ಮದ್ಯ ಪ್ರಿಯರಿಗೆ ಗುಡ್, ಬ್ಯಾಡ್ ನ್ಯೂಸ್: ಇಳಿಕೆಯಾಗಲಿದೆ ಪ್ರೀಮಿಯಂ ಸ್ಕಾಚ್ ದರ, ದುಬಾರಿಯಾಗಲಿದೆ ಬಡವರ ಮದ್ಯ

ಕರ್ನಾಟಕ ಸರ್ಕಾರದ ಬೊಕ್ಕಸ ತುಂಬಿಸುವ ಅತಿದೊಡ್ಡ ಇಲಾಖೆಯಾಗಿರುವ ಅಬಕಾರಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಾಲ್ಕೈದು ಬಾರಿ ಮದ್ಯದ ದರ ಪರಿಷ್ಕರಣೆ ಮಾಡಿ ಜನರ ಜೇಬಿಗೆ, ಹೊಟ್ಟೆಗೆ ಬಿಸಿ ಮುಟ್ಟಿಸಿದೆ. ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹಕ್ಕೆ ಮದ್ಯದ ದರ ಹೆಚ್ಚಳ ಪದೇಪದೆ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಆದರೆ ಈ ಬಾರಿ ಮಾತ್ರ ಅಬಕಾರಿ ಇಲಾಖೆ ಕ್ಲಾಸ್ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ನೀಡಿ ಬಡವರ್ಗದ ಮದ್ಯಪ್ರಿಯರಿಗೆ ಮತ್ತೆ ಬ್ಯಾಡ್ ನ್ಯೂಸ್ ನೀಡಲು ಮುಂದಾಗುತ್ತಿದೆ.

ಮದ್ಯ ಪ್ರಿಯರಿಗೆ ಗುಡ್, ಬ್ಯಾಡ್ ನ್ಯೂಸ್: ಇಳಿಕೆಯಾಗಲಿದೆ ಪ್ರೀಮಿಯಂ ಸ್ಕಾಚ್ ದರ, ದುಬಾರಿಯಾಗಲಿದೆ ಬಡವರ ಮದ್ಯ
ಇಳಿಕೆಯಾಗಲಿದೆ ಪ್ರೀಮಿಯಂ ಸ್ಕಾಚ್ ದರ, ದುಬಾರಿಯಾಗಲಿದೆ ಬಡವರ ಮದ್ಯ
Follow us
Kiran Surya
| Updated By: Ganapathi Sharma

Updated on:Aug 06, 2024 | 12:26 PM

ಬೆಂಗಳೂರು, ಆಗಸ್ಟ್ 6: ಸದ್ಯದಲ್ಲೇ ರಾಜ್ಯದ ಮದ್ಯ ಪ್ರಿಯರಿಗೆ ಶುಭ ಸದ್ದಿ ಮತ್ತು ಕಹಿ ಸುದ್ದಿ ಎರಡೂ ಸಿಗಲಿವೆ. ಹೈಫೈ ಮದ್ಯಪ್ರಿಯರಿಗೆ ಗುಡ್ ನ್ಯೂಸ್, ಸಾಮಾನ್ಯ ಮದ್ಯಗಳ ಪ್ರಿಯರಿಗೆ ಬ್ಯಾಡ್ ನ್ಯೂಸ್ ನೀಡಲಿದೆ ಅಬಕಾರಿ ಇಲಾಖೆ. ಸ್ಕಾಚ್​​​ಗಳ ಬೆಲೆಯಲ್ಲಿ ಭಾರಿ ಇಳಿಕೆ‌ ಮಾಡಲು ರಾಜ್ಯ ಅಬಕಾರಿ ಇಲಾಖೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಆಗಸ್ಟ್ ಒಂದರಿಂದಲೇ ಪ್ರೀಮಿಯಂ ಮದ್ಯದ ದರವನ್ನು ಕಡಿಮೆ ಮತ್ತು ಮಧ್ಯಮ ವರ್ಗದವರು ಕುಡಿಯುವ ಮದ್ಯದ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಇನ್ನೂ ಅಧಿಕೃತ ಆದೇಶ ಆಗಿಲ್ಲ. ಈ ವಾರ ಅಥವಾ ಮುಂದಿನ ವಾರದಲ್ಲಿ ಹೊಸ ದರ ಏರಿಕೆ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾರಣಕ್ಕಾಗಿಯೇ ಮದ್ಯ ಮಾರಾಟಗಾರರು ದುಬಾರಿ ಬೆಲೆಯ ಮದ್ಯವನ್ನು ಖರೀದಿ ಮಾಡುತ್ತಿಲ್ಲ. ಒಂದು ವೇಳೆ ಸರ್ಕಾರ ಸ್ಕಾಚ್​​ಗಳ ಬೆಲೆಯನ್ನು ಏಕಾಏಕಿ ಕಡಿಮೆ ಮಾಡಿದರೆ ಮಾಲೀಕರಿಗೆ ನಷ್ಟ ಆಗಲಿದೆ ಎಂದು ಯಾರೂ ಖರೀದಿಸಲು ಮುಂದಾಗುತ್ತಿಲ್ಲ ಎಂದು ಬಾರ್ ಮಾಲೀಕ ರಾಮಕೃಷ್ಣ ಎಂಬವರು ತಿಳಿಸಿದ್ದಾರೆ.

ಎಷ್ಟು ಇಳಿಕೆಯಾಗಲಿದೆ ಪ್ರೀಮಿಯಂ ಸ್ಕಾಚ್ ದರ?

2500 ರಿಂದ 3000 ರೂ. ದರ ಇರುವ ಫುಲ್ ಬಾಟಲ್ ಸ್ಕಾಚ್ ದರ 1500 ರಿಂದ 1800 ರೂಪಾಯಿ ವರೆಗೆ ಇಳಿಕೆಯಾಗಲಿದೆ. ಬೇರೆ ಬೇರೆ ರಾಜ್ಯದಲ್ಲಿ ಪ್ರೀಮಿಯಂ ಸ್ಕಾಚ್ ಫುಲ್ ಬಾಟಲ್ ಗೆ 1000 ರೂ.ನಿಂದ 1500 ರೂಪಾಯಿ ವರೆಗೆ ಇದೆ. ಆದರೆ ನಮ್ಮ ರಾಜ್ಯದಲ್ಲಿ ದರ ದುಪ್ಪಟ್ಟು ಇರುವ ಕಾರಣ, ಸ್ಕಾಚ್​​ಗಳ ಮಾರಾಟ ಕಡಿಮೆ ಆಗುತ್ತಿದೆ. ಇದರಿಂದ ಶ್ರೀಮಂತ ಮದ್ಯಪ್ರಿಯರು ಅಕ್ಕಪಕ್ಕದ ರಾಜ್ಯಗಳ ಮಿಲ್ಟ್ರಿ ಕ್ಯಾಂಟೀನ್​​​ಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಪ್ರಿಮಿಯಮ್ ಮದ್ಯದ ದರವನ್ನು ಶೇ 40 ರಿಂದ 50 ರಷ್ಟು ಇಳಿಕೆ ಮಾಡಲು ಮುಂದಾಗಿದೆ.

ಬೆಲೆ ಇಳಿಕೆಯಿಂದ ಒಂದು ಕ್ವಾರ್ಟರ್ ಸ್ಕಾಚ್ ಬೆಲೆ 300 ರಿಂದ 350ಕ್ಕೆ ಇಳಿಕೆಯಾಗಲಿದೆ. ಆಗ ನಾರ್ಮಲ್ ಮದ್ಯ ಕುಡಿಯುವ ಮದ್ಯ ಪ್ರಿಯರು ಸ್ಕಾಚ್ ಕುಡಿಯಲು ‌ಮುಂದಾಗುತ್ತಾರೆ. ಇದರಿಂದ ಅಬಕಾರಿ ಇಲಾಖೆಯ ಬೊಕ್ಕಸ ತುಂಬುತ್ತದೆ.

ಎಷ್ಟು ದುಬಾರಿಯಾಗಲಿದೆ ಬಡವರ ಮದ್ಯ?

ಬಡ ಮದ್ಯಪ್ರಿಯರು ಅಂದರೆ 100 ರಿಂದ 120 ರೂಪಾಯಿ ಬೆಲೆ ಇರುವ ಮದ್ಯದ ದರವನ್ನು ಕ್ವಾರ್ಟರ್ ಗೆ 20 ರಿಂದ 30 ರೂಪಾಯಿ, ಫುಲ್ ಬಾಟಲ್ ಮೇಲೆ 100 ರಿಂದ 150 ರೂಪಾಯಿ ವರೆಗೆ ಏರಿಕೆ ಆಗಲಿದೆ. ಇದಕ್ಕೆ ಸಾಮಾನ್ಯ ಮದ್ಯ ಕುಡಿಯುವ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಮದ್ಯದ ದರವನ್ನು ಹೆಚ್ಚಳ ಮಾಡಲಾಗಿದೆ. ಈಗ ಮತ್ತೆ ದರ ಏರಿಕೆ ಮಾಡಿದರೆ ಹೇಗೆ ಎಂದು ಮದ್ಯಪ್ರಿಯ ರಘು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್, ಬಿಯರ್​ ಬೆಲೆ ಮತ್ತೊಮ್ಮೆ ಏರಿಕೆ

ಒಟ್ಟಿನಲ್ಲಿ ಸರ್ಕಾರ ಏನೋ ಹೈಫೈ ಮದ್ಯಪ್ರಿಯರು ಕುಡಿಯುವ ದರವನ್ನು ಶೇ 40 ರಿಂದ 50 ರಷ್ಟು ಇಳಿಕೆ ಮಾಡಿ ಸಿಹಿ ಸುದ್ದಿ ನೀಡಿದರೆ ಬಡ ವರ್ಗದ ಮದ್ಯಪ್ರಿಯರಿಗೆ ದರ ಏರಿಕೆ ಮಾಡಿ ಶಾಕ್ ನೀಡಲು ಮುಂದಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಕ್ಕೆ ಸರ್ಕಾರ ಮದ್ಯದ ದರ ಏರಿಕೆ ಮಾಡುತ್ತಿದೆ ಎಂದು ಈ ಹಿಂದೆ ಮದ್ಯ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಪಕ್ಷಗಳು ಕೂಡ ಈ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಒಂದು ಕಡೆಯಿಂದ ಉಚಿತ ಕೊಟ್ಟು ಮತ್ತೊಂದು ಕಡೆ ಬಡವರ ಜೇಬಿಗೆ ಸರ್ಕಾರ ಕನ್ನಹಾಕುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. ಬಡವರ ಮದ್ಯದ ದರವನ್ನೇ ಹೆಚ್ಚಳ ಮಾಡುವುದಕ್ಕೂ ಆಕ್ಷೇಪ ವ್ಯಕ್ತವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 am, Tue, 6 August 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ