ಸೆಪ್ಟೆಂಬರ್ ವರೆಗೆ ಮದ್ಯ ಮಾರಾಟದಿಂದ 16,611.11 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ, ಈ ವರ್ಷದ ಅದೇ ಅವಧಿಯಲ್ಲಿ 17,533.01 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಆದಾಯದಲ್ಲಿ 921.90 ಕೋಟಿ ರೂ. ಅಥವಾ ಶೇ 5.55 ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಕ್ಲೌಡ್ ಕಿಚನ್​ಗಳು: ಇಲ್ಲಿ ಸಿದ್ಧವಾಗುವ ಆಹಾರ ಎಷ್ಟು ಸುರಕ್ಷಿತ?

ಕಳೆದ ಆರ್ಥಿಕ ವರ್ಷದಲ್ಲಿ ಶೇ 48.15ರಷ್ಟು ಮಾರಾಟ ಗುರಿ ಸಾಧಿಸಲಾಗಿದ್ದು, ಈ ವರ್ಷ ಶೇ 45.51ರಷ್ಟು ಗುರಿ ಸಾಧಿಸಲಾಗಿದೆ. 2024 ರ ಏಪ್ರಿಲ್​​ನಲ್ಲಿ ಸಂಚಿತ ಬೆಳವಣಿಗೆಯು ಶೇ 28.84 ಆಗಿದೆ. 2023 ರ ಏಪ್ರಿಲ್​ಗೆ ಹೋಲಿಸಿದರೆ ವ್ಯತ್ಯಾಸವು ಶೇ 11.13 ಆಗಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ
ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ
ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ
ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ
Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ಜನರ ಮೇಲೆ ಹರಿದ ಕಾರು
Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ಜನರ ಮೇಲೆ ಹರಿದ ಕಾರು
ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ
ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ
Daily horoscope: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
Daily horoscope: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ