Namma Metro timings: ನಮ್ಮ ಮೆಟ್ರೋ ಗುರುವಾರದಿಂದ ಸಂಚಾರ ಸಮಯ ಹೆಚ್ಚಳ; ಟೋಕನ್ ವ್ಯವಸ್ಥೆ ಇರುತ್ತದಾ?
BMRCL Namma Metro timings: ಇದೇ ವೇಳೆ ನಾಳೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರು ಟೋಕನ್ ಬಳಸಿ ಪ್ರಯಾಣ ಮಾಡಬಹುದು. ನಾಳೆಯಿಂದ ನಮ್ಮ ಮೆಟ್ರೋದ ಎಲ್ಲ ಸ್ಟೇಷನ್ ಗಳಲ್ಲಿ ಟೋಕನ್ ನೀಡಲಾಗುತ್ತದೆ ಎಂದು ಬಿಎಂಆರ್ಸಿಎಲ್ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ನಾಳೆ ಗುರುವಾರದಿಂದ (ಜುಲೈ 1) ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ ವ್ಯವಸ್ಥೆ ಇರುತ್ತದೆ. ಈ ಹಿಂದೆ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರ ಇತ್ತು. ಆದರೆ ಇದು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಇರುತ್ತದೆ. ಕೊರೊನಾ ಕಾಟದಿಂದಾಗಿ ವೀಕೆಂಡ್ ಕರ್ಫ್ಯೂ ಇನ್ನೂ ಜಾರಿಯಲ್ಲಿರುವುದರಿಂದ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ನಮ್ಮ ಮೆಟ್ರೋ ಸಂಚಾರ ಇರುವುದಿಲ್ಲ.
ಇದೇ ವೇಳೆ ನಾಳೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರು ಟೋಕನ್ ಬಳಸಿ ಪ್ರಯಾಣ ಮಾಡಬಹುದು. ನಾಳೆಯಿಂದ ನಮ್ಮ ಮೆಟ್ರೋದ ಎಲ್ಲ ಸ್ಟೇಷನ್ ಗಳಲ್ಲಿ ಟೋಕನ್ ನೀಡಲಾಗುತ್ತದೆ ಎಂದು ಬಿಎಂಆರ್ಸಿಎಲ್ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.
In view of curfew , Namma metro Operational timings is revised . May kindly see the enclosed press release. pic.twitter.com/WKNy3RZ7do
— ನಮ್ಮ ಮೆಟ್ರೋ (@cpronammametro) April 23, 2021
Namma Metro: ಕೋವಿಡ್ ವೀಕೆಂಡ್ ಕರ್ಫ್ಯೂ; ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತ
(namma metro daily timings extended token to be issued at stations says bmrcl)
Published On - 3:14 pm, Wed, 30 June 21