ಆನೇಕಲ್: ಈಚರ್ ವಾಹನ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಸರ್ಜಾಪುರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಮನಹಳ್ಳಿಯಲ್ಲಿ ನಡೆದಿದೆ. ಒಂದುವರೆ ವರ್ಷದ ಮನಿಶಾ ದೇವಿ ಮೃತ ಕಂದಮ್ಮ. ಮಗುವಿನ ತಂದೆ ಬಾಲಕೃಷ್ಣ ವಾಹನ ರಿವರ್ಸ್ ತೆಗೆದುಕೊಳ್ಳಲು ಹೋದಾಗ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮನಿಶಾದೇವಿ ಸಾವನ್ನಪ್ಪಿದ್ದಾರೆ. ಸರ್ಜಾಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕ್ರೀಡಾಕೂಟದಲ್ಲಿ ಗೆದ್ದವರ ಸಂಭ್ರಮಾಚರಣೆ ವೇಳೆ ಕಲ್ಲು ತೂರಾಟ
ಬಾಗಲಕೋಟೆ: ಕ್ರೀಡಾಕೂಟದಲ್ಲಿ ಗೆದ್ದವರ ಸಂಭ್ರಮಾಚರಣೆ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ರಡ್ಡೇರ ತಿಮ್ಮಾಪುರದ ಆತ್ಮಾನಂದ ಪ್ರೌಢಶಾಲೆ ಆವರಣದಲ್ಲಿ ನಡೆದಿದೆ. ಕಲ್ಲು ತೂರಾಟದಲ್ಲಿ ಸಿದ್ದಪ್ಪ ಬೀರನೂರ, ರವಿ ನಾಯ್ಕರ್ಗೆ ಗಾಯಗಳಾಗಿವೆ. ಕ್ಲಸ್ಟರ್ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಗೆದ್ದ ತಂಡದ ಬೆಂಬಲಿಗರಿಂದ ಸಿಳ್ಳೆ, ಕೇಕೆ ಹಾಕಿ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ ಚಿಂಚಲಕಟ್ಟಿ ನೀರಲಕೇರಿ ಗ್ರಾಮದ ಪ್ರೌಢಶಾಲಾ ತಂಡಗಳ ಗಲಾಟೆ ತೆಗೆದಿದ್ದಾರೆ.
ಈ ವೇಳೆ ಉಭಯ ಗುಂಪುಗಳ ನಡುವೆ ಕಲ್ಲು ತೂರಾಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಾದಾಮಿ ಸಿಪಿಐ ಕರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Published On - 6:28 pm, Fri, 22 July 22