Namma Metro: ಕೋವಿಡ್​ ವೀಕೆಂಡ್‌ ಕರ್ಫ್ಯೂ; ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತ

TV9 Digital Desk

| Edited By: ಸಾಧು ಶ್ರೀನಾಥ್​

Updated on:Jun 25, 2021 | 4:26 PM

Covid Curfew: ವೀಕೆಂಡ್ ಲಾಕ್ ನಿಂದಾಗಿ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಇಂದು ಸಂಜೆ 6 ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಮೆಟ್ರೋ ಸಂಚಾರವಿಲ್ಲ ಎಂದು ಟಿವಿ9ಗೆ BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Namma Metro: ಕೋವಿಡ್​ ವೀಕೆಂಡ್‌ ಕರ್ಫ್ಯೂ; ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತ
ಕೋವಿಡ್​ ವೀಕೆಂಡ್‌ ಕರ್ಫ್ಯೂ; ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತ

ಬೆಂಗಳೂರು:  ಬೆಂಗಳೂರಿನಲ್ಲಿ ಇಂದಿನಿಂದ ಕೋವಿಡ್ ವೀಕೆಂಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಇಂದು ಸಂಜೆ 6 ಗಂಟೆಯಿಂದಲೇ ಸ್ಥಗಿತವಾಗಲಿದೆ. ವೀಕೆಂಡ್ ಲಾಕ್ ನಿಂದಾಗಿ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಇಂದು ಸಂಜೆ 6 ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಮೆಟ್ರೋ ಸಂಚಾರವಿಲ್ಲ ಎಂದು ಟಿವಿ9ಗೆ BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.    

ವೀಕೆಂಡ್ ಲಾಕ್ ನಿಂದಾಗಿ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಇಂದು ಸಂಜೆ 6 ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಮೆಟ್ರೋ ಸಂಚಾರವಿರುವುದಿಲ್ಲ. ಇನ್ನು ಇದು ಈ ವಾರಾಂತ್ಯಕ್ಕೆ ಮಾತ್ರ ಅನ್ವಯವಾಗುತ್ತದೆ. ಏಕೆಂದರೆ ಮುಂದಿನ ವಾರಾಂತ್ಯದ ವೇಳೆಗೆ ಆಗಸ್ಟ್​ 2 ರಿಂದ ರಾಜ್ಯದಲ್ಲಿ ಲಾಕ್‌ಡೌನ್‌ ಇರುವುದಿಲ್ಲ. ಮುಂದಿನ ತಿಂಗಳು ಆಗಸ್ಟ್​ ಎರಡರಿಂದಲೇ ಲಾಕ್‌ಡೌನ್‌ ತೆರವುಗೊಳಿಸಿ, ರಾಜ್ಯ ಸರ್ಕಾರ ಅನ್​ಲಾಕ್​ 3ರ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಅನ್​ಲಾಕ್​ ಆದಮೇಲೆ ನಮ್ಮ ಮೆಟ್ರೋ ಇದೇ ಜೂನ್ 21ರ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು, ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಿದೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಪ್ರತಿ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸಂಚರಿಸುತ್ತಿದೆ.

ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ಮಾತ್ರ ಸಂಚಾರಿಸಲು ಅವಕಾಶವಿದ್ದು, ನಿಲ್ದಾಣಗಳಲ್ಲೂ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಲು ಅವಕಾಶ ನೀಡಲಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರು ಕೊವಿಡ್ ನಿಯಮಾವಳಿ ಪಾಲಿಸಬೇಕು. ಉಷ್ಣಾಂಶ ಚೆಕ್ ಮಾಡಿಕೊಂಡು, ಹ್ಯಾಂಡ್ ಸ್ಯಾನಿಟೈಜರ್ ಬಳಸಿ ನಿಲ್ದಾಣಕ್ಕೆ ಆಗಮಿಸಬೇಕು. ಮತ್ತು ಪ್ರಯಾಣಿಕರು ಫೇಸ್ ಮಾಸ್ಕ್ ಧರಿಸಿದರೆ ಮಾತ್ರ ನಿಲ್ದಾಣದೊಳಗೆ ಆಗಮಿಸಲು ಅವಕಾಶವಿದೆ. ರೈಲಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ.

ಅನ್‌ಲಾಕ್‌ 3ರ ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಇಂತಿದೆ.. ಆಗಸ್ಟ್ 31ರವರೆಗೆ ಯಾವುದೇ ಶಾಲಾ-ಕಾಲೇಜುಗಳನ್ನು ತೆರೆಯುವಂತಿಲ್ಲ. ಆಗಸ್ಟ್‌ 5ರಿಂದ ಜಿಮ್, ಯೋಗ ಸೆಂಟರ್ ಓಪನ್‌ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

ಆದ್ರೆ ಈಜುಕೊಳ, ಥಿಯೇಟರ್, ಮೆಟ್ರೋ ಮೇಲಿನ ನಿರ್ಭಂಧ ಮುಂದುವರಿಯಲಿದೆ. ಬಾರ್​ಗಳನ್ನೂ ಕೂಡಾ ಸದ್ಯಕ್ಕೆ ತೆರೆಯುವಂತಿಲ್ಲ ಎಂದು ಸೂಚಿಸಿದೆ. ಜೊತೆಗೆ ಕ್ರೀಡಾ ಚಟುವಟಿಕೆ, ಮನರಂಜನಾ ಪಾರ್ಕ್, ಅಸೆಂಬ್ಲಿ ಹಾಲ್​ಗಳನ್ನು ಕೂಡಾ ತೆರೆಯುವಂತಿಲ್ಲ. ಹಾಗೇನೆ ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆದ್ರೆ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ದೈಹಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ ಸ್ವಾತಂತ್ರೋತ್ಸವ ಆಚರಿಸಲು ಅನುಮತಿ ನೀಡಿದೆ. ಹಾಗೇನೆ ಅಂತಾರಾಜ್ಯ, ಅಂತರ್​ ಜಿಲ್ಲಾ ಓಡಾಟಕ್ಕೆ ಕೂಡಾ ಯಾವುದೇ ನಿರ್ಬಂಧ ಇಲ್ಲವೆಂದು ಸ್ಪಷ್ಟಪಡಿಸಿದೆ.

ಇನ್ನೂ ಕೊರೊನಾ ಎರಡನೇ ಅಲೆಯೇ ಮುಗಿದಿಲ್ಲ; ಮೂರನೇ ಅಲೆ ಬಗ್ಗೆ ಯೋಚಿಸುತ್ತಾ ಮೈಮರೆಯಬೇಡಿ: ತಜ್ಞರ ಅಭಿಪ್ರಾಯ

( due to Covid Curfew in bangalore no namma metro services during week end says bmrcl )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada