ಆನೇಕಲ್: ಕೊರೊನಾ ಮಹಾಮಾರಿಯ ದಾರುಣಗಳಯ ಇನ್ನೂ ನಿಲ್ಲುತ್ತಿಲ್ಲ. ಅಪ್ಪ-ಅಮ್ಮ ಜೊತೆಗೆ ಇಬ್ಬರು ಹೆಣ್ಣು ಮಕ್ಕಳ ಪುಟ್ಟ ಸಂಸಾರ ಅದು. ಆದರೆ ಕೊರೊನಾದಿಂದ ಅಮ್ಮ ಮೃತಪಟ್ಟ ಬಳಿಕ, ಮಾನಸಿಕ ಕ್ಷೋಭೆಗೊಳಗಾದ ಕುಟುಂಬದ ಅಷ್ಟೂ ಮಂದಿ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಒಂದೇ ಕುಟುಂಬದ ಮೂವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪ್ಪ ಮತ್ತು ಇಬ್ಬರು ಹೆಣ್ಣು ಮಕ್ಕಳು ನೇಣಿಗೆ ಶರಣಾಗಿದ್ದಾರೆ. ನಾಗರಾಜ್(45), ಕೀರ್ತಿ(18) ಮತ್ತು ಮೋನಿಶಾ(14) ಆತ್ಮಹತ್ಯೆ ಮಾಡಿಕೊಂಡವರು.
ತಿಂಗಳ ಹಿಂದೆ ನಾಗರಾಜ್ ಅವರ ಪತ್ನಿ ಕೊರೊನಾದಿಂದ ಸಾವಿಗೀಡಾಗಿದ್ದರು. ಪತ್ನಿಯನ್ನು ಕಳೆದುಕೊಂಡ ಪತಿ ಮತ್ತು ಇಬ್ಬರು ಮಕ್ಕಳು ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರ 6 ವಾರದಲ್ಲಿ ಮಾರ್ಗಸೂಚಿ ರೂಪಿಸಿ, ಪರಿಹಾರದ ಮೊತ್ತ ನಿರ್ಧರಿಸಬೇಕು – ಸುಪ್ರೀಂಕೋರ್ಟ್
(Anekal attibele father and 2 daughters commit suicide after mother died due to coronavirus month ago)
Published On - 3:35 pm, Wed, 30 June 21